ಡೊಯ್ಯಲು ಸಿದ್ಧ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ಹೈಡ್ರಾಮಾ ಮಾಡುತ್ತಿದೆ ಎಂಬ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮಹದಾಯಿ ವಿಚಾರದಲ್ಲಿ ನನಗೆ ಪ್ರತಿಷ್ಠೆಯಿಲ್ಲ. ಸರ್ವಪಕ್ಷ ಸಭೆ ಕರೆಯಲು ಸಿದ್ಧ, ಮತ್ತೆ ಪ್ರಧಾನಿ ಬಳಿ ಹೋಗಲು ಸಹ ಸಿದ್ಧ. ಸಮಸ್ಯೆಗೆ ಪರಿಹಾರ ಸಿಗಬೇಕು. ರಾಜ್ಯ ಸರ್ಕಾರ ಏನೆಲ್ಲಾ ಮಾಡಬಹುದೋ ಅದನ್ನೆಲ್ಲಾ ಮಾಡಿದೆ. ಪ್ರಧಾನಿ ಮಧ್ಯಸ್ಥಿಕೆಯೊಂದೇ ಪರಿಹಾರ ಎಂದು ಪುನರುಚ್ಚರಿಸಿದರು.
Advertisement
ಮಹದಾಯಿ ವಿವಾದ ಬಗೆಹರಿಯಲು ಮೂರು ದಾರಿಗಳಿವೆ. ಒಂದು ಮೂರೂ ರಾಜ್ಯದ ಮುಖ್ಯಮಂತ್ರಿಗಳು ಮುಖಾಮುಖಿಕುಳಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು. ಮತ್ತೂಂದು ಪ್ರಧಾನಿ ಮಧ್ಯಸ್ಥಿಕೆ ವಹಿಸಿ ವಿವಾದ ಬಗೆಹರಿಸುವುದು. ಮೂರನೆಯದು, ನ್ಯಾಯಾಧೀಕ ರಣದ ಮೂಲಕ ನ್ಯಾಯ ಪಡೆಯುವುದು. ಆದರೆ, ಸರ್ಕಾರದ ಮಟ್ಟದಲ್ಲಿ ಆಗಬೇಕಿರುವ ಮಾತುಕತೆ ಬಿಟ್ಟು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದರೆ ಏನು ಪ್ರಯೋಜನ. ಈ ವಿಚಾರದಲ್ಲಿ ಡ್ರಾಮಾ ಆಡುತ್ತಿರುವುದು ಯಾರು? ಎಂದು ಪ್ರಶ್ನಿಸಿದರು.
ಪ್ರಸ್ತಾಪವಾದಾಗ ಕಾಂಗ್ರೆಸ್ ನಾಯಕರು ಯಾಕೆ ವಿರೋಧ ಮಾಡಲಿಲ್ಲ. ಆಗ ಯಾಕೆ ಸುಮ್ಮನಿದ್ದರು ಎಂದು ಶೆಟ್ಟರ್ ಪ್ರಶ್ನಿಸಿದರು.