Advertisement
ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಬೆಂಗಳೂರಿನ ಹೆಗ್ಗುರುತಾಗುವುದರ ಜತೆಗೆ, ರಾಜ್ಯ ರಾಜಕೀಯಕ್ಕೂ ಹೊಸ ದಿಕ್ಕು ನೀಡುವ ಸಾಧ್ಯತೆ ಇದೆ. ಹಾಗೆಯೇ, ಕನಕಜಯಂತಿಯದೇ ರಾಜ್ಯಕ್ಕೆ ಆಗಮಿಸಲಿರುವ ಪ್ರಧಾನಿ, ಶಾಸಕರ ಭವನದ ಆವರಣದಲ್ಲಿನ ಕನಕದಾಸರ ಪ್ರತಿಮೆಗೆ ಪುಷ್ಪ ನಮನ ಹಾಗೂ ವಾಲ್ಮೀಕಿ ಪ್ರತಿಮೆಗೂ ಮಾಲಾರ್ಪಣೆ ಮಾಡುವರು. ಈ ಮೂಲಕ ಸಂಬಂಧಿಸಿದ ಸಮುದಾಯಗಳ ವಿಶ್ವಾಸಗಳಿಸಿ ಹೊಸ ರಾಜಕೀಯ ಸಂದೇಶವನ್ನೂ ನೀಡುವ ಸಾಧ್ಯತೆಯೂ ಇದೆ.
Related Articles
Advertisement
ವಂದೇ ಭಾರತ್ ರೈಲು:
ರೈಲು ನಿಲ್ದಾಣದಲ್ಲಿ ವಂದೇ ಭಾರತ್ – ಹೈಸ್ಪೀಡ್ ರೈಲಿನ ಉದ್ಘಾಟನೆಯೂ ನೆರವೇರಲಿದೆ. ಈ ರೈಲಿ ನಲ್ಲಿ ಬೆಂಗಳೂರು- ಮೈಸೂರು, ಚೆನ್ನೈ ಕಡೆ ಪ್ರಯಾಣಿಸಬಹುದು. ಅತೀ ಕಡಿಮೆ ಅವಧಿ ಯಲ್ಲಿ ಬೆಂಗಳೂರಿನಿಂದ ಮೈಸೂರನ್ನು ತಲುಪ ಬಹು ದು. ದೇಶದಲ್ಲಿ ಐದನೇ ರೈಲು ಹಾಗೂ ದಕ್ಷಿಣ ಭಾರತದಲ್ಲಿ ಮೊದಲ ಹೈಸ್ಪೀಡ್ ರೈಲು ಇದು. ಇದರಿಂದ ಆರ್ಥಿಕ ಬೆಳವಣಿಗೆಗೂ ಅನುಕೂಲವಾಗಲಿದೆ ಎಂದರು.
ಟರ್ಮಿನಲ್ -2 ಉದ್ಘಾಟನೆ :
ವಿಮಾನ ನಿಲ್ದಾಣಕ್ಕೆ ಆಗಮಿಸಿ ಪ್ರಧಾನಿ ಯವರು 2ನೇ ಟರ್ಮಿನಲ್ ಉದ್ಘಾಟಿಸುವರು. ಟರ್ಮಿನಲ್ -2 ಅಂತರರಾಷ್ಟ್ರೀಯ ಮತ್ತು ದೇಶೀಯ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸ ಲಿದೆ. ಸುಮಾರು 25 ಲಕ್ಷ ಪ್ರಯಾಣಿಕರ ಸಾಮರ್ಥ್ಯವನ್ನು ಟರ್ಮಿನಲ್ ಹೊಂದಿದೆ. ಈಗಿನದ್ದು 35 ಲಕ್ಷ ಸಾಮರ್ಥ್ಯ ವುಳ್ಳದ್ದಾಗಿದೆ. ಇವೆರಡೂ ಸೇರಿದರೆ ದಿಲ್ಲಿಯ ಅನಂತರದ 2ನೇ ಅತಿ ದೊಡ್ಡ ವಿಮಾನ ನಿಲ್ದಾಣ ವಾಗಲಿದೆ. ಅದರ ಉದ್ಘಾಟನೆಯ ನಂತರ ಪ್ರತಿಮೆ ಅನಾವರಣ ಮಾಡಿ ಸಾರ್ವಜನಿಕ ಸಭೆಗೆ ಪ್ರಧಾನಿ ತೆರಳುವರು ಎಂದು ವಿವರಿಸಿದರು.
ಬೆಳಗ್ಗೆ 10.00 : ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮನ
10.30: ಕನಕದಾಸ ಪ್ರತಿಮೆ ಮತ್ತು ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ
10.42: 1- ಮೆಜೆಸ್ಟಿಕ್‌ನಲ್ಲಿ “ವಂದೇ ಭಾರತ್’ ರೈಲಿಗೆ ಹಸುರು ನಿಶಾನೆ
2 – ಭಾರತ್ ಗೌರವ್ “ಕಾಶಿ ದರ್ಶನ್’ ರೈಲಿಗೆ ಹಸುರು ನಿಶಾನೆ
11.50: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಲೋಕಾರ್ಪಣೆ
12.10: ನಾಡಪ್ರಭು ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ. ಅಮೃ ತ್ 2.0 ಯೋಜನೆಗೆ ಚಾಲನೆ
12.50: ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವಿಕೆ
ನ.11ರ ಬೆಂಗಳೂರು ಪ್ರವಾಸಕ್ಕಾಗಿ ಎದುರು ನೋಡುತ್ತಿದ್ದೇನೆ. ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣದ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ವಿಮಾನ ನಿಲ್ದಾಣದ 2ನೇ ಟರ್ಮಿನಲ್, ವಂದೇ ಭಾರತ್ ಎಕ್ಸ್ ಪ್ರಸ್, ಭಾರತ್ ಗೌರವ್ ಕಾಶಿ ಯಾತ್ರೆ ರೈಲಿಗೆ ಹಸುರು ನಿಶಾನೆ ತೋರುತ್ತಿದ್ದೇನೆ. – ನರೇಂದ್ರ ಮೋದಿ, ಪ್ರಧಾನಿ