Advertisement

ಸಂಸತ್ ಕಲಾಪದ ಚರ್ಚೆ ಉತ್ತಮ ಉದ್ದೇಶದ ಈಡೇರಿಕೆಗೆ ನಾಂದಿಯಾಗಬೇಕು:ಸಂಸದರಿಗೆ ಪ್ರಧಾನಿ ಮೋದಿ

12:33 PM Jan 31, 2022 | Team Udayavani |

ನವದೆಹಲಿ: ಲೋಕಸಭಾ ಬಜೆಟ್ ಅಧಿವೇಶನದ ಕಲಾಪ ತುಂಬಾ ಮುಖ್ಯವಾಗಿದ್ದು, ಕಲಾಪವನ್ನು ಸುಗಮವಾಗಿ ನಡೆಯಲು ಅನುವು ಮಾಡಿಕೊಟ್ಟು, ಎಲ್ಲಾ ಸಂಸದರು ಚರ್ಚೆಯಲ್ಲಿ ಪಾಲ್ಗೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಜನವರಿ 31) ಮನವಿ ಮಾಡಿಕೊಂಡಿದ್ದಾರೆ.

Advertisement

ಇದನ್ನೂ ಓದಿ:ರಾಷ್ಟ್ರಪತಿಗಳ ಭಾಷಣ: ಪಕ್ಷಬೇಧವಿಲ್ಲದೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಸಂಸದರು

ಪಂಚ ರಾಜ್ಯಗಳ ಚುನಾವಣೆ ಸಂಸತ್ ನ ಚರ್ಚೆಯ ಮೇಲೆ ಪರಿಣಾಮ ಬೀರಬಾರದು. ಆದರೆ ಚುನಾವಣೆ ಆಯಾ ರಾಜ್ಯಗಳಲ್ಲಿ ನಡೆಯಲಿದೆ. ಸಂಸತ್ ನಲ್ಲಿ ಮುಕ್ತ ಚರ್ಚೆಯ ಅಗತ್ಯವಿದೆ. ಬಜೆಟ್ ಇಡೀ ವರ್ಷದ ಧ್ವನಿಯಾಗಿದ್ದು, ಇದು ತುಂಬಾ ಮುಖ್ಯವಾದದ್ದು ಎಂದು ಪ್ರಧಾನಿ ಮೋದಿ ಹೇಳಿದರು.

ಸಂಸತ್ ಕಲಾಪದಲ್ಲಿನ ಚರ್ಚೆಗಳು ಉತ್ತಮ ಉದ್ದೇಶದ ಈಡೇರಿಕೆಗೆ ನಾಂದಿಯಾಗಬೇಕು. ಈ ಕಲಾಪದಲ್ಲಿಯೂ ಚರ್ಚೆಗಳು, ಸಮಸ್ಯೆಗಳ ಕುರಿತ ಚರ್ಚೆ ಮುಕ್ತವಾಗಿ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷದ ಸಂಸದರು ಗುಣಮಟ್ಟದ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ವಿಶ್ವಾಸ ಇದ್ದಿರುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ.

ಮುಂಬರುವ ಲೋಕಸಭೆಯ ಬಜೆಟ್ ಅಧಿವೇಶನದಲ್ಲಿ ಪೆಗಾಸಸ್ ವಿಚಾರವನ್ನು ಪ್ರಸ್ತಾಪಿಸುವುದಾಗಿ ವಿರೋಧಪಕ್ಷಗಳು ಈಗಾಗಲೇ ಸ್ಪಷ್ಟಪಡಿಸಿವೆ. ಭಾರತೀಯ ಜನತಾ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರ ಇಸ್ರೇಲ್ ಜತೆಗೆ ಪೆಗಾಸಸ್ ಕುರಿತು ಒಪ್ಪಂದ ಮಾಡಿಕೊಂಡ ವಿಷಯ ಕಲಾಪದಲ್ಲಿ ಹೆಚ್ಚು ಪ್ರತಿಧ್ವನಿಸುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next