Advertisement

ಗುರುವಾಯೂರಿನಲ್ಲಿ ಪ್ರಧಾನಿ;ಕಮಲಲೋಚನನೆದುರು ಕಮಲ ನಾಯಕನಿಗೆ ತುಲಾಭಾರ

10:00 AM Jun 09, 2019 | Team Udayavani |

ತ್ರಿಶೂರ್‌: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಇತಿಹಾಸ ಪ್ರಸಿದ್ದ ಗುರುವಾಯೂರು ಶ್ರೀಕೃಷ್ಣಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ , ತಾವರೆ ಹೂವುಗಳಿಂದ ತುಲಾಭಾರ ಸೇವೆ ಸಲ್ಲಿಸಿದರು.

Advertisement

ತಮಿಳುನಾಡಿನಿಂದ ತರಿಸಲಾಗಿದ್ದ ಕಮಲದ ಹೂವುಗಳಿಂದ ತುಲಾಭಾರ ಸೇವೆ ಸಲ್ಲಿಸಿದರು. ಬಳಿಕ ಕದಳಿ ಬಾಳೆ, ಹಾಲು ಪರಮಾನ್ನ , ತುಪ್ಪ ಮತ್ತು ಶೇಷ ವಸ್ತ್ರ ಸಮರ್ಪಿಸಿದರು.

ಮೋದಿ ಅವರೊಂದಿಗೆ ದೇವಸ್ವಂ ಮಂಡಳಿಯ ಸದಸ್ಯರು, ಕೇರಳದ ಪ್ರಮುಖ ಬಿಜೆಪಿ ಮುಖಂಡರು ದೇವಾಲಯಕ್ಕೆ ಆಗಮಿಸಿದ್ದರು.

Advertisement

ದೇವಾಲಯದಲ್ಲಿ ವ್ಯಾಪಕಭದ್ರತೆ ಕೈಗೊಳ್ಳಲಾಗಿದ್ದು, ಪ್ರಮುಖ ವ್ಯಕ್ತಿಗಳಿಗೆ ಮಾತ್ರ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಸಾವಿರಾರು ಮಂದಿ ದೇವಾಲಯದ ಹೊರಗೆ ನಿಂತು ಪ್ರಧಾನಿ ಮೋದಿ ಅವರ ಆಗಮನವನ್ನು ಕಾಯುತ್ತಿದ್ದರು.

ದೇವಾಲಯದಲ್ಲಿ ವಿಶೇಷ ಭದ್ರತಾ ಪಡೆಗಳು ಕಟ್ಟೆಚ್ಚರವಹಿಸಿದರೆ, ದೇವಾಲಯದ ಹೊರಗೆ ಪೊಲೀಸ್‌ ಸರ್ಪಗಾವಲು ಹಾಕಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next