Advertisement

ಚೀನಾದಲ್ಲಿ ಮೋದಿ; ಜಿನ್‌ಪಿಂಗ್‌ ಜೊತೆ ಸಂಗೀತ ರಸಸಂಜೆ ; ವಿಡಿಯೋ 

10:47 AM Apr 28, 2018 | Team Udayavani |

ವುಹಾನ್‌ : ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಪ್ರವಾಸದಲ್ಲಿದ್ದು  ಉಭಯ ದೇಶಗಳ ನಡುವಿನ ಬಾಂಧವ್ಯದ ಕುರಿತು ಮಹತ್ವದ ಮಾತುಕತೆಗಳನ್ನೂ ನಡೆಸುತ್ತಿದ್ದಾರೆ. ಈ ನಡುವೆ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರೊಂದಿಗೆ ಸಂಗೀತ ಕಲಾವಿದರೊಂದಿಗೆ ಕೆಲ ಹೊತ್ತು ಕಳೆದು ಸಂಭ್ರಮಿಸಿದರು. ಪ್ರಧಾನಿ ಮೋದಿ ಕಲಾವಿದರ ಕೈ ಚಳಕಕ್ಕೆ ಮನಸೋತಿದ್ದಾರೆ. ವಿಡಿಯೋ ನೋಡಿ ..

Advertisement

ಸಂಗೀತ ರಸ ಸಂಜೆಯಲ್ಲಿ ಮೋದಿ ಮತ್ತು ಜಿನ್‌ಪಿಂಗ್‌ ಅವರು ಚೀನಾ ಕಲಾವಿದರು ಪ್ರಸ್ತುತ ಪಡಿಸಿದ 1882 ರ ರಿಷಿ ಕಪೂರ್‌ ಪೂನಮ್‌ ದಿಲ್ಹನ್‌ ಜೋಡಿಯ ಜನಪ್ರಿಯ ಬಾಲಿವುಡ್‌ ಚಿತ್ರ ಯೇ ವಾದಾ ರಹಾ ದ ತು ತು ಹೆ ವಹೀ.. ಹಾಡಿಗೆ ಮಾರು ಹೋದರು. 

ಉಭಯ ದೇಶಗಳ ಬಾಂಧವ್ಯ ವೃದ್ಧಿಗೆ ಪ್ರಧಾನಿ ಮೋದಿ  ಅವರು ಐದು ಅಂಶಗಳನ್ನು ಜಿನ್‌ಪಿಂಗ್‌ ಅವರ ಬಳಿ ಚರ್ಚಿಸಿದ್ದು, ‘ಸಾಮಾನ್ಯ ಚಿಂತನೆ, ಸಾಮಾನ್ಯ ಸಂಬಂಧಗಳು, ಸಾಮಾನ್ಯ ಸಹಕಾರ, ಸಾಮಾನ್ಯ ಆಕಾಂಕ್ಷೆಗಳು ಮತ್ತು ಸಾಮಾನ್ಯ ಕನಸುಗಳು ದೀರ್ಘಕಾಲೀನ ಸ್ನೇಹಕ್ಕಾಗಿ ಪ್ರೋತ್ಸಾಹಿಸುತ್ತವೆ’ ಎಂದಿರುವುದಾಗಿ  ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next