Advertisement

ದಿವ್ಯಾಂಗರ ಸಾಧನೆ ದೇಶಕ್ಕೆ ಸ್ಫೂರ್ತಿ : ಮೋದಿ ಮನ್ ಕಿ ಬಾತ್ 

02:01 PM Sep 26, 2021 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ರೇಡಿಯೋದ ಜನಪ್ರಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದರು .

Advertisement

ಮೂರು ದಿನಗಳ ಅಮೆರಿಕಾ ಪ್ರವಾಸದಿಂದ ವಾಪಸಾದ ಅವರು,ಮನ್ ಕಿ ಬಾತ್ 81 ನೇ ಸಂಚಿಕೆಯಲ್ಲಿ ‘ವಿಶ್ವ ನದಿಗಳ ದಿನಾಚರಣೆ’ಯ ಬಗ್ಗೆ ಪ್ರಸ್ತಾವಿಸಿ ನದಿಗಳ ಮಹತ್ವದ ಕುರಿತು ಮಾತನಾಡಿದರು. ‘ನಮಾಮಿ ಗಂಗೆ ಯೋಜನೆ ಅದ್ಭುತ ಯಶಸ್ಸು ಕಾಣುತ್ತಿದೆ. ಜನರೂ ಉತ್ತಮ ಬೆಂಬಲ ನೀಡುತ್ತಿದ್ದಾರೆ.ಎಲ್ಲರ ಸಹಕಾರದಿಂದ ನಮ್ಮ ನದಿಗಳನ್ನು ಮಾಲಿನ್ಯ ರಹಿತವಾಗಿಸಬಹುದು’ ಎಂದರು.

ಸಿಯಾಚಿನ್ ಪರ್ವತಾರೋಹಣಗೈದು ವಿಶ್ವ ದಾಖಲೆ ಗೈದ 8 ಮಂದಿ ದಿವ್ಯಾಂಗ ಪ್ರತಿಭೆಗಳ ಸಾಧನೆಯನ್ನು ಕೊಂಡಾಡಿದ ಪ್ರಧಾನಿ ಮೋದಿ, ‘ಏನನ್ನೂ ಮಾಡಬಹುದು’, ‘ಏನನ್ನೂ ಸಂಕಲ್ಪಿಸಬಹುದು’ ಮತ್ತು ‘ಏನನ್ನೂ ಸಾಧಿಸಬಹುದು’ ಎನ್ನುವುದನ್ನು ನಮ್ಮ ದೇಶವಾಸಿಗಳು ತೋರಿಸಿಕೊಟ್ಟಿದ್ದಾರೆ .ನಮ್ಮ ದೇಶದ ಜನತೆಯಲ್ಲಿ ಹೊಸ ಉತ್ಸಾಹ ತುಂಬಿದ್ದಾರೆ. ಇದು ಎಲ್ಲರೂ ಹೆಮ್ಮೆ ಪಡುವಂತಹ ವಿಚಾರ. .ದಿವ್ಯಾಂಗ ರಿಗಾಗಿ ಸರಕಾರ ವಿಶೇಷ ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.

ಇತ್ತೀಚಿಗೆ ಎಂಟು ಮಂದಿ ವಿಶೇಷ ಸಾಮರ್ಥ್ಯವುಳ್ಳ ಪರ್ವತಾರೋಹಿಗಳ ತಂಡವು ಸೇನಾ ಪಡೆಗಳ ಸಹಕಾರ ಮತ್ತು ಸಲಹೆಯೊಂದಿಗೆ ಸಿಯಾಚಿನ್ ಹಿಮನದಿಯಲ್ಲಿ 15,632 ಅಡಿ ಎತ್ತರದ ಕುಮಾರ್ ಪೋಸ್ಟ್ ಅನ್ನು ತಲುಪಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ವಿಶ್ವ ದಾಖಲೆಯನ್ನು ಬರೆದಿದ್ದರು. ದಿವ್ಯಾಂಗರ ತಂಡವೊಂದು ವಿಶ್ವದ ಅತಿ ಎತ್ತರದ ಯುದ್ಧಭೂಮಿಯನ್ನು ಏರಿದ ಸಾಧನೆ ಇದೆ ಮೊದಲ ಬಾರಿಯದ್ದಾಗಿದೆ.

ಖಾದಿ ಉಡುಪುಗಳನ್ನು ಖರೀದಿಸಿ ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿಸಲು ಕರೆ ನೀಡಿದರು.

Advertisement

ಸ್ವಚ್ಛತೆಯನ್ನು ಹೆಚ್ಚು ಹೆಚ್ಚಾಗಿ ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಜನಾಂಗಕ್ಕೆ ಮಾದರಿಯಾಗಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next