Advertisement

BJP Founding Day; ಇಂದು 10 ಲಕ್ಷ ಕಡೆ ಮೋದಿ ಭಾಷಣ ನೇರ ಪ್ರಸಾರ

11:26 PM Apr 05, 2023 | Team Udayavani |

ನವದೆಹಲಿ:ಕೇಂದ್ರದಲ್ಲಿ ಆಡಳಿತದಲ್ಲಿ ಇರುವ ಬಿಜೆಪಿ ಗುರುವಾರ 42ನೇ ಸಂಸ್ಥಾಪನಾ ದಿನ ಆಚರಿಸಿಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Advertisement

ಅದನ್ನು ದೇಶದ 10 ಲಕ್ಷ ಕಡೆಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಇದರ ಜತೆಗೆ ದೇಶದ 10.72 ಲಕ್ಷ ಸ್ಥಳಗಳಲ್ಲಿ 2024ನೇ ಚುನಾವಣೆಯಲ್ಲಿ ಮತ್ತೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಬೇಕು ಎನ್ನುವ ಆಶಯದಿಂದ “ಏಕ್‌ ಬಾರ್‌ ಫಿರ್‌ ಸೆ ಮೋದಿ ಸರ್ಕಾರ್‌’ ಮತ್ತು “ಏಕ್‌ ಬಾರ್‌ ಫಿರ್‌ ಸೆ ಭಾಜಪ ಸರ್ಕಾರ್‌’ ಎಂಬ ಘೋಷ ವಾಕ್ಯಗಳನ್ನು ಬರೆಯಲು ತೀರ್ಮಾನಿಸಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯರ್ಶಿ ತರುಣ್‌ ಚೌಗ್‌ ಹೇಳಿದ್ದಾರೆ. 1980 ಏ.6ರಂದು ಬಿಜೆಪಿ ಸ್ಥಾಪನೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next