Advertisement

ಪ್ರಧಾನಿ ನರೇಂದ್ರ ಮೋದಿ ಯು ಟ್ಯೂಬ್‌ ಪಾಲೋವರ್ 1 ಕೋಟಿ

11:16 PM Feb 01, 2022 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಯು ಟ್ಯೂಬ್‌ ಫಾಲೋವರ್ ಸಂಖ್ಯೆ ಒಂದು ಕೋಟಿಯ ಗಡಿ ದಾಟಿದೆ. ಪ್ರಧಾನಿ ಮೋದಿ ಅವರು ವಿವಿಧ ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯರಾಗಿದ್ದು ವಿವಿಧ ಜಾಲತಾಣಗಳಲ್ಲಿ ಭಾರೀ ಸಂಖ್ಯೆಯ ಫಾಲೋವರ್ ಹೊಂದಿದ್ದಾರೆ.

Advertisement

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಯೂ ಟ್ಯೂಬ್‌ನಲ್ಲಿ 7 ಲಕ್ಷಕ್ಕೂ ಅಧಿಕ ಫಾಲೋವರ್ ಹೊಂದಿದ್ದರೆ ಬ್ರೆಜಿಲ್‌ ಅಧ್ಯಕ್ಷ ಜೈರ್‌ ಬೋಲ್ಸೊನಾರೋ 36 ಲಕ್ಷ, ಮೆಕ್ಸಿಕೋ ಅಧ್ಯಕ್ಷ ಆ್ಯಂಡ್ರೆಸ್‌ ಮಾನ್ಯುಯೆಲ್‌ ಲೋಪೆಜ್‌ ಒಬ್ರಡಾರ್‌ 30.7ಲಕ್ಷ, ಇಂಡೋನೇಶ್ಯಾ ಅಧ್ಯಕ್ಷ ಜೋಕೊ ವಿಡೂಡು 28.8ಲಕ್ಷ ಮತ್ತು ವೈಟ್‌ ಹೌಸ್‌ 19 ಲಕ್ಷ ಫಾಲೋವರ್ ಹೊಂದಿದ್ದಾರೆ.

ಭಾರತದ ನಾಯಕರ ಪೈಕಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ 5.25ಲಕ್ಷ, ಶಶಿ ತರೂರ್‌ 4.39ಲಕ್ಷ ಫಾಲೋವರ್ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next