Advertisement

ಇಂದು ಶುಕ್ರವಾರ ಸಂಜೆ ಮೋದಿ ಸಚಿವ ಸಂಪುಟದ ಮೊದಲ ಸಭೆ, ಖಾತೆ ಪ್ರಕಟ

10:47 AM Jun 01, 2019 | Sathish malya |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೂತನ ಸಚಿವ ಸಂಪುಟದ ಮೊದಲ ಸಭೆ ಇಂದು ಶುಕ್ರವಾರ ಸಂಜೆ ನಡೆಯಲಿದೆ.

Advertisement

ನಿನ್ನೆ ಗುರುವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದಿದ್ದ ಪ್ರಧಾನಿ ಮೋದಿ ಮತ್ತು ಅವರ ಸಂಪುಟ ಸದಸ್ಯರ ಅದ್ದೂರಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ 8,000 ಅತಿಥಿಗಳು ಭಾಗವಹಿಸಿದ್ದರು.

58 ಸದಸ್ಯರ ಮೋದಿ ಸಚಿವ ಸಂಪುಟದಲ್ಲಿ 20 ಮಂದಿ ಮೊದಲ ಬಾರಿಗೆ ಕೇಂದ್ರ ಸಚಿವರಾಗಿದ್ದಾರೆ. ಇವರಲ್ಲಿ ಬಿಜೆಪಿ ಮುಖ್ಯಸ್ಥ ಅಮಿತ್‌ ಶಾ, ಮಾಜಿ ವಿದೇಶ ಕಾರ್ಯದರ್ಶಿ ಎಸ್‌ ಜೈಶಂಕರ್‌, ಇಬ್ಬರು ಮಾಜಿ ಮುಖ್ಯಮಂತ್ರಿಗಳಾಗಿರುವ ರಮೇಶ್‌ ಪೋಖ್‌ರಿಯಾಲ್‌ ನಿಶಾಂಕ್‌ ಮತ್ತು ಅರ್ಜುನ್‌ ಮುಂಡಾ ಪ್ರಮುಖರಾಗಿದ್ದಾರೆ.

ಮೋದಿ ಸಂಪುಟದ ನೂತನ ಸಚಿವರ ಖಾತೆಗಳನ್ನು ಶೀಘ್ರವೇ ಪ್ರಕಟಿಸಲಾಗುವುದೆಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next