Advertisement

ನಾಳೆಯಿಂದ ಪಿಎಂ ಮೋದಿ ರ‍್ಯಾಲಿ ಶುರು

11:39 PM Mar 26, 2019 | Team Udayavani |

ಹೊಸದಿಲ್ಲಿ: “ಲೋಕ’ ಸಮರದ ದಿನ ಸಮೀಪಿಸುತ್ತಿರುವಂತೆಯೇ ದೇಶಾದ್ಯಂತ ರಾಜಕೀಯ ಚಟುವಟಿಕೆಗಳು ರಂಗೇರತೊಡಗಿವೆ. ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ರ್ಯಾಲಿ ನಡೆಸದ ಪ್ರಧಾನಿ ನರೇಂದ್ರ ಮೋದಿ ಗುರುವಾರದಿಂದ ತಮ್ಮ ಪ್ರಚಾರದ ಭರಾಟೆಗೆ ಚಾಲನೆ ನೀಡಲಿದ್ದಾರೆ. ಮೋದಿ ಹಾಗೂ ಅಮಿತ್‌ ಶಾ ಜೋಡಿ ದೇಶಾದ್ಯಂತ 150 ರ‍್ಯಾಲಿಗಳನ್ನು ನಡೆಸಲು ಮುಂದಾಗಿದೆ.

Advertisement

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಈಗಾಗಲೇ ವಿವಿಧ ರಾಜ್ಯಗಳಲ್ಲಿ ಚುನಾವಣ ರ‍್ಯಾಲಿ ನಡೆಸಲಾರಂಭಿಸಿದ್ದಾರೆ. ಉತ್ತರಪ್ರದೇಶದ ಉಸ್ತುವಾರಿ ಹೊತ್ತಿರುವ ಪ್ರಿಯಾಂಕಾ ವಾದ್ರಾ ಅವರು ಇತ್ತೀಚೆಗೆ ಒಂದು ಸುತ್ತಿನ ಪ್ರಚಾರ ಮುಗಿಸಿದ್ದು, ಬುಧವಾರದಿಂದ ಮತ್ತೂಂದು ಸುತ್ತಿನ ಪ್ರಚಾರಕ್ಕೆ ಕಾಲಿಡಲಿದ್ದಾರೆ.

ಮಾ.28ರಂದು ಮೀರತ್‌ನಲ್ಲಿ ನಡೆಯುವ ರ‍್ಯಾಲಿ ಮೂಲಕ ಮೋದಿ ಪ್ರಚಾರ ಆರಂಭವಾಗಲಿದೆ. ಅದೇ ದಿನ ಉತ್ತರಪ್ರದೇಶದ ರುದ್ರಪುರ ಮತ್ತು ಜಮ್ಮು-ಕಾಶ್ಮೀರದ ಜಮ್ಮುವಿನಲ್ಲೂ ರ‍್ಯಾಲಿ ನಡೆಸಲಿದ್ದಾರೆ. ಶುಕ್ರವಾರ ಆಂಧ್ರ ಪ್ರದೇಶ, ಒಡಿಶಾ ಮತ್ತು ತೆಲಂಗಾಣದಲ್ಲಿ ಪ್ರಚಾರ ನಡೆಯಲಿದೆ. ಅವರು ರ್ಯಾಲಿ ನಡೆಸಲಿರುವ ಎಲ್ಲ ಕ್ಷೇತ್ರ ಗಳೂ ಎ.11ರ ಮೊದಲ ಹಂತದ ಮತದಾನ ಎದು ರಿಸು ತ್ತಿರುವಂಥ ಕ್ಷೇತ್ರಗಳೇ ಆಗಿರಲಿವೆ. ಮಾ.30, ಎ.3ರಂದು ಅಸ್ಸಾಂ ಮತ್ತು ಪಶ್ಚಿಮ ಬಂಗಾಲದಲ್ಲಿ ತಲಾ 2 ರ್ಯಾಲಿ ನಡೆಸ ಲಿದ್ದಾರೆ. ಮಾ.31ರಂದು ಇಟಾನಗರದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡ ಬಳಿಕ, ತಮ್ಮ ಮೈ ಭಿ ಚೌಕಿದಾರ ಅಭಿಯಾನದೊಂದಿಗೆ ಕೈಜೋಡಿಸಿರುವ ಜನರೊಂದಿಗೆ ವೀಡಿಯೋ ಸಂವಾದವನ್ನೂ ನಡೆಸಲಿದ್ದಾರೆ.

ಚುನಾವಣೆ ದಿನಾಂಕ ಘೋಷಣೆಗೆ ಮುನ್ನ ಮೋದಿ ಹಲವು ರ್ಯಾಲಿ, ಕಾರ್ಯಕರ್ತರೊಂದಿಗೆ ವೀಡಿಯೋ ಸಂವಾದಗಳು, ಕಾಮಗಾರಿಗಳ ಚಾಲನೆ ಯಂಥ ಕಾರ್ಯ ಕ್ರಮಗಳಲ್ಲಿ ಭಾಗವಹಿಸಿದ್ದರು. ಆದರೆ ಮುಹೂರ್ತ ನಿಗದಿಯಾದ ಬಳಿಕ ಯಾವುದೇ ರ್ಯಾಲಿ ನಡೆಸಿರಲಿಲ್ಲ.

ವಿಜಯ ಸಂಕಲ್ಪ ಸಭೆ
ಬಿಜೆಪಿ ಕಳೆದ ರವಿವಾರವೇ 200 ಪ್ರದೇಶಗಳಲ್ಲಿ ವಿಜಯ ಸಂಕಲ್ಪ ಸಭೆ ನಡೆಸುವ ಮೂಲಕ ಪ್ರಚಾರ ಆರಂಭಿಸಿದೆ. ಆದರೆ ಪ್ರಧಾನಿ ಮೋದಿ ಅದರ ಭಾಗವಾಗಿರಲಿಲ್ಲ. ಮಂಗಳವಾರವೂ ಸುಮಾರು 250 ಪ್ರದೇಶಗಳಲ್ಲಿ ಬಿಜೆಪಿಯಿಂದ ಇಂಥ ಸಭೆ ನಡೆದಿದೆ.

Advertisement

ಇಂದು ಅಯೋಧ್ಯೆಗೆ ಪ್ರಿಯಾಂಕಾ
ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರೂ ಬಿರುಸಿನ ಚಟುವಟಿಕೆಯಲ್ಲಿ ತೊಡಗಿದ್ದು, ಬುಧವಾರದಿಂದ ಎರಡನೇ ಸುತ್ತಿನ ಪ್ರಚಾರ ಶುರು ಮಾಡಲಿದ್ದಾರೆ. ಈ ವೇಳೆ, ಅಯೋಧ್ಯೆ, ಅಮೇಠಿ, ರಾಯ್‌ಬರೇಲಿ ಮತ್ತು ಫೈಜಾಬಾದ್‌ಗೆ ಭೇಟಿ ನೀಡಲಿದ್ದಾರೆ. ಮಂಗಳವಾರ ರಾತ್ರಿಯೇ ದಿಲ್ಲಿಯಿಂದ ಫೈಜಾಬಾದ್‌ಗೆ ಕೈಫಿಯತ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸಿ, ಬುಧವಾರ ಬೆಳಗ್ಗೆ 10 ಗಂಟೆಗೆ ಅಯೋಧ್ಯೆಯ 2 ಕಡೆ ಸಾರ್ವಜನಿಕ ಸಭೆ ನಡೆಸಲಿದ್ದಾರೆ.

ಜಮ್ಮು ರ‍್ಯಾಲಿಗೆ 2 ಲಕ್ಷ ಮಂದಿ ನಿರೀಕ್ಷೆ
ಮಾ.28ರಂದು ಜಮ್ಮು - ಕಾಶ್ಮೀರದ ಅಕೂ°ರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ರ್ಯಾಲಿ ನಡೆಯಲಿದ್ದು, 2 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ರವೀಂದರ್‌ ರೈನಾ ಮಂಗಳವಾರ ತಿಳಿಸಿದ್ದಾರೆ. ಜಮ್ಮುವಿನಲ್ಲಿ ಚುನಾವಣ ಪ್ರಚಾರಕ್ಕೆ ಪ್ರಧಾನಿ ಮೋದಿ ಅವರು ಗುರುವಾರ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ.

ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿ
ಕೋರ್ಟ್‌ಗೆ ದಾಖಲೆಗಳನ್ನು ಸಲ್ಲಿಸಿ ಮರ್ಯಾದಾ ಪುರುಷೋತ್ತಮ ಇದ್ದ ಬಗ್ಗೆ ಸಾಕ್ಷ್ಯಗಳಿಲ್ಲ ಎಂದು ಹೇಳಿದ್ದ ಪಕ್ಷದ ನಾಯಕಿ ಈಗ ರಾಮನ ಭಕ್ತೆಯಾಗಲು ಹೊರಟಿದ್ದಾರೆ.
– ಸ್ಮೃತಿ ಇರಾನಿ, ಕೇಂದ್ರ ಜವುಳಿ ಸಚಿವೆ

Advertisement

Udayavani is now on Telegram. Click here to join our channel and stay updated with the latest news.

Next