Advertisement

UP ಅಯೋಧ್ಯೆಯಲ್ಲಿ 32,000 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯ: ಸಿಎಂ ಯೋಗಿ

09:15 PM Jun 15, 2023 | Vishnudas Patil |

ಅಯೋಧ್ಯೆ : ಜನವರಿಯಲ್ಲಿ ನಡೆಯಲಿರುವ ರಾಮಮಂದಿರದಲ್ಲಿ ವಿಗ್ರಹ ಪ್ರತಿಷ್ಠಾಪನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುರುವಾರ ಹೇಳಿದ್ದಾರೆ.

Advertisement

ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ”ಅಯೋಧ್ಯೆಯಲ್ಲಿ ಈಗ 32,000 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳು ನಡೆಯುತ್ತಿವೆ ಮತ್ತು ದೇಶದ ಯಾವ ನಗರವೂ ಇಲ್ಲಿನ ಅಭಿವೃದ್ಧಿಯ ಪ್ರಮಾಣವನ್ನು ಹೊಂದಿಸಲು ಸಾಧ್ಯವಿಲ್ಲ. ಇಂದು ನಮ್ಮ ಅಯೋಧ್ಯೆ ವಿಶ್ವದ ಅತ್ಯಂತ ಐಷಾರಾಮಿ ನಗರವಾಗುತ್ತಿದೆ” ಎಂದರು.

”ಈಗ ಯಾರೂ ಅಯೋಧ್ಯೆಗೆ ಅನ್ಯಾಯ ಮಾಡಲು ಸಾಧ್ಯವಿಲ್ಲ.ಅಯೋಧ್ಯೆಯ ಹೆಮ್ಮೆ ಮತ್ತು ವೈಭವದೊಂದಿಗೆ ಆಟವಾಡಲು ಯಾರಿಗೂ ಅವಕಾಶ ನೀಡುವುದಿಲ್ಲ. ಅಯೋಧ್ಯೆಯನ್ನು ವಿಶ್ವದ ಅತ್ಯಂತ ಸುಂದರವಾದ ನಗರಗಳಲ್ಲಿ ಒಂದನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಲಾಗಿದೆ” ಎಂದು ಹೇಳಿದರು.

ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ 09 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಸುಮಾರು 2,000 ಕೋಟಿ ರೂ. ಮೊತ್ತದ ಜನಕಲ್ಯಾಣ ಯೋಜನೆಗಳ ಉದ್ಘಾಟನೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next