ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮನ್ ಕಿ ಬಾತ್‌ನ 89 ನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಉತ್ತರಾಖಂಡದ ಕೇದಾರನಾಥದಲ್ಲಿನ ಕಸದ ರಾಶಿಗಳ ಬಗ್ಗೆ ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದರು.
“ಕೆಲವು ಯಾತ್ರಾರ್ಥಿಗಳು ಹರಡಿದ ಕಸದ ಬಗ್ಗೆ ಕೇದಾರನಾಥದ ಭಕ್ತರು ಅಸಮಾಧಾನಗೊಂಡಿದ್ದಾರೆ. ನಾವು ಪವಿತ್ರ ಯಾತ್ರೆಗೆ ಹೋಗಿ ಅಲ್ಲಿ ಕಸದ ರಾಶಿ ಕಾಣುವುದು ಸರಿಯಲ್ಲ,’’ ಎಂದು ಪ್ರಧಾನಿ ಮೋದಿ ಹೇಳಿದರು.
ತಮ್ಮ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸ್ವಸಹಾಯ ಗುಂಪುಗಳ ಬಗ್ಗೆ ತಿಳಿದುಕೊಳ್ಳಲು, ಅವರು ತಯಾರಿಸಿದ ಉತ್ಪನ್ನಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಮತ್ತು ಸಾಧ್ಯವಾದಷ್ಟು ಈ ಉತ್ಪನ್ನಗಳನ್ನು ಬಳಸುವಂತೆ ‘ಮನ್ ಕಿ ಬಾತ್’ ಪ್ರೇಕ್ಷಕರನ್ನು ಪ್ರಧಾನಿ ಮೋದಿ ಒತ್ತಾಯಿಸಿದರು.
ಇದನ್ನೂ ಓದಿ:ಮತ ಮಾರಾಟಕ್ಕಿಲ್ಲ ಎಂದು ಜನಸಂಕಲ್ಪ ಮಾಡಬೇಕು :ಗಣಪತಿ ಸಚ್ಚಿದಾನಂದ ಶ್ರೀ
ದೇಶದಲ್ಲಿ ಸ್ಟಾರ್ಟ್‌ಅಪ್‌ಗಳು ಮತ್ತು ಯುನಿಕಾರ್ನ್‌ಗಳ ಕುರಿತು ಮಾತನಾಡಿದ ಅವರು, ಮೇ 5 ರಂದು ಭಾರತದಲ್ಲಿ ಯುನಿಕಾರ್ನ್‌ಗಳ ಸಂಖ್ಯೆ 100 ಕ್ಕೆ ತಲುಪಿದೆ ಎಂದರು.
ತಮಿಳುನಾಡಿನ ತಂಜಾವೂರಿನಿಂದ ಮಹಿಳಾ ಸಬಲೀಕರಣದ ಸ್ಪೂರ್ತಿದಾಯಕ ಕಥೆಯನ್ನು ಪ್ರಧಾನಿ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹಂಚಿಕೊಂಡರು.