Advertisement

ಸಿಎಂಗಳ ಜತೆ ಪ್ರಧಾನಿ ವೀಡಿಯೋ ಕಾನ್ಫರೆನ್ಸ್‌

09:16 AM Apr 04, 2020 | Sriram |

ಹೊಸದಿಲ್ಲಿ: ಕೋವಿಡ್ 19 ನಿಯಂತ್ರಣ ವಿಚಾರದಲ್ಲಿ ಪ್ರಧಾನಿ ಮೋದಿ ಎಲ್ಲ ರಾಜ್ಯ ಗಳ ಸಿಎಂಗಳ ಜತೆ  ಗುರುವಾರ ವಿಡಿಯೋ ಕಾನ್ಫರೆನ್ಸ್‌ ಸಭೆ ನಡೆಸಿದ್ದಾರೆ. 14 ದಿನಗಳ ಲಾಕ್‌ಡೌನ್‌ ಬಳಿಕ ಜನತೆ ರಸ್ತೆಗಿಳಿಯದಂತೆ ನಿಯಂತ್ರಿಸುವುದು ದೊಡ್ಡ ಸವಾಲು. ಈ ಸವಾಲಿಗೆ ಪರಿಹಾರ ವಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಏಕರೂಪದ ಯೋಜನೆ ಹೊಂದಬೇಕು ಎಂದು ಮೋದಿ ಈ ಸಂದರ್ಭದಲ್ಲಿ ಸಲಹೆ ನೀಡಿದ್ದಾರೆ. ಇದೇ ವೇಳೆ ಸೋಂಕಿನ ಹಾಟ್‌ಸ್ಪಾಟ್‌ಗಳನ್ನು ಗುರುತಿಸಲು ಸಮರೋಪಾದಿ ಕಾರ್ಯಾಚರಣೆ, ಕೆಲವು ವಾರ ಪರೀಕ್ಷೆ, ರೋಗ ಪತ್ತೆ, ಐಸೋಲೇಷನ್‌, ಕ್ವಾರಂಟೈನ್‌ ಪ್ರಮುಖವಾಗಲಿ ಎಂಬ ಸಲಹೆ ನೀಡಿದ್ದಾರೆ.

Advertisement

ಪ್ರಧಾನಿ ಜತೆಗಿನ ಸಭೆಯ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾತನಾಡಿ, ಎ.14ರ ವರೆಗೆ ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದರ ಮೇಲೆ ಮುಂದಿನ ತೀರ್ಮಾನ ಇರಲಿದೆ. ಅನಂತರ ಕಾರ್ಯಪಡೆ ರಚಿಸಿ ಏನು ಮಾಡಬೇಕು ಎಂಬುದು ನಿರ್ಧರಿಸಲಾಗುವುದು ಎಂದಿದ್ದಾರೆ.

ಇಂದು ಮೋದಿ ಸಂದೇಶ
ಪ್ರಧಾನಿ ಮೋದಿ ಅವರು ಶುಕ್ರವಾರ ಬೆಳಗ್ಗೆ 9 ಗಂಟೆಗೆ ದೇಶದ ನಾಗರಿಕರ ಜತೆ ವಿಡಿಯೋ ಸಂದೇಶವೊಂದನ್ನು ಹಂಚಿಕೊಳ್ಳಲಿದ್ದಾರೆ. ಕೋವಿಡ್  19 ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ದೇಶದಲ್ಲಿ ಪ್ರಸ್ತುತ ಜಾರಿಗೊಳಿಸಿರುವ ಲಾಕ್‌ಡೌನ್‌ ಕುರಿತಂತೆ ಪ್ರಧಾನಿ ಈ ವೇಳೆ ಮಾತನಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next