Advertisement

ಇಂಜಿನ್‌ ರಹಿತ ಟ್ರೈನ್‌ 18ಗೆ ಡಿ.29ರಂದು ಪ್ರಧಾನಿ ಹಸಿರು ನಿಶಾನೆ

12:00 PM Dec 20, 2018 | Team Udayavani |

ಹೊಸದಿಲ್ಲಿ : ಭಾರತದ ಮೊತ್ತ ಮೊದಲ ಟ್ರೈನ್‌ 18 ಇಂಜಿನ್‌ ರಹಿತ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಡಿ.29ರಂದು ಹಸಿರು ನಿಶಾನೆ ತೋರಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖೀಸಿ ಪಿಟಿಐ ವರದಿ ಮಾಡಿದೆ.

Advertisement

ಪ್ರಧಾನಿ ಮೋದಿ ಅವರು ತಮ್ಮ ವಾರಾಣಸಿ ಕ್ಷೇತ್ರದಿಂದಲೇ ಈ ಇಂಜಿನ್‌ ರಹಿತ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಈ ರೈಲು  ಹೊಸದಿಲ್ಲಿಯಿಂದ ಬೆಳಗ್ಗೆ 6 ಗಂಟೆಗೆ ಹೊರಟು ಮಧ್ಯಾಹ್ನ 2 ಗಂಟೆಗೆ ವಾರಾಣಸಿ ತಲುಪಲಿದೆ.

ಮರಳುವ ಪ್ರಯಾಣದಲ್ಲಿ ಈ ರೈಲು ಮಧ್ಯಾಹ್ನ 2.30ಕ್ಕೆ ವಾರಾಣಸಿಯಿಂದ ಹೊರಟು ಅದೇ ರಾತ್ರಿ 10.30ಕ್ಕೆ ರಾಜಧಾನಿ ದಿಲ್ಲಿಯನ್ನು ತಲುಪಲಿದೆ. 

ಟ್ರೈನ್‌ 18  ರೈಲಿನ ಪ್ರಯಾಣ ದರವು ತೇಜಸ್‌ ರೈಲಿನ ಪ್ರಯಾಣ ದರದ ಪ್ರಕಾರ ಇರಲಿದೆ. ಟ್ರೈನ್‌ 18 ಗೆ ಫ್ಲೆಕ್ವಿ ಫೇರ್‌ ಮೆಕ್ಯಾನಿಸಂ ಇರುವುದಿಲ್ಲ. ಶತಾಬ್ದಿ ರೈಲಿನ ಪ್ರಯಾಣ ದರಕ್ಕಿಂತ ಟ್ರೈನ್‌ 18 ದರ ಶೇ.20-20ರಷ್ಟು ಹೆಚ್ಚಿರಲಿದೆ. ಪ್ರಯಾಣಿಕರಿಗೆ ಊಟ ಸಹಿತ ಮತ್ತು ಊಟ ರಹಿತ ಎಂಬ ಎರಡು ಬಗೆಯ ದರ-ಆಯ್ಕೆ ಇರುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next