ಹೊಸದಿಲ್ಲಿ: ಕೋವಿಡ್ ಲಸಿಕೆಯ ದ್ವಿತೀಯ ಹಂತ ಇಂದಿನಿಂದ ಆರಂಭವಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಲಸಿಕೆ ಪಡೆದರು.
ಹೊಸದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಲಸಿಕೆ ಪಡೆದರು. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಅವರು, ‘ಏಮ್ಸ್ ನಲ್ಲಿ ನಾನು ಮೊದಲ ಬಾರಿಗೆ ಕೋವಿಡ್-19 ಲಸಿಕೆಯನ್ನು ತೆಗೆದುಕೊಂಡಿದ್ದೇನೆ. ಲಸಿಕೆಗೆ ಅರ್ಹರಾದ ಎಲ್ಲರೂ ಲಸಿಕೆ ಪಡೆದು ಭಾರತವನ್ನು ಕೋವಿಡ್ ಮುಕ್ತ ದೇಶವನ್ನಾಗಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ:ಕೋವಿಡ್ ಲಸಿಕೆ: ಸ್ವಯಂ ನೋಂದಣಿ ಹೇಗೆ? ಇಲ್ಲಿದೆ ವಿವರ
ಕೋವಿಡ್ ವಿರುದ್ಧದ ಜಾಗತಿಕ ಹೋರಾಟವನ್ನು ಬಲಪಡಿಸಲು ನಮ್ಮ ವೈದ್ಯರು ಮತ್ತು ವಿಜ್ಞಾನಿಗಳು ತ್ವರಿತ ಸಮಯದಲ್ಲಿ ಹೇಗೆ ಕೆಲಸ ಮಾಡಿದ್ದಾರೆ ಎಂಬುದು ಗಮನಾರ್ಹವಾಗಿದೆ. ಲಸಿಕೆಯನ್ನು ತೆಗೆದುಕೊಳ್ಳಲು ಅರ್ಹರಾದ ಎಲ್ಲರಿಗೂ ನಾನು ಮನವಿ ಮಾಡುತ್ತಿದ್ದೇನೆ. ಒಟ್ಟಾಗಿ, ಭಾರತವನ್ನು ಕೋವಿಡ್ ಮುಕ್ತವನ್ನಾಗಿ ಮಾಡೋಣ!’ ಎಂದು ಟ್ವೀಟ್ ಮಾಡಿದ್ದಾರೆ.
ಕೊರೊನಾ ಲಸಿಕೆಯ ದ್ವಿತೀಯ ಹಂತ ಮಾ. 1ರಿಂದ ಆರಂಭವಾಗಲಿದ್ದು, 60 ವರ್ಷ ಮೇಲ್ಪಟ್ಟವರು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ಕಾಯಿಲೆ ಪೀಡಿತರು ಪಡೆಯಬಹುದು. ನೋಂದಣಿಗಾಗಿ ಕೊ-ವಿನ್ 2.0 ಪೋರ್ಟಲ್ ಮಾ.1ರ ಬೆಳಗ್ಗೆ 9ರಿಂದ ತೆರೆದುಕೊಳ್ಳಲಿದೆ.
ಇದನ್ನೂ ಓದಿ: ಮಳೆ ಕೊಯ್ಲಿಗೆ ಮೋದಿ ಕರೆ : ಮನ್ ಕಿ ಬಾತ್‌ನಲ್ಲಿ 100 ದಿನಗಳ ಅಭಿಯಾನ ಘೋಷಣೆ