Advertisement

ಬಿಜೆಪಿ 41ನೇ ಸ್ಥಾಪನಾ ದಿವಸ್ : ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಅಪಪ್ರಚಾರ : ಮೋದಿ

12:47 PM Apr 06, 2021 | Team Udayavani |

ನವ ದೆಹಲಿ : ಪಕ್ಷ ಯಾವಾಗಲೂ ರಾಷ್ಟ್ರಕ್ಕಾಗಿ ಕೆಲಸ ಮಾಡುತ್ತದೆ. ಪಕ್ಷದ ಸಿದ್ಧಾಂತವನ್ನು ಹೊರತಾಗಿ ಎಂದಿಗೂ ಬಿಜೆಪಿ ಇರಲಿಲ್ಲ. ಬಿಜೆಪಿಗೆ ರಾಷ್ಟ್ರವೇ ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಭಾರತೀಯ ಜನತಾ ಪಕ್ಷದ 41ನೇ ಸ್ಥಾಪನಾ ದಿವಸ್ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ನಮ್ಮ ಪಕ್ಷಕ್ಕೆ ರಾಷ್ಟ್ರ ಮುಖ್ಯ, ವ್ಯಕ್ತಿಗಿಂತ ರಾಷ್ಟ್ರವೇ ದೊಡ್ಡದು ಎಂದು ಅವರು ತಮ್ಮ ಪಕ್ಷದ ಮೂಲ ಮಂತ್ರ ‘ನೇಷನ್ ಫಸ್ಟ್’ ನನ್ನು ಪ್ರತಿಪಾದಿಸಿದ್ದಾರೆ.

ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಕಾಲದಿಂದ, ಇಂದಿನ ತನಕವೂ ಅದೇ ಮೂಲ ಧ್ಯೆಯದೊಂದಿಗೆ ಪಕ್ಷ  ಕಾರ್ಯ ನಿರ್ವಹಿಸುತ್ತಿದೆ ಎಂದರು.

ಓದಿ : ನಾಳೆ ‘ಪರೀಕ್ಷಾ ಪೆ ಚರ್ಚಾ’ : ಪರೀಕ್ಷೆಗಳು ಜೀವನದ ಕನಸುಗಳ ಅಂತ್ಯವಲ್ಲ : ಪ್ರಧಾನಿ ಮೋದಿ

ವಿರೋಧ ಪಕ್ಷಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ, ಕೇಂದ್ರದ ಸಾರ್ವಜನಿಕ ಕಲ್ಯಾಣ ನೀತಿಗಳು ಮತ್ತು ನಿರ್ಧಾರಗಳಿಗೆ ಸಂಬಂಧಿಸಿದಂತೆ ಗೊಂದಲವನ್ನು ಸೃಷ್ಟಿಸಲು ಮತ್ತು ನಾಗರಿಕರನ್ನು ದಾರಿ ತಪ್ಪಿಸಲು ವಿರೋಧ ಪಕ್ಷಗಳು ಪ್ರಯತ್ನಿಸುತ್ತಿವೆ. ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಅಪಪ್ರಚಾರ ಮಾಡುತ್ತಿವೆ ಎಂದು ಆಕ್ರೋಶ ಪಟ್ಟಿದ್ದಾರೆ.

Advertisement

ಸುಳ್ಳುಗಳನ್ನು ಎತ್ತಿ ಕಟ್ಟುವ ಪ್ರಯತ್ನವನ್ನು ಪ್ರತಿ ಪಕ್ಷಗಳು ಮಾಡುತ್ತಿವೆ. ಅದು ಕೃಷಿ ಕಾನೂನುಗಳು, ಸಿಎಎ ವಿಚಾರದಲ್ಲಿ ಸುಳ್ಳು ಸುದ್ದಿಗಳನ್ನು ಹರಡುವುದರ ಮೂಲಕ ರಾಜಕೀಯ ಅಸ್ಥಿರತೆಯನ್ನು ಸೃಷ್ಟಿಸುವ ಗುರಿಯನ್ನು ಪ್ರತಿಪಕ್ಷಗಳು ಹೊಂದಿವೆ. ಪೌರತ್ವ ಕಾಯ್ದೆಯ ವಿಚಾರದಲ್ಲಿಯೂ ಕೂಡ ಹಾಗೆಯೇ ಮಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಜನರಿಗೆ ಅರಿವು ಮೂಡಿಸುವ ಅಗತ್ಯವಿದೆ ”ಎಂದು ಅವರು ಹೇಳಿದ್ದಾರೆ.

ಚುನಾವಣೆಯ ವಿಚಾರದ ಬಗ್ಗೆ ವಿರೋಧ ಪಕ್ಷಗಳ ವಿರುದ್ಧ ಕಿಡಿ ಕಾರಿದ ಮೋದಿ, ಸಮೀಕ್ಷೆಗಳು ಬಿಜೆಪಿಯ ಪರ ಬಂದರೇ, ‘ಸಮೀಕ್ಷೆ ಗೆಲ್ಲುವ ಯಂತ್ರ’ ಎಂದು ಟೀಕೆ ಮಾಡಲಾಗುತ್ತದೆ. ಸಮೀಕ್ಷೆಗಳು ಅವರ ಪರ ಬಂದರೇ, ಅಲ್ಲಿ ದೊಡ್ಡ ಮಟ್ಟದಲ್ಲಿ ಮೆಚ್ಚುಗೆಯನ್ನು ಸೃಷ್ಟಿ ಮಾಡುತ್ತಾರೆ. ಯಾರು ನಮ್ಮನ್ನು ಸಮೀಕ್ಷೆಗಳನ್ನು ಗೆಲ್ಲುವ ಯಂತ್ರ ಎಂದು ಕರೆಯುತ್ತಾರೋ, ಅವರಿಗೆ ಭಾರತೀಯ ಸಂವಿಧಾನದ ಬಗ್ಗೆ ಅರಿವಿಲ್ಲ. ಆದರೆ ಸತ್ಯಾಂಶವೆಂದರೇ, ಬಿಜೆಪಿ ಸಮೀಕ್ಷೆಯನ್ನು ಗೆಲ್ಲುವ ಯಂತ್ರವಲ್ಲ. ಜನರೊಂದಿಗೆ ಸಂಪರ್ಕದಲ್ಲಿರುವ ಪಕ್ಷ ಎಂದು ಅವರು ಹೇಳಿದ್ದಾರೆ.

ಇನ್ನು, ಪಕ್ಷವನ್ನು ರೂಪಿಸುವಲ್ಲಿ ಮತ್ತು ವಿಸ್ತರಿಸುವಲ್ಲಿ ಪ್ರಮುಖರಾದ ಲಾಲ್ ಕೃಷ್ಣ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರ ಕೊಡುಗೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. 370ನೇ ವಿಧಿಯನ್ನು ರದ್ದುಪಡಿಸಿ ಮತ್ತು ಕಾಶ್ಮೀರಕ್ಕೆ ಸಾಂವಿಧಾನಿಕ ಹಕ್ಕನ್ನು ನೀಡುವ ಮೂಲಕ ನಮ್ಮ ಸರ್ಕಾರ ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಕಂಡ ಕನಸನ್ನು ಈಡೇರಿಸಿದೆ ಎಂದು ಅವರು ಹೇಳಿದ್ದಾರೆ.

ಓದಿ : ಪರ್ಯಾಯ ಸಾರಿಗೆ ಸೌಲಭ್ಯ‌ ಒದಗಿಸಲು ಸನ್ನದ್ಧ: ಬೆಳಗಾವಿ ಡಿಸಿ ಡಾ.ಕೆ.ಹರೀಶ್ ಕುಮಾರ್

Advertisement

Udayavani is now on Telegram. Click here to join our channel and stay updated with the latest news.

Next