ಅಹಮದಾಬಾದ್: ಭಾರತ ಈ ಸಂದರ್ಭದಲ್ಲಿಯೂ ಬದಲಾಗದೇ ಇರಲು ಸಾಧ್ಯವಿಲ್ಲ. ನಾವೀಗ ಸ್ವಾವಲಂಬಿಯಾಗಬೇಕಾದ ಕಾಲ ಸಮೀಪಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ (ಏಪ್ರಿಲ್ 16) ಅಭಿಪ್ರಾಯವ್ಯಕ್ತಪಡಿಸಿದ್ದು, ದೇಶದ ಜನರು ಕೇವಲ ಸ್ಥಳೀಯವಾಗಿ ಉತ್ಪಾದಿಸಿದ ವಸ್ತುಗಳನ್ನ ಖರೀದಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಅಫ್ಘಾನ್ ನಲ್ಲಿ ಏರ್ ಸ್ಟ್ರೈಕ್ ನಡೆಸಿದ ಪಾಕಿಸ್ಥಾನ; ಮಕ್ಕಳು-ಮಹಿಳೆಯರು ಸೇರಿ 30 ಜನರ ಸಾವು!
“ಒಂದು ವೇಳೆ ಜನರು ಮುಂದಿನ 25 ವರ್ಷಗಳ ಕಾಲ ಸ್ಥಳೀಯ ವಸ್ತುಗಳನ್ನು ಬಳಕೆ ಮಾಡಿದಲ್ಲಿ, ನಂತರ ಭಾರತ ನಿರುದ್ಯೋಗ ಸಮಸ್ಯೆಯನ್ನು ಎದುರಿಸಬೇಕಾಗಿಲ್ಲ” ಎಂದು ಪ್ರಧಾನಿ ಭರವಸೆ ವ್ಯಕ್ತಪಡಿಸಿದ್ದಾರೆ.
ಶನಿವಾರ(ಏ.16) ಗುಜರಾತ್ ನ ಮೋರ್ಬಿಯಲ್ಲಿ 108 ಅಡಿ ಎತ್ತರದ ಆಂಜನೇಯ ಮೂರ್ತಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಅನಾವರಣಗೊಳಿಸಿದ ನಂತರ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ಈ ಸಂದರ್ಭದಲ್ಲಿಯೂ ಜಡವಾಗಿರಲು ಸಾಧ್ಯವಿಲ್ಲ. ನಾವು ಎಚ್ಚರದಲ್ಲಿರಲಿ ಅಥವಾ ನಿದ್ರಿಸುತ್ತಿರಲಿ. ನಾವು ಈ ಹಿಂದಿನಂತೆ ಮುಂದುವರಿಯಲು ಸಾಧ್ಯವಿಲ್ಲ. ಪ್ರಸ್ತುತ ಜಾಗತಿಕ ಸನ್ನಿವೇಶದಲ್ಲಿ ಇಡೀ ಪ್ರಪಂಚವೇ ನಾವು ಆತ್ಮನಿರ್ಭರರಾಗುವುದು (ಸ್ವಾವಲಂಬಿ) ಹೇಗೆ ಎಂಬ ಬಗ್ಗೆ ಆಲೋಚಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಸ್ಥಳೀಯ ವಸ್ತುಗಳನ್ನೇ ಖರೀದಿಸುವಂತೆ ದೇಶದ ಜನರಿಗೆ ಸಾಧು, ಸಂತರು ಮನವರಿಕೆ ಮಾಡಿಕೊಡಬೇಕು ಎಂದು ಈ ಮೂಲಕ ಮನವಿ ಮಾಡಿಕೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ನಮ್ಮ ಜನರೇ ತಯಾರಿಸಿದ ವಸ್ತುಗಳನ್ನು ಮಾತ್ರ ನಮ್ಮ ಮನೆಯಲ್ಲಿ ಉಪಯೋಗಿಸಬೇಕು. ಇದರಿಂದಾಗಿ ಭಾರೀ ಸಂಖ್ಯೆಯ ಜನರಿಗೆ ಉದ್ಯೋಗ ಸಿಕ್ಕಂತಾಗಲಿದೆ ಎಂದರು.