ಡೆಹ್ರಾಡೂನ್:- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 5 ರಂದು ಕೇದಾರನಾಥಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಬಳಿಕ 250 ಕೋಟಿ ರೂ. ಮೌಲ್ಯದ ಕೇದಾರಪುರಿ ಪುನರ್ ನಿರ್ಮಾಣ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. 30 ದಿನಗಳೊಳಗೆ ಇದು ಕೇದಾರಕ್ಕೆ ಅವರ ಎರಡನೇ ಭೇಟಿಯಾಗಿದೆ.
ಪ್ರಧಾನಮಂತ್ರಿ ಅವರು ಅಕ್ಟೋಬರ್ 7 ರಂದು ಋಷಿಕೇಶದಲ್ಲಿರುವ ಆಲ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಗೆ ಭೇಟಿ ನೀಡಿ ಅಲ್ಲಿ ಆಮ್ಲಜನಕ ಘಟಕವನ್ನು ಉದ್ಘಾಟಿಸಿದ್ದಾರೆ.
ಮುಂದಿನ ತಿಂಗಳು ಕೇದಾರನಾಥಕ್ಕೆ ಮೋದಿಯವರ ಭೇಟಿಯನ್ನು ಖಚಿತ ಪಡಿಸಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವುದರ ಜೊತೆಗೆ, ಆದಿ ಗುರು ಶಂಕರಾಚಾರ್ಯರ ಪುನರ್ನಿರ್ಮಿತ ಸಮಾಧಿ ಸೇರಿದಂತೆ 250 ಕೋಟಿ ಮೌಲ್ಯದ ಕೇದಾರಪುರಿ ಪುನರ್ನಿರ್ಮಾಣ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ;- ಜಯದೇವ ಜಂಗೀ ಕುಸ್ತಿ ಪಂದ್ಯಾವಳಿಗೆ ಚಾಲನೆ
150 ಕೋಟಿ ಮೌಲ್ಯದ ಎರಡನೇ ಹಂತದ ಕೇದಾರಪುರಿ ಪುನರ್ನಿರ್ಮಾಣ ಯೋಜನೆಗಳಿಗೆ ಅಂದೇ ಪ್ರಧಾನ ಮಂತ್ರಿಗಳು ಶಂಕುಸ್ಥಾಪನೆ ಮಾಡುವ ಸಾಧ್ಯತೆಯಿದೆ ಎಂದು ಧಾಮಿ ಹೇಳಿದರು.
2014ರ ನಂತರ ಕೇದಾರನಾಥ್‌ಗೆ ಪ್ರಧಾನ ಮಂತ್ರಿ ಹಲವು ಬಾರಿ ಬೇಟಿ ನೀಡಿದ್ದು, ಕೇದಾರಪುರಿ ಪುನರ್ ನಿರ್ಮಾಣ ಯೋಜನೆಗಳನ್ನು ಖುದ್ದಾಗಿ ಅವರೇ ಗಮನಿಸುತ್ತಿದ್ದಾರೆ.