Advertisement
ಸದ್ಯದಲ್ಲೇ ಪರೀಕ್ಷೆ ಎದುರಿಸಲಿರುವ 10ನೇ ಹಾಗೂ 12ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ದಿಲ್ಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ವಿಶೇಷ ಸಂವಾದದಲ್ಲಿ ಮೋದಿ ಅವರು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬುವ ಮಾತುಗಳನ್ನಾಡಿದರು.ವಿದ್ಯಾರ್ಥಿಗಳೊಂದಿಗಿನ ಈ ಸಂವಾದವೇ ನನ್ನ ಇಂದಿನ ಪರೀಕ್ಷೆ ಎನ್ನುತ್ತಲೇ ಮಾತು ಆರಂಭಿಸಿದ ಅವರು, ತಾವು ವಿದ್ಯಾರ್ಥಿಯಾಗಿದ್ದಾಗ ತಮ್ಮ ಮೇಲೆ ಪ್ರಭಾವ ಬೀರಿದ ಶಿಕ್ಷಕರನ್ನು ಸ್ಮರಿಸಿ, ತಮ್ಮಲ್ಲಿನ್ನೂ ಆ ವಿದ್ಯಾರ್ಥಿ ಜಾಗೃತವಾಗಿ ರುವಂತೆ ರೂಪಿಸಿದ ಅವರಿಗೆ ಧನ್ಯ ವಾದ ಅರ್ಪಿಸಿದರು. ಇದೇ ವೇಳೆ, ಅಂದು ಕೊಂಡಿದ್ದನ್ನು ಹೇಗೆ ಸಾಧಿಸ ಬೇಕೆಂದು ಸೂಕ್ತವಾಗಿ ನಿರ್ಧರಿಸುವ ಮಕ್ಕಳೇ ಹುಟ್ಟು ರಾಜಕಾರಣಿಗಳು ಎಂದು ಶ್ಲಾ ಸಿದರು.
ನಮ್ಮಲ್ಲಿ ಆತ್ಮವಿಶ್ವಾಸವಿಲ್ಲದಿದ್ದರೆ ನಮ್ಮ ಮೇಲಿನ ದೇವರ ಕೃಪೆ ನಿರರ್ಥಕವಾಗುತ್ತದೆೆ ಎಂದು ಸ್ವಾಮಿ ವಿವೇಕಾನಂದರು ತಿಳಿಸಿದ್ದಾರೆ. ಹಾಗಾಗಿ, ನಮ್ಮಲ್ಲಿ ಆತ್ಮಶಕ್ತಿ ಜಾಗೃತಗೊಳಿಸುವುದು ಅನಿವಾರ್ಯ.
Related Articles
Advertisement
ಐಕ್ಯು (ಬುದ್ಧಿಮತ್ತೆ) ಜತೆಗೆ ಇಕ್ಯು (ಭಾವುಕತೆ) ಸೇರಿದಾಗ ಮಾತ್ರ ಬದುಕು ಪರಿಪೂರ್ಣ. ಐಕ್ಯು ನಿಮ್ಮನ್ನು ಸಾಧನೆಯತ್ತ ಕೊಂಡೊಯ್ದರೆ, ಇಕ್ಯು ನಿಮ್ಮ ಜೀವನವನ್ನು ಸಮೃದ್ಧಗೊಳಿಸುತ್ತದೆ.ಏಕಾಗ್ರತೆ ಸಾಧಿಸುವ ಮುನ್ನ ಅನಾವಶ್ಯಕ ವಿಚಾರಗಳ ಕಡೆಗೆ ವೈರಾಗ್ಯ ಹೊಂದುವುದನ್ನು ಕಲಿಯಬೇಕು. ಅನ್ಯರು ಸವೆಸಿದ ಹಾದಿಯಲ್ಲೇ ನಡೆಯಲು ನಿರ್ಧರಿಸದೆ, ನಿಮ್ಮದೇ ಪ್ರತ್ಯೇಕ ಮಾರ್ಗ ಸೃಷ್ಟಿಸಲು ಮುಂದಾಗಿ.