ಹೊಸದಿಲ್ಲಿ:ಬಹುಕೋಟಿ ಮೌಲ್ಯದ ರಫೇಲ್ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮತ್ತೆ ಪ್ರಧಾನಿ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಹುಲ್ ಪ್ರಧಾನಿ ನೇರವಾಗಿ ರಫೇಲ್ ಹಗರಣದಲ್ಲಿ ಭಾಗಿಯಾಗಿದ್ದಾರೆ. ಯಾಕೆ ಈ ವಿಚಾರದಲ್ಲಿ ಮೌನ ತಾಳಿರುವುದು ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಅನಿಲ್ ಅಂಬಾನಿಗೆ 30 ಸಾವಿರ ಕೋಟಿ ರೂಪಾಯಿಯನ್ನು ಬಹುಮಾನ ವಾಗಿ ನೀಡಿದ್ದಾರೆ. ಅವರು ದೇಶದ ಚೌಕೀದಾರ್ ಅಲ್ಲ ಅಂಬಾನಿಯ ಚೌಕೀದಾರ್ ಎಂದರು.
ಫ್ರಾನ್ಸ್‌ನ ಸುದ್ದಿ ವೆಬ್‌ಸೈಟೊಂದು ಬಿಡುಗಡೆ ಮಾಡಿರುವ ರಫೇಲ್ ಕುರಿತ ಡಸಾಲ್ಟ್ ಎವಿಯೇಷನ್‌ನ ದಾಖಲೆಗಳನ್ನು ಉಲ್ಲೇಖ ಮಾಡಿ ತೀವ್ರ ವಾಗ್ಧಾಳಿ ನಡೆಸಿದರು.
ಯಾಕೆ ರಕ್ಷಣಾ ಸಚಿವರು ತಕ್ಷಣ ಫ್ರಾನ್ಸ್‌ಗೆ ತೆರಳಿದರು? ತುರ್ತು ಅಗತ್ಯವಿತ್ತೇ? ಎಂದು ಪ್ರಶ್ನಿಸಿದರು.
ಬುಧವಾರ ಸಂಜೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೂರು ದಿನಗಳ ಫ್ರಾನ್ಸ್ ಪ್ರವಾಸಕ್ಕೆ ತೆರಳಿದ್ದಾರೆ.