Advertisement

Vijayapura; ವಿಕಸಿತ ಭಾರತಕ್ಕೆ ವಿಶ್ವನಾಯಕ ಮೋದಿ ನಾಯಕತ್ವ ಅನಿವಾರ್ಯ: ಸಿ.ಟಿ.ರವಿ

02:52 PM Apr 16, 2024 | Team Udayavani |

ವಿಜಯಪುರ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭಾರತ ಜಾಗತಿಕ ಮಟ್ಟದ ಮುಂಚೂಣಿ ರಾಷ್ಟ್ರಗಳ ಸಾಲಿನಲ್ಲಿದೆ. ಆಸ್ಟ್ರೇಲಿಯಾ, ಇಸ್ರೇಲ್ ಸೇರಿದಂತೆ ಜಗತ್ತಿನ ರಾಷ್ಟ್ರಗಳ ನಾಯಕರು ಹೊಗಳುವ ಮಟ್ಟಕ್ಕೆ ಪ್ರಧಾನಿ ಮೋದಿ ವಿಶ್ವನಾಯಕರಾಗಿ ಹೊರಹೊಮ್ಮಿದ್ದಾರೆ. ಭವಿಷ್ಯದ ಭಾರತಕ್ಕೆ ಮೋದಿ ನಾಯಕತ್ವ ಅನಿವಾರ್ಯವಾಗಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.

Advertisement

ಮಂಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸೌದಿ ರಾಷ್ಟ್ರದ ನೆಲದಲ್ಲಿ ದೇವಸ್ಥಾನ ಕಟ್ಟುವಲ್ಲಿ ಮೋದಿ ಜನಪ್ರಿಯತೆ ಕಾರಣವಾಗಿದೆ. ವಿಕಸಿತ ಭಾರತಕ್ಕಾಗಿ ಮೋದಿ ಗ್ಯಾರಂಟಿ ನೀಡಲಾಗಿದೆ ಎಂದರು.

ಕೇಂದ್ರದಿಂದ ಒಂದು ರೂಪಾಯಿ ಕೊಟ್ಟರೆ ಅದು ಜನರಿಗೆ ಸರಿಯಾಗಿ ತಲುಪುತ್ತಿರಲಿಲ್ಲ ಎಂದು ರಾಜೀವ ಗಾಂಧಿ ಹೇಳಿದ್ದರು. ಆದರೆ ಹಣ ತಿನ್ನುವ ಕಳ್ಳರಿದ್ದಾರೆ ಎಂದು ಹೇಳಿದರೂ ಯಾರೆಂದು ನಿಖರವಾಗಿ ಹೇಳಿರಲಿಲ್ಲ. ಆಗೆಲ್ಲ ದೇಶದ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿ ಇರುತ್ತಿತ್ತು.

2014ಕ್ಕೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಹಗರಣಗಳ ಸರಮಾಲೆಯಿಂದ ಸುದ್ದಿಯಾಗಿದ್ದರೆ, ಮೋದಿ ಸರ್ಕಾರದಲ್ಲಿ ಯೋಜನೆಗಳು ಸದ್ದು ಮಾಡುತ್ತಿವೆ. ಹೀಗಾಗಿ ಮುನ್ನ ನಮ್ಮ ಪ್ರಣಾಳಿಕೆಯಲ್ಲಿ ನೋದಿ ಗ್ಯಾರಂಟಿ ಘೋಷಿಸಲಾಗಿದೆ. ಪ್ರಾಣ ಹೋದರು ಹಿಡಿದ ಕೆಲಸ ಬಿಡುವುದಿಲ್ಲ ಎನ್ನುವುದೇ ಮೋದಿ ಗ್ಯಾರಂಟಿ ಎಂದು ವ್ಯಾಖ್ಯಾನಿಸಿದರು.

ನರೇಂದ್ರ ಮೋದಿ ಅವರು ಕಳೆದ ಹತ್ತು ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿಯನ್ನು ಜನರ ಮುಂದೆ ಇಟ್ಟಿದ್ದೇವೆ. ಸಬ್ ಕಾ ಸಾತ್ ಸಬ್ ಕಾ ವಿಕಾಸ್ ನೀತಿಯಲ್ಲಿ ಭಾರತ ಅಭಿವೃದ್ಧಿ ಸಾಧಿಸಿದ್ದು, ಜಾಗತಿಕ ಮಟ್ಟದಲ್ಲಿ ಆರ್ಥಿಕ ಅಭಿವೃದ್ಧಿ ಸಾಧಿಸಲು ಮೋದಿ ಗ್ಯಾರಂಟಿಯೇ ಕಾರಣ ಎಂದರು.

Advertisement

ಎಲೆಕ್ಟ್ರೋಲ್ ಬಾಂಡ್ ಮೂಲಕ ದೇಶದಲ್ಲಿ ಅಕೌಂಟೇಬಲಿಟಿ ಮಾಡಲಾಗಿದೆ. ರಾಜಕೀಯ ಪಕ್ಷಗಳಿಗೆ ಈ ಹಿಂದೆ ನೀಡುತ್ತಿದ್ದ ದೇಣಿಗೆಯನ್ನೂ ನರೇಂದ್ರ ಮೋದಿ ಅವರು ಬಾಂಡ್ ಮೂಲಕ ಬಹಿರಂಗ ಮಾಡಿದ್ದಾರೆ. ಹೀಗಾಗಿ ಬಿಜೆಪಿ ಅಪಾರ ಪ್ರಮಾಣದಲ್ಲಿ ಹಣ ಪಡೆದಿದೆ ಎಂಬ ವಾದದಲ್ಲಿ ಹುರುಳಿಲ್ಲ ಎಂದರು.

ಭ್ರಷ್ಟಾಚಾರ ಹೆಚ್ಚಳ ಮಾಡಿದ್ದು ಕಾಂಗ್ರೆಸ್ ಸಾಧನೆ ಎಂದು ವಾಗ್ದಾಳಿ ನಡೆಸಿದ ಸಿ.ಟಿ.ರವಿ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಒಂದೂ ಹೊಸ ಯೋಜನೆಗಳಿಗೆ ಹಣ ನೀಡಿಲ್ಲ. ಅತೃಪ್ತರನ್ನು ಸಂತೃಪ್ತಿಗೊಳಿಸಲು 54 ಜನರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಿದ್ದಾರೆ ಎಂದು ಸಿಟಿ ರವಿ ಹೇಳಿದರು.

11 ಚುನಾವಣೆಯಲ್ಲಿ ಜಿಗಜಿಣಗಿ ಗೆಲುವು ಸಾಧಿಸುವ ಮೂಲಕ ದಾಖಲೆ ಮಾಡಿರುವ ರಮೇಶ ಜಿಗಜಿಣಗಿ ಈ ಬಾರಿಯೂ ಗೆಲುವು ಸಾಧಿಸುವಲ್ಲಿ ಕಾರ್ಯಕರ್ತರ ಪರಿಶ್ರಮ ಕಾರಣವಾಗಲಿದೆ. ದೇಶದಲ್ಲಿ ಮೋದಿ ಅಲೆ ಬೀಸುತ್ತಿದ್ದು, ದೇಶಕ್ಕೆ ಮೋದಿ, ವಿಜಯಪುರಕ್ಕೆ ಜಿಗಜಿಣಗಿ ಎಂದ ಸಿ.ಟಿ.ರವಿ, ಕಾರ್ಯಕರ್ತರ ಬಲ ವಿಜಯಪುರ ಲೋಕಸಭಾ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next