Advertisement

ಮಾರ್ಚ್‌ 3 ಭಾನುವಾರ ಪ್ರಧಾನಿ ಮೋದಿ ಅಮೇಠಿಗೆ ಭೇಟಿ

12:25 PM Mar 02, 2019 | udayavani editorial |

ಹೊಸದಿಲ್ಲಿ : 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಭಾನುವಾರ ಮಾರ್ಚ್‌ 3ರಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಲೋಕಸಭಾ ಕ್ಷೇತ್ರವಾಗಿರುವ ಅಮೇಠಿಗೆ ಭೇಟಿ ನೀಡಲಿದ್ದಾರೆ.

Advertisement

ಅಮೇಠಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿದ ಬಳಿಕ ಅವರು ಇಲ್ಲಿ ಹೊಸದಾಗಿ ತಲೆ ಎತ್ತಲಿರುವ ಕಲಾಶ್ನಿಕೋವ್‌ ರೈಫ‌ಲ್‌ ಉತ್ಪಾದನಾ ಫ್ಯಾಕ್ಟರಿಗೆ ಶಿಲಾನ್ಯಾಸ ಮಾಡಲಿದ್ದಾರೆ. 

ಪ್ರಧಾನಿ ಮೋದಿ ಅವರು ಕಳೆದ ವರ್ಷ ಡಿಸೆಂಬರ್‌ ನಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಲೋಕಸಭಾ ಕ್ಷೇತ್ರವಾಗಿರುವ ರಾಯ್‌ ಬರೇಲಿಗೆ ಭೇಟಿ ನೀಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next