Advertisement

Plan; ಯಾರನ್ನೂ ಹೆದರಿಸಲು ಅಥವಾ ಹತ್ತಿಕ್ಕಲು ಉದ್ದೇಶಿಸಿಲ್ಲ: ಮೋದಿ ಮಹತ್ವದ ಸಂದರ್ಶನ

08:53 PM Apr 15, 2024 | Team Udayavani |

ಹೊಸದಿಲ್ಲಿ: ನಾನು ಚುನಾವಣ ಭಾಷಣಗಳಲ್ಲಿ ದೇಶಕ್ಕಾಗಿ ದೊಡ್ಡ ಯೋಜನೆಗಳನ್ನು ಹೊಂದಿದ್ದೇನೆ ಎಂದು ಹೇಳಿದಾಗ ಜನರು ಭಯಪಡುವ ಅಗತ್ಯವಿಲ್ಲ ಎಂದ ಪ್ರಧಾನಿ ಮೋದಿ, ಯಾರನ್ನೂ ಹೆದರಿಸಲು ಅಥವಾ ಹತ್ತಿಕ್ಕಲು ಉದ್ದೇಶಿಸಿಲ್ಲ, ಬದಲಿಗೆ 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಯೋಜನೆ ನಮ್ಮ ಮುಂದೆ ಇದೆ ಎಂದು ಹೇಳಿದ್ದಾರೆ.

Advertisement

ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಪ್ರಧಾನಿ “ನಾನು ದೊಡ್ಡ ಯೋಜನೆಗಳನ್ನು ಹೊಂದಿದ್ದೇನೆ ಎಂದು ಹೇಳಿದಾಗ ಯಾರೂ ಭಯಪಡಬೇಕಾಗಿಲ್ಲ, ನಾನು ಯಾರನ್ನೂ ಹೆದರಿಸುವ ಅಥವಾ ಓಡಿಸುವ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ, ನಾನು ದೇಶದ ಸಮಗ್ರ ಅಭಿವೃದ್ಧಿಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ. ನಾವು ಎಲ್ಲವನ್ನೂ ಮಾಡಿದ್ದೇವೆ ಎಂದು ಸರಕಾರಗಳು ಯಾವಾಗಲೂ ಹೇಳುತ್ತವೆ, ನಾನು ಎಲ್ಲವನ್ನೂ ಸರಿಯಾದ ದಿಕ್ಕಿನಲ್ಲಿ ಮಾಡಲು ಪ್ರಯತ್ನಿಸಿದೆ ಎಂದು ನಾನು ನಂಬುವುದಿಲ್ಲ, ಆದರೆ ನಾನು ಮಾಡಬೇಕಾದದ್ದು ತುಂಬಾ ಇದೆ ಎಂದರು.

ಮಹತ್ವಾಕಾಂಕ್ಷೆಯ “2047 ವಿಕಸಿತ್ ಭಾರತ್” ಯೋಜನೆಗಾಗಿ ತಮ್ಮ ಯೋಜನೆಗಾಗಿ ಕಳೆದ ಎರಡು ವರ್ಷಗಳಿಂದ ಕೆಲಸಗಳು ನಡೆಯುತ್ತಿವೆ. ದೇಶಾದ್ಯಂತ ಜನರಿಂದ ಅಭಿಪ್ರಾಯ ಮತ್ತು ಸಲಹೆಗಳನ್ನು ಕೇಳಲಾಗಿದೆ. ಮುಂಬರುವ 25 ವರ್ಷಗಳಲ್ಲಿ ಭಾರತವನ್ನು ಹೇಗೆ ನೋಡಬೇಕೆಂದು ನಾನು 15 ಲಕ್ಷಕ್ಕೂ ಹೆಚ್ಚು ಜನರಿಂದ ಸಲಹೆಗಳನ್ನು ತೆಗೆದುಕೊಂಡಿದ್ದೇನೆ ಎಂದು ಹೇಳಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶದ ಮತದಾರರು “ವಿಫಲ ಕಾಂಗ್ರೆಸ್ ಮಾದರಿ” ಮತ್ತು ಕಳೆದ 10 ವರ್ಷಗಳಲ್ಲಿ ತನ್ನ ಸಾಧನೆ ತೋರಿದ ಬಿಜೆಪಿ ಮಾದರಿಯ ನಡುವೆ ಆಯ್ಕೆ ಮಾಡುತ್ತಾರೆ.2024ರ ಚುನಾವಣೆಯನ್ನು ಗಮನಿಸಿದರೆ, ದೇಶದ ಮುಂದೆ ಒಂದು ಅವಕಾಶವಿದೆ-ಕಾಂಗ್ರೆಸ್ ಸರಕಾರ ಮತ್ತು ಬಿಜೆಪಿ ಸರಕಾರದ ಮಾದರಿ ಇದೆ. ಅವರು 5-6 ದಶಕಗಳಿಂದ ಕೆಲಸ ಮಾಡಿದ್ದಾರೆ ಮತ್ತು ನಾನು 10 ವರ್ಷ ಮಾತ್ರ ಕೆಲಸ ಮಾಡಿದ್ದೇನೆ. ಯಾವುದೇ ಕ್ಷೇತ್ರದಲ್ಲಿ ಇವುಗಳನ್ನು ಹೋಲಿಕೆ ಮಾಡಿ. ಕೆಲವು ನ್ಯೂನತೆಗಳಿದ್ದರೂ, ನಮ್ಮ ಪ್ರಯತ್ನಗಳಲ್ಲಿ ಯಾವುದೇ ಕೊರತೆ ಇಲ್ಲ”ಎಂದು ಪ್ರಧಾನಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next