ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ. ಮುಂಗಾರು ಅಧಿವೇಶನದ ನಾಲ್ಕನೇ ದಿನದಂದು ಅವರು ವಿಪಕ್ಷಗಳ INDIA ಬಣದ ವಿರುದ್ಧ ಅವರು ವಾಗ್ದಾಳಿ ನಡೆಸಿದರು.
ಕೇವಲ ಇಂಡಿಯಾ ಶಬ್ದವನ್ನು ಬಳಸಿಕೊಂಡರೆ ಸಾಕಾಗುವುದಿಲ್ಲ, ಯಾಕೆಂದರೆ ಈಸ್ಟ್ ಇಂಡಿಯಾ ಕಂಪೆನಿ ಮತ್ತು ಇಂಡಿಯನ್ ಮುಜಾಹಿದ್ದೀನ್ ಹೆಸರಿನಲ್ಲಿಯೂ ‘ಇಂಡಿಯಾ’ ಇದೆ ಎಂದು ಅವರು ಹೇಳಿದರು.
ಇಂದು ಬೆಳಗ್ಗೆ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಮಣಿಪುರ ಸಮಸ್ಯೆಯಿಂದಾಗಿ ಸಂಸತ್ತಿನಲ್ಲಿ ನಡೆದ ಗದ್ದಲದ ಬಗ್ಗೆ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಅಂತಹ “ದಿಕ್ಕಿಲ್ಲದ ವಿರೋಧ” ವನ್ನು ನಾನು ಎಂದಿಗೂ ನೋಡಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ಏಕದಿನ ಸರಣಿಗೆ ವಿಂಡೀಸ್ ತಂಡ ಪ್ರಕಟ: ತಂಡಕ್ಕೆ ಮರಳಿದ ಹೆಟ್ಮೈರ್, ಒಶಾನೆ ಥೋಮಸ್
ಪ್ರತಿಪಕ್ಷಗಳು ಚದುರಿಹೋಗಿವೆ ಮತ್ತು ಹತಾಶವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಸಭೆಯಲ್ಲಿ ಹೇಳಿದರು. ಪ್ರತಿಪಕ್ಷಗಳ ಧೋರಣೆಯು ಅವರಿಗೆ ಹೆಚ್ಚು ಕಾಲ ಅಧಿಕಾರದಲ್ಲಿ ಇರಬೇಕೆಂಬ ಆಸೆ ಇಲ್ಲದಂತೆ ತೋರುತ್ತಿದೆ ಎಂದೂ ಪ್ರಧಾನಿ ಹೇಳಿದರು.
ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಪ್ರತಿಪಕ್ಷಗಳ ಸಭೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಎದುರಿಸಲು ರೂಪರೇಷೆ ರೂಪಿಸಲಾಗಿತ್ತು. ಅದರಲ್ಲಿ ತಮ್ಮ ಬಣವನ್ನು Indian National Developmental Inclusive Alliance (INDIA) ಎಂದು ವಿಪಕ್ಷಗಳು ಕರೆದಿದ್ದವು.