Advertisement

ಆರೋಗ್ಯ, ಧಾರ್ಮಿಕತೆ ನಡುವೆ ನಿಕಟ ಬಾಂಧವ್ಯ: ಪ್ರಧಾನಿ ಮೋದಿ

08:26 PM Aug 24, 2022 | Team Udayavani |

ಫ‌ರೀದಾಬಾದ್‌/ಮೊಹಾಲಿ: ದೇಶದಲ್ಲಿ ಆರೋಗ್ಯ ಮತ್ತು ಧಾರ್ಮಿಕ ವ್ಯವಸ್ಥೆ ನಡುವೆ ನಿಕಟ ಸಂಬಂಧ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಅದಕ್ಕೆ ಕೊರೊನಾ ಕಾಲದ ಸಂದರ್ಭವೇ ಸಾಕ್ಷಿ ಎಂದು ಹೇಳಿದ್ದಾರೆ. ಹರ್ಯಾಣದ ಫ‌ರೀಬಾದಾದ್‌ನಲ್ಲಿ ಮಾತಾ ಅಮೃತಾನಂದಮಯಿ ಮಠ ವತಿಯಿಂದ ಸ್ಥಾಪನೆಯಾಗಿರುವ 2,600 ಹಾಸಿಗೆಗಳ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿ ಅವರು, ಮಾತನಾಡಿದರು.

Advertisement

ತಂತ್ರಜ್ಞಾನ ಮತ್ತು ಆಧುನೀಕರಣ ಎಂಬ 2 ವಿಚಾರಗಳ ಮೂಲಕ ದೇಶದ ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಅವಕಾಶ ಇದೆ ಎಂದರು. ಕೊರೊನಾ ಹೆಚ್ಚಾಗಿದ್ದ ಅವಧಿಯಲ್ಲಿ ಖಾಸಗಿ ಮತ್ತು ಧಾರ್ಮಿಕ ಕ್ಷೇತ್ರದ ಸಹಭಾಗಿತ್ವದಲ್ಲಿ ಜಗತ್ತಿನಲ್ಲಿಯೇ ದೊಡ್ಡ ಪ್ರಮಾಣದ ಲಸಿಕೆ ನೀಡುವ ಅಭಿಯಾನವನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿದೆ ಎಂದರು ಪ್ರಧಾನಿ.

ಮಾತಾ ಅಮೃತಾನಂದ ಮಯಿ ಅವರು ಇಂಥ ದೊಡ್ಡ ಆಸ್ಪತ್ರೆ ನಿರ್ಮಿಸಿ ಮಹಾಯಾಗ ಮಾಡಿದ್ದಾರೆ. ಅವರಿಗೆ ಋಣಿಯಾಗಿದ್ದೇನೆ ಎಂದರು ಪ್ರಧಾನಿ. ಜತೆಗೆ ಹರ್ಯಾಣ ಸರ್ಕಾರದ ಸಾಧನೆಯನ್ನೂ ಕೊಂಡಾಡಿದರು.

ಆರು ವರ್ಷಗಳ ಅವಧಿಯಲ್ಲಿ ನಿರ್ಮಾಣಗೊಂಡಿರುವ ಈ ಆಸ್ಪತ್ರೆ ದೇಶದ ಅತ್ಯಂತ ದೊಡ್ಡ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದೆ. ಜತೆಗೆ ಅದರಲ್ಲಿ ಸಂಪೂರ್ಣ ಸ್ವಯಂಚಾಲಿತ ಪ್ರಯೋಗಶಾಲೆ ಕೂಡ ಇದೆ. ಪ್ರಧಾನಿ ನರೇಂದ್ರ ಮೋದಿ ಅವರ “ಜೈ ಅನುಸಂಧಾನ’ ಎಂಬ ಹೊಸ ಘೋಷ ವಾಕ್ಯದ ಅನ್ವಯ ಹೊಸ ಸಂಶೋಧನಾಲಯವೂ ಲೋಕಾರ್ಪಣೆಯಾಗಿದೆ. ಕೃತಕ ಬುದ್ಧಿಮತ್ತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅತ್ಯಾಧುನಿಕ ಸಂಶೋಧನೆಗಳನ್ನು ಕೈಗೊಳ್ಳಲು ಅನುಕೂಲವಾಗುವಂಥ ಸೌಲಭ್ಯವೂ ಅದರಲ್ಲಿ ಇದೆ.

ಕ್ಯಾನ್ಸರ್‌ ಆಸ್ಪತ್ರೆ ಉದ್ಘಾಟನೆ:
ಇದಕ್ಕೂ ಮೊದಲು ಪಂಜಾಬ್‌ನ ಮೊಹಾಲಿಯಲ್ಲಿ 300 ಹಾಸಿಗೆ ಸಾಮರ್ಥ್ಯದ ಹೋಮಿ ಭಾಭಾ ಕ್ಯಾನ್ಸರ್‌ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು ಪ್ರಧಾನಿ ಲೋಕಾರ್ಪಣೆ ಮಾಡಿದ್ದರು. 660 ಕೋಟಿ ರೂ. ವೆಚ್ಚದ ಈ ಆಸ್ಪತ್ರೆಯನ್ನು ಮುಂಬೈನ ಟಾಟಾ ಮೆಮೋರಿಯಲ್‌ ಸೆಂಟರ್‌ನ ನೆರವಿನೊಂದಿಗೆ ನಿರ್ಮಿಸಲಾಗಿದೆ.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯ. ರೋಗಗಳು ಬರದಂತೆ ತಡೆಯುವುದೇ ಅತ್ಯುತ್ತಮ ಮುನ್ನೆಚ್ಚರಿಕೆ. ಎಂಟು ವರ್ಷಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲಾಗಿದೆ. ದೇಶಾದ್ಯಂತ 1.50 ಲಕ್ಷ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು. ಮೊಹಾಲಿಯ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ ಚಿಕಿತ್ಸೆಗೆ ಬೇಕಾದ ಅತ್ಯಾಧುನಿಕ ಸೌಕರ್ಯಗಳಿವೆ

ಅಮೃತ ಆಸ್ಪತ್ರೆಯ ನೋಟ
130 ಎಕರೆ- ಆಸ್ಪತ್ರೆಯ ಕ್ಯಾಂಪಸ್‌
14- ಆಸ್ಪತ್ರೆ ಹೊಂದಿರುವ ಮಹಡಿಗಳು
07- ಸಂಶೋಧನಾ ವಿಭಾಗಕ್ಕೆ ಸೇರಿದ ಮಹಡಿಗಳು
06 ವರ್ಷ- ನಿರ್ಮಾಣಕ್ಕೆ ಬೇಕಾದ ಅವಧಿ
36 ಲಕ್ಷ ಚದರ ಅಡಿ- ಬಿಲ್ಟ್ಅಪ್‌ ಏರಿಯಾ
81 – ವಿಶೇಷ ವಿಭಾಗಗಳು

Advertisement

Udayavani is now on Telegram. Click here to join our channel and stay updated with the latest news.

Next