ಅಹ್ಮದಾಬಾದ್ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಂಗಳವಾರ ಬೆಳಗ್ಗೆ ಸಾಬರಮತಿ ನದೀ ದಂಡೆಗೆ ಆಗಮಿಸಿ ಸೀಪ್ಲೇನ್ (ಸಮುದ್ರದ ಮೇಲೆ ಸಂಚರಿಸುವ ವಿಮಾನ) ಏರಿದರು. ಅಲ್ಲಿಂದ ಅವರು ಮೆಹಸಾನಾ ಜಿಲ್ಲೆಯ ಧರೋಯಿ ಡ್ಯಾಮ್ ಗೆ ತೆರಳಿದರು.
Advertisement#WATCH: Sea plane takes off from Sabarmati river with PM Modi onboard, to reach Dharoi Dam pic.twitter.com/DeHpQX7UvV
— ANI (@ANI) December 12, 2017
Related Articles
ಸೀ ಪ್ಲೇನ್ ನಿಂದ ಇಲ್ಲಿ ಇಳಿದ ಬಳಿಕ ಪ್ರಧಾನಿ ಮೋದಿ ಅವರು ರಸ್ತೆ ಮಾರ್ಗದ ಮೂಲಕ ಉತ್ತರ ಗುಜರಾತ್‌ನ ಪ್ರಸಿದ್ಧ ಅಂಬಾಜಿ ದೇವಸ್ಥಾನಕ್ಕೆ ಹೋಗುವರು. ಉತ್ತರ ಗುಜರಾತ್ ಇದೇ ಗುರುವಾರ 2ನೇ ಹಂತದ ಚುನಾವಣೆಗೆ ಒಳಪಡಲಿದೆ.
ಇದರೊಂದಿಗೆ ಪ್ರಧಾನಿ ಮೋದಿ ಅವರು ತಮ್ಮ ತಿಂಗಳ ಕಾಲದ ಗುಜರಾತ್ ಚುನಾವಣಾ ಪ್ರಚಾರ ಅಭಿಯಾನವನ್ನು ಮುಗಿಸುವರು.
ಮೋದಿ ಮತ್ತು ರಾಹುಲ್ ಗಾಂಧಿ ಅವರು ಇಂದು ನಡೆಸಲು ಬಯಸಿದ್ದ ರೋಡ್ ಶೋಗೆ ಈಗಾಗಲೇ ಕಾನೂನು ಮತ್ತು ಸುವ್ಯವಸ್ಥೆಗೆ ಎದುರಾಗುವ ಬೆದರಿಕೆಯ ಕಾರಣಕ್ಕೆ ಹಾಗೂ ಟ್ರಾಫಿಕ್ ಜಾಮ್ ಉಂಟಾಗುವ ಕಾರಣಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.