Advertisement
ಸಿಂದಿಯಾ ರೊಮೇನಿಯಾ ಹಾಗೂ ಮಾಲ್ಡೋವಾಕ್ಕೆ ಆಗಮಿಸುವ ಭಾರತೀಯರನ್ನು ಸ್ವದೇಶಕ್ಕೆ ಕಳುಹಿಸುವ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ.
ಈ ನಡುವೆ, “ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಬಗ್ಗೆ ಅವರ ಕುಟುಂಬಸ್ಥರು ನೀಡುವ ಮಾಹಿತಿಗಳನ್ನು ಆಯಾ ಕ್ಷೇತ್ರಗಳ ಸಂಸದರು ವಿದೇಶಾಂಗ ಇಲಾಖೆಯೊಂದಿಗೆ ಹಂಚಿಕೊಳ್ಳಬೇಕು’ ಎಂದು ವಿದೇಶಾಂಗ ಸಚಿವ ಜೈಶಂಕರ್, ದೇಶದ ಎಲ್ಲಾ ಸಂಸದರಿಗೆ ಮನವಿ ಮಾಡಿದ್ದಾರೆ.
Related Articles
ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಕರೆತರುವುದಕ್ಕಾಗಿ ಸ್ಪೈಸ್ ಜೆಟ್ ವಿಮಾನ ಸಂಸ್ಥೆಯು, ತನ್ನದೊಂದು ವಿಮಾನವನ್ನು ಉಕ್ರೇನ್‌ನ ನೆರೆರಾಷ್ಟ್ರವಾದ ಸ್ಲೊವಾಕಿಯಾದ ಕೊಸೈಸ್ ನಗರಕ್ಕೆ ಕಳುಹಿಸಿದೆ.
Advertisement
182 ಭಾರತೀಯರು ಸ್ವದೇಶಕ್ಕೆ ಉಕ್ರೇನ್‌ನಲ್ಲಿದ್ದ 182 ಭಾರತೀಯರು ಹಾಗೂ ವಿದ್ಯಾರ್ಥಿಗಳನ್ನು ಹೊತ್ತ ಏರ್ ಇಂಡಿಯಾ ವಿಮಾನ, ಮಂಗಳವಾರ ಮುಂಬೈಗೆ ಬಂದಿಳಿಯಿತು. ಉಕ್ರೇನ್‌ನ ನೆರೆರಾಷ್ಟ್ರವಾದ ರೊಮೇನಿಯಾದ ಬುಕಾರೆಸ್ಟ್‌ನಲ್ಲಿ ಜಮಾಯಿಸಿದ್ದ ನಿರಾಶ್ರಿತರನ್ನು ತುಂಬಿಕೊಂಡು ಈ ವಿಮಾನ, ಸೋಮವಾರ ಹೊರಟಿತ್ತು.