ಬಾಲಿ: “ಕಳೆದ ಶತಮಾನದಲ್ಲಿ ಎರಡನೇ ಮಹಾಯುದ್ಧವು ಜಗತ್ತಿನಲ್ಲಿ ವಿನಾಶವನ್ನು ಉಂಟುಮಾಡಿತು. ಅದರ ನಂತರ, ಅಂದಿನ ನಾಯಕರು ಶಾಂತಿಯ ಹಾದಿಯನ್ನು ಹಿಡಿಯಲು ಗಂಭೀರ ಪ್ರಯತ್ನ ಮಾಡಿದರು. ಈಗ ಅದು ನಮ್ಮ ಸರದಿ,” ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಿ20 ಸಮ್ಮೇಳನದಲ್ಲಿ ಹೇಳಿದರು.
“ವಿಶ್ವದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಾಮೂಹಿಕ ಸಂಕಲ್ಪವನ್ನು ತೋರಿಸುವುದು ಈ ಸಮಯದ ಅಗತ್ಯವಾಗಿದೆ” ಎಂದು ಪ್ರಧಾನ ಮಂತ್ರಿ ಹೇಳಿದರು.
ಉಕ್ರೇನ್ ಯುದ್ಧದ ಜಾಗತಿಕ ಸವಾಲುಗಳು, ಹವಾಮಾನ ಬದಲಾವಣೆ ಮತ್ತು ಕೋವಿಡ್ ಸಾಂಕ್ರಾಮಿಕ ಮತ್ತು ಜಾಗತಿಕ ಪೂರೈಕೆ ಸರಪಳಿಗಳ ಮೇಲೆ ಅವುಗಳ ಪ್ರಭಾವವನ್ನು ಪ್ರಧಾನಿ ಒತ್ತಿ ಹೇಳಿದರು. “ಜಗತ್ತಿನಾದ್ಯಂತ ಅಗತ್ಯ ವಸ್ತುಗಳ ಬಿಕ್ಕಟ್ಟು, ಅಗತ್ಯ ವಸ್ತುಗಳ ಬಿಕ್ಕಟ್ಟಿದೆ. ಪ್ರತಿ ದೇಶದ ಬಡ ನಾಗರಿಕರ ಸವಾಲು ಹೆಚ್ಚು ಕಠಿಣವಾಗಿದೆ” ಎಂದು ಅವರು ಹೇಳಿದರು.
ಇದನ್ನೂ ಓದಿ: ಹೌಸ್ ಫುಲ್ ನೊಂದಿಗೆ 50ನೇ ದಿನದತ್ತ ‘ಕಾಂತಾರ’
ಜಾಗತಿಕ ಜಿಡಿಪಿ ಯ 85 ಪ್ರತಿಶತ ಮತ್ತು ಜಾಗತಿಕ ವ್ಯಾಪಾರದ 75 ಪ್ರತಿಶತವನ್ನು ಪ್ರತಿನಿಧಿಸುವ ಪ್ರಬಲ ಒಕ್ಕೂಟವಾದ ಜಿ20 ನ ಅಧ್ಯಕ್ಷ ಸ್ಥಾನವನ್ನು ಭಾರತವು ವಹಿಸಿಕೊಳ್ಳಲಿದೆ. ಅಲ್ಲದೆ ಮುಂದಿನ ವರ್ಷ ಶೃಂಗಸಭೆಯನ್ನು ಭಾರತವು ಆಯೋಜಿಸಲಿದೆ.
ಕೋವಿಡ್ ಸಮಯದಲ್ಲಿ ಭಾರತವು ತನ್ನ ನಾಗರಿಕರಿಗೆ ಮತ್ತು ಇತರ ಹಲವಾರು ದೇಶಗಳಿಗೆ ಆಹಾರ ಭದ್ರತೆಯನ್ನು ಹೇಗೆ ಖಾತ್ರಿಪಡಿಸಿದೆ ಎಂಬುದನ್ನು ಪಿಎಂ ಮೋದಿ ಒತ್ತಿ ಹೇಳಿದರು.