Advertisement
ಇದೇ ಸಂದರ್ಭದಲ್ಲಿ ಪ್ರಧಾನಿಯವರ ಜೀವನ-ಸಾಧನೆಯ ಕಿರುಚಿತ್ರ ಪ್ರದರ್ಶಿ ಸಲಾಗಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಧಾನಿ “ಪ್ರಶಸ್ತಿ ಮೊತ್ತ 2 ಲಕ್ಷ ಅಮೆರಿಕನ್ ಡಾಲರ್ ಅನ್ನು ಗಂಗಾ ಶುದ್ಧೀಕರಣ ಯೋಜನೆಗೆ ನೀಡುತ್ತೇನೆ. ಈ ಗೌರವ ಭಾರತೀಯರಿಗೆ ಸಲ್ಲುತ್ತದೆ’ ಎಂದಿದ್ದಾರೆ. 1990ರಲ್ಲಿ ಸ್ಥಾಪನೆಯಾದ ಈ ಪ್ರಶಸ್ತಿ ಸ್ವೀಕರಿಸು ವವರಲ್ಲಿ ಭಾರತದ ಪ್ರಧಾನಿ 14ನೇಯವರು.
ಪ್ರಶಸ್ತಿ ಸ್ವೀಕಾರ ಕಾರ್ಯಕ್ರಮಕ್ಕೆ ಮೊದಲು ಪ್ರಧಾನಿ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್-ಜೆ-ಇನ್ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಮಾಧ್ಯಮ, ಮೂಲ ಸೌಕರ್ಯ ಅಭಿವೃದ್ಧಿ, ಸ್ಟಾರ್ಟಪ್, ಅಂತಾರಾಷ್ಟ್ರೀಯ ಅಪರಾಧ ನಿಯಂತ್ರಣಕ್ಕೆ ಸಹಕಾರ ಸೇರಿದಂತೆ ಆರು ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿದರು. ಕ್ರಿಸ್ತಶಕ 48ನೇ ಶತಮಾನದಲ್ಲಿ ಅಯೋಧ್ಯೆಯಿಂದ ಕೊರಿಯಾಕ್ಕೆ ತೆರಳಿದ್ದ ರಾಜ ಕಿಂಗ್- ಸುರೋನನ್ನು ವಿವಾಹವಾದ ರಾಣಿ ಹರ್ ಹ್ವಾಂಗ್ ಒಕೆ ಹೆಸರಲ್ಲಿ ಅಂಚೆ ಚೀಟಿ ಹೊರಡಿಸುವ ಬಗ್ಗೆಯೂ ಒಪ್ಪಂದ ಮಾಡಿಕೊಳ್ಳಲಾಗಿದೆ. ಜತೆಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಧ್ಯಕ್ಷರ ಅಧಿಕೃತ ನಿವಾಸ “ಬ್ಲೂ ಹೌಸ್’ನಲ್ಲಿ ಸಾಂಪ್ರದಾಯಿಕ ಸ್ವಾಗತವನ್ನೂ ನೀಡಲಾಗಿದೆ.