Advertisement

ಅಳಿಲಿನ ರೀತಿ ದೇಶ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿ: ರಾಷ್ಟ್ರಪತಿ

07:40 AM Oct 01, 2017 | Team Udayavani |

ಹೊಸದಿಲ್ಲಿ: ವಿಜಯದಶಮಿ, ದಸರಾ ಪ್ರಯುಕ್ತ ಹೊಸದಿಲ್ಲಿಯ ಪರೇಡ್‌ ಮೈದಾನದಲ್ಲಿ ರಾವಣ, ಮೇಘನಾದ ಮತ್ತು ಕುಂಭಕರ್ಣರ ಪ್ರತಿಕೃತಿಗಳ ದಹನ ಕಾರ್ಯ ಶನಿವಾರ ಸಂಜೆ ನಡೆಯಿತು. ಈ ಕಾರ್ಯ ಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು , ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಡಾ| ಮನಮೋಹನ್‌ ಸಿಂಗ್‌ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. 

Advertisement

ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರಪತಿ ಕೋವಿಂದ್‌, “ವಾನರ ವೀರರು ಸಮುದ್ರಕ್ಕೆ ಸೇತುವೆ ಕಟ್ಟುವ ವೇಳೆ ಅಳಿಲು ಯಾವ ರೀತಿ ನೆರವಾಗುತ್ತಿತ್ತೋ ಅದೇ ರೀತಿ ನಾವೆಲ್ಲರೂ ರಾಷ್ಟ್ರ ನಿರ್ಮಾಣದಲ್ಲಿ ಕೈಜೋ ಡಿಸ ಬೇಕು’ ಎಂದು ಕರೆ ನೀಡಿದರು. ಉತ್ಸವ ಗಳು ಎಲ್ಲರನ್ನೂ ಒಗ್ಗೂಡಿಸುವ ಮಾಧ್ಯಮ ವಾಗಿದೆ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಮಾತನಾಡಿದ ಪ್ರಧಾನಿ ಮೋದಿ, “ರಾಮ ಮತ್ತು ಕೃಷ್ಣ ರ ಕಥೆಗಳು ಸಾವಿರಾರು ವರ್ಷಗಳ ಹಿಂದಿನದ್ದಾದರೂ ಅವುಗಳು ನಮ್ಮ ಸಮಾಜದ ಪ್ರಜ್ಞೆಯನ್ನು ವೃದ್ಧಿಸಲು ನೆರವಾಗುತ್ತವೆ’ ಎಂದು ಹೇಳಿದ್ದಾರೆ. ಕಳೆದ ವರ್ಷ ಪ್ರಧಾನಿ ಮೋದಿ ಲಕ್ನೋದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದಕ್ಕೂ ಮೊದಲು ರಾಷ್ಟ್ರಪತಿ ಸೇರಿದಂತೆ ಪ್ರಮುಖರು ರಾಮ, ಲಕ್ಷ್ಮಣ, ಹನುಮಂತ ವೇಷಧಾರಿಗಳಿಗೆ ತಿಲಕ ಇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next