Advertisement
ಎಲ್ಲದಕ್ಕಿಂತ ಮುಖ್ಯವಾಗಿ ಜೂ.21ರಂದು ನಡೆಯುವ ವಿಶ್ವ ಯೋಗ ದಿನಾಚರಣೆಯಲ್ಲಿ ಮೋದಿ ನ್ಯೂಯಾರ್ಕ್‌ಗೆ ತೆರಳುವ ಸಾಧ್ಯತೆಯಿದೆ. ಅನಂತರ ಅವರು ವಾಷಿಂಗ್ಟನ್ ಡಿಸಿಯಲ್ಲಿ ಬೈಡೆನ್‌ರನ್ನು ಭೇಟಿ ಮಾಡಲಿದ್ದಾರೆ.
ಹಾಲಿ ತಿಂಗಳು, ಜೂನ್ ತಿಂಗಳಲ್ಲೇ ಇಬ್ಬರೂ 4 ಬಾರಿ ಭೇಟಿಯಾಗಲಿದ್ದಾರೆ. ಮೇ 19ರಿಂದ 21ರ ನಡುವೆ ಜಪಾನಿನ ಹಿರೋಷಿಮದಲ್ಲಿ ಜಿ7 ನಾಯಕರ ಸಭೆಯಿದೆ. ಅದರಲ್ಲಿ ಪಾಲ್ಗೊಳ್ಳಲು ಮೋದಿಗೂ ಆಹ್ವಾನವಿದೆ. ಆಸ್ಟ್ರೇಲಿಯದ ಸಿಡ್ನಿಯಲ್ಲಿ ಕ್ವಾಡ್ ರಾಷ್ಟ್ರಗಳ ಸಮಾವೇಶದಲ್ಲಿ, ಮೇ 22ರಂದು ಪಪುವಾ ನ್ಯೂಗಿನಿಯಾದಲ್ಲಿ ನಡೆಯಲಿರುವ ಪೆಸಿಫಿಕ್ ದ್ವೀಪ ರಾಷ್ಟ್ರಗಳ ಸಮ್ಮೇಳನದಲ್ಲೂ ಬೈಡೆನ್‌ರನ್ನು ಭೇಟಿಯಾಗಲಿದ್ದಾರೆ.