Advertisement

ಬಿಹಾರ: ಹೆದ್ದಾರಿ, ಇಂಟರ್ನೆಟ್‌ ಯೋಜನೆಗೆ ಪ್ರಧಾನಿ ಚಾಲನೆ

07:04 PM Sep 26, 2020 | Nagendra Trasi |

ನವದೆಹಲಿ: ಬಿಹಾರದಲ್ಲಿ ಅಂದಾಜು 14,258 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಒಂಭತ್ತು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಪ್ರಧಾನಿ ನರೇಂದ್ರಮೋದಿಯವರು ಸೋಮವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು.

Advertisement

ಅದರ ಜೊತೆಗೆ, ಬಿಹಾರದ 45,945 ಹಳ್ಳಿಗಳ ಮನೆಗಳಿಗೆ ಇಂಟರ್ನೆಂಟ್‌ ಸೌಕರ್ಯ ನೀಡುವ ಉದ್ದೇಶದ ಫೈಬರ್‌ ಇಂಟರ್‌ನೆಟ್‌ ಯೋಜನೆಗೂ ಚಾಲನೆ ನೀಡಿದರು.ಈಸಂದರ್ಭದಲ್ಲಿ ಮಾತನಾಡಿದ ಅವರು, “”2014ರಲ್ಲಿ ತಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಹೆದ್ದಾರಿಗಳ ನಿರ್ಮಾಣ ವೇಗ ದುಪ್ಪಟ್ಟಾಗಿದ್ದು, ಅವುಗಳಿಗಾಗಿ ಮೀಸಲಿಡಲಾಗುತ್ತಿದ್ದ ಹಣ ಐದು ಪಟ್ಟು ಹೆಚ್ಚಾಗಿದೆ.

ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಮೂಲ ಸೌಕರ್ಯಾಭಿವೃದ್ಧಿಗೆ 110 ಲಕ್ಷ ಕೋಟಿ ರೂ.ಗ ಳನ್ನು ಮೀಸಲಿಡಲು ನಿರ್ಧರಿಸಿದ್ದು, ಅದರಲ್ಲಿ 19 ಲಕ್ಷ ಕೋಟಿ ರೂ.ಗ ಳನ್ನು ಹೆದ್ದಾರಿ ನಿರ್ಮಾಣಕ್ಕಾಗಿಯೇ ಬಳಸಲಾಗುತ್ತದೆ” ಎಂದರು.

ಕೇರಳದ 10 ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌
ತಿರುವನಂತಪುರಂ: ಬಂಗಾಳಕೊಲ್ಲಿಯ ಈಶಾನ್ಯ ಭಾಗದಲ್ಲಿ ಪುನಃ ವಾಯುಭಾರ ಕುಸಿತ ಉಂಟಾಗಿರುವ ಕಾರಣ, ಕೇರಳದಲ್ಲಿ ಮುಂದಿನ 2-3 ದಿನಗಳಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕೊಟ್ಟಾಯಂ, ಎರ್ನಾಕುಳಂ, ಇಡುಕ್ಕಿ, ತ್ರಿಶೂರ್‌, ಪಾಲ ಕ್ಕಾಡ್‌, ಮಲಪ್ಪುರಂ, ಕಲ್ಲಿಕೋಟೆ, ವಯನಾಡ್‌, ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

ಭಾನುವಾರ-ಸೋಮವಾರ ರಾಜ್ಯಾದ್ಯಂತ ಸರಾಸರಿ 7 ಸೆಂ.ಮೀ. ಮಳೆಯಾಗಿದೆ. ತಿರುವನಂತಪುರದಲ್ಲಿ ಒಬ್ಬರು ಹಾಗೂ ಕಾಸರಗೋಡಿನಲ್ಲಿ ಇಬ್ಬರು ಮಳೆ ಸಂಬಂಧಿತ ಅವ ಘಡದಲ್ಲಿ ಸಾವನ್ನಪ್ಪಿದ್ದಾರೆ. ಕಾಸರಗೋಡಿನಲ್ಲಿ ಎಂಟು ಮನೆಗಳುಕುಸಿದುಬಿದ್ದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಮಧ್ಯಪ್ರದೇಶದಲ್ಲೂ ವರ್ಷಧಾರೆ:ಮಧ್ಯಪ್ರದೇಶದಲ್ಲೂ  ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದ್ದು, ಸಿಯೋನಿ, ಮಾಂಡ್ಲಾ, ಬಾಲಾಘಾಟ್‌, ಜಿಲ್ಲೆಗ ‌ಳಲ್ಲಿ “ಆರೆಂಜ್‌ ಅಲರ್ಟ್‌’ ಘೋಷಿಸ ಲಾಗಿದೆ. ಜಬಲ್ಪುರ್ ಸೇರಿದಂತೆ ಏಳು ಜಿಲ್ಲೆ ಗಳಲ್ಲಿ “ಯೆಲ್ಲೋ ಅಲರ್ಟ್‌’ ಘೋಷಿಸಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next