Advertisement

Terrorism ವಿಚಾರದಲ್ಲಿ ದ್ವಂದ್ವ ನೀತಿ ಇರಬಾರದು: ಎಸ್ ಸಿಒ ಸಭೆಯಲ್ಲಿ ಪ್ರಧಾನಿ ಮೋದಿ

02:47 PM Jul 04, 2023 | Team Udayavani |

ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಶಾಂಘೈ ಸಹಕಾರ ಸಂಸ್ಥೆಯನ್ನು (SCO) ಭಾರತವು ವರ್ಚುವಲ್ ಆಗಿ ಆಯೋಜಿಸಿದೆ.

Advertisement

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾದ ನಾಯಕ ವ್ಲಾಡಿಮಿರ್ ಪುಟಿನ್ ಕೂಡ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಜೂನ್ ಅಂತ್ಯದಲ್ಲಿ ವ್ಯಾಗ್ನರ್ ಗುಂಪಿನಿಂದ ದಂಗೆಯ ಬಳಿಕ ಪುಟಿನ್ ಅವರು ಭಾಗವಹಿಸಿದ ಮೊದಲ ಅಂತಾರಾಷ್ಟ್ರೀಯ ಕಾರ್ಯಕ್ರಮವಾಗಿದೆ.

ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಎಸ್‌ ಸಿಒ ಯುರೇಷಿಯಾದ ಶಾಂತಿ, ಸಮೃದ್ಧಿ ಮತ್ತು ಅಭಿವೃದ್ಧಿಗೆ ಪ್ರಮುಖ ವೇದಿಕೆಯಾಗಿ ಹೊರಹೊಮ್ಮಿದೆ” ಎಂದು ಹೇಳಿದರು.

ಶಾಂಘೈ ಸಹಕಾರ ಸಂಸ್ಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗಡಿಯಾಚೆಗಿನ ಭಯೋತ್ಪಾದನೆಯನ್ನು ಟೀಕಿಸಿದರು. “ಭಯೋತ್ಪಾದನೆಗೆ ಹಣಕಾಸು ಸರಬರಾಜು ಆಗುವುದನ್ನು ನಿಲ್ಲಿಸಲು ದೇಶಗಳು ಸಹಕರಿಸಬೇಕು” ಎಂದು ಹೇಳಿದರು.

ಇದನ್ನೂ ಓದಿ:ಅನ್ಯ ಸಮುದಾಯದ ಯುವತಿ ಜೊತೆ ಮದುವೆ: ಬಹಿಷ್ಕಾರ ಹಾಕಿದ ತಿಗಳ ಸಮುದಾಯ ಮುಖಂಡರು

Advertisement

“ಭಯೋತ್ಪಾದನೆಯು ಪ್ರಾದೇಶಿಕ ಮತ್ತು ಜಾಗತಿಕ ಶಾಂತಿಗೆ ಬೆದರಿಕೆಯಾಗಿದೆ. ನಾವು ಭಯೋತ್ಪಾದನೆಯ ವಿರುದ್ಧ ಹೋರಾಡಬೇಕಾಗುತ್ತದೆ. ಕೆಲವು ದೇಶಗಳು ಗಡಿಯಾಚೆಗಿನ ಭಯೋತ್ಪಾದನೆಯನ್ನು ತಮ್ಮ ನೀತಿಗಳ ಸಾಧನವಾಗಿ ಬಳಸುತ್ತವೆ ಮತ್ತು ಭಯೋತ್ಪಾದಕರಿಗೆ ಆಶ್ರಯ ನೀಡುತ್ತವೆ. ಅಂತಹ ದೇಶಗಳನ್ನು ಟೀಕಿಸಲು ಎಸ್ ಸಿಒಹಿಂಜರಿಯಬಾರದು. ಎಸ್ ಸಿಒ ದೇಶಗಳು ಇದನ್ನು ಖಂಡಿಸಬೇಕು, ಭಯೋತ್ಪಾದನೆ ವಿಚಾರದಲ್ಲಿ ದ್ವಂದ್ವ ನೀತಿ ಇರಬಾರದು” ಎಂದು ಎಸ್‌ಸಿಒ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

ಇದೇ ಶೃಂಗ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನ ಮಂತ್ರಿ ಶೆಹಬಾಜ್ ಶರೀಫ್ ಕೂಡಾ ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next