Advertisement

ಪರ್ಯಾಯ ಸಪ್ಲೈ ಸರಪಳಿಗಾಗಿ ಕರೆ; ಚೀನ ವಿರುದ್ಧ ಮೋದಿ ಪರೋಕ್ಷ ಸಮರ

12:03 AM Sep 29, 2020 | mahesh |

ಹೊಸದಿಲ್ಲಿ: ಜಾಗತಿಕ ಸಪ್ಲೈ ಚೈನ್‌ಗಳ ಮೇಲೆ ಅತಿಯಾದ ಅವಲಂಬನೆ ಸಲ್ಲದು ಎಂದು ಕೊರೊನಾ ವೈರಾಣು ಇಡೀ ಜಗತ್ತಿಗೆ ಪಾಠ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಸೋಮವಾರ ನಡೆದ ಭಾರತ-ಡೆನ್ಮಾರ್ಕ್‌ ವರ್ಚುವಲ್‌ ದ್ವಿಪಕ್ಷೀಯ ಸಭೆಯಲ್ಲಿ ಮಾತನಾಡಿದ ಅವರು, “”ದೊಡ್ಡ ಯಂತ್ರೋಪಕರಣದಿಂದ ಹಿಡಿದು ಅತ್ಯಗತ್ಯ ಬಳಕೆಯ ವಸ್ತುಗಳ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳು ಕೇವಲ ಒಂದು ದೇಶದಿಂದ ಮಾತ್ರ ಇಡೀ ಜಗತ್ತಿಗೆ ಸರಬರಾಜಾಗುತ್ತಿವೆ. ಇಂಥ ಏಕೈಕ ಸರಪಳಿ ಮೇಲೆ (ಸಪ್ಲೈ ಚೈನ್‌) ನಾವು ಅವಲಂಬಿತವಾದರೆ, ಭವಿಷ್ಯದಲ್ಲಿ ಅದು ಹಲವಾರು ಅನನುಕೂಲಗಳನ್ನು ಸೃಷ್ಟಿಸುತ್ತದೆ ಎಂಬುದನ್ನು ಕೋವಿಡ್ ನಮಗೆ ತೋರಿಸಿಕೊಟ್ಟಿದೆ. ಆದ್ದರಿಂದ ಭಾರತ, ಜಪಾನ್‌ ಮತ್ತು ಆಸ್ಟ್ರೇಲಿಯಾ ಕೈಜೋಡಿಸಿ ಹೊಸತೊಂದು ಸಪ್ಲೈ ಚೈನ್‌ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ನಮ್ಮಿ ಪ್ರಯತ್ನಕ್ಕೆ ಸಮಾನ ಮನಸ್ಕರು ಬಂದು ಕೈ ಜೋಡಿಸಬಹುದು” ಎಂದಿದ್ದಾರೆ.

ಸಮಾವೇಶದಲ್ಲಿ ಮಾತನಾಡಿದ್ದ ಡೆನ್ಮಾರ್ಕ್‌ ಪ್ರಧಾನಿ ಮೆಟ್ಟರ್‌ ಫ್ರೆಡ್ರಿಕ್‌ಸನ್‌ ಅವರು, 2ನೇ ಜ್ಞಾನ ಸಮ್ಮೇಳನ ಆಯೋಜಿಸುವಂತೆ ನೀಡಿದ ಸಲಹೆಯನ್ನು ಮೋದಿ ಸ್ವಾಗತಿಸಿದರು.

ಗಡಿಯಲ್ಲಿ ಬ್ರಹ್ಮೋಸ್‌, ನಿರ್ಭಯ್‌
ಭಾರತ-ಚೀನ ಗಡಿ ರೇಖೆಗೆ ಸಮೀಪವಿರುವ ತನ್ನ ಪ್ರಾಂತ್ಯಗಳಾದ ಟಿಬೆಟ್‌, ಕ್ಸಿನ್‌ಜಿಯಾಂಗ್‌ನಲ್ಲಿ ಸುಮಾರು 2,000 ಕಿ.ಮೀ. ದೂರದವರೆಗೆ ಸಾಗಬಲ್ಲ ಸಿಡಿಮದ್ದುಗಳನ್ನು ತಂದಿರಿಸಿದೆ. ಇದಕ್ಕೆ ಪ್ರತಿಯಾಗಿ ಭಾರತ ಕೂಡ, ಗಡಿ ರೇಖೆ ಬಳಿಯ ತನ್ನ ನೆಲದಲ್ಲಿ 500 ಕಿ.ಮೀ.ವರೆಗೆ ಸಾಗಬಲ್ಲ ಬ್ರಹ್ಮೋಸ್‌, 800 ಕಿ.ಮೀ.ವರೆಗೆ ಸಾಗಬಲ್ಲ ನಿರ್ಭಯ್‌ ಹಾಗೂ ಆಕಾಶ್‌ ಎಂಬ ಸಫೇìಸ್‌-ಟು-ಏರ್‌ ಕ್ಷಿಪಣಿಗಳನ್ನು ತಂದು ನಿಲ್ಲಿಸಿದೆ. ಯಾವುದೇ ಪ್ರಕ್ಷುಬ್ಧ ಪರಿಸ್ಥಿತಿ ಉದ್ಭವವಾದರೂ ತಕ್ಷಣವೇ ಅವುಗಳನ್ನು ಬಳಸುವಂತೆ ಅವುಗಳನ್ನು ಸನ್ನದ್ಧಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಚೀನ ಪಡೆ, ಅಕ್ಸಾಯ್‌ ಚಿನ್‌ ಪ್ರಾಂತ್ಯದಲ್ಲಿ ಮೊದಲು ತನ್ನ ಕ್ಷಿಪಣಿಗಳನ್ನು ನೆಲೆ ನಿಲ್ಲಿಸಿತ್ತು. ಈಗ ನೈಜ ಗಡಿ ರೇಖೆಯ 3,488 ಕಿ.ಮೀ. ಉದ್ದಕ್ಕೂ ಇರುವ ಚೀನ ವ್ಯಾಪ್ತಿಯೊಳಗಿನ ಕಶರ್‌, ಹೊಟಾನ್‌, ಲ್ಹಾಸಾ ಹಾಗೂ ನ್ಯಿಂಗ್‌ ಚಿ ಪ್ರಾಂತ್ಯದಲ್ಲೂ ಶಕ್ತಿಶಾಲಿ ಕ್ಷಿಪಣಿಗಳನ್ನು ತಂದಿರಿಸಿದೆ.

ಸೇನಾ ಔಟ್‌ಪೋಸ್ಟ್‌ ನಿರ್ಮಾಣ
ಮತ್ತೂಂದೆಡೆ, ದಕ್ಷಿಣ ಚೀನ ಸಮುದ್ರದಲ್ಲಿ ಡ್ರ್ಯಾಗನ್‌ ರಾಷ್ಟ್ರ, ಸೇನಾ ಗಡಿಠಾಣೆಗಳನ್ನು ನಿರ್ಮಿಸಲಾರಂಭಿಸಿದೆ ಎಂದು ಅಮೆರಿಕ ಆಪಾದಿಸಿದೆ. ಸಮುದ್ರದಲ್ಲಿ ಕೃತಕ ದ್ವೀಪಗಳನ್ನು ಸೃಷ್ಟಿಸಿ, ಅಲ್ಲಿ ತನ್ನ ಸೇನಾ ಔಟ್‌ಪೋಸ್ಟ್‌ಗಳನ್ನು ನಿರ್ಮಿಸಲು ಸಜ್ಜಾಗಿದೆ. ಬ್ರುನೈ, ಮಲೇಷ್ಯಾ, ಫಿಲಿಪ್ಪೀನ್ಸ್‌, ತೈವಾನ್‌ ಹಾಗೂ ವಿಯೆಟ್ನಾಂಗಳ ಕರಾವಳಿ ತೀರಗಳಿಗೆ ಈ ಕೃತಕ ದ್ವೀಪಗಳು ಸಮೀಪದಲ್ಲಿವೆ ಎಂದು ಅಮೆರಿಕ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next