ಕನ್ಯಾಕುಮಾರಿ: ಕನ್ಯಾಕುಮಾರಿಯ(Kanyakumari) ವಿವೇಕಾನಂದ ಶಿಲಾ ಸ್ಮಾರಕದಲ್ಲಿ ಗುರುವಾರ ಸಂಜೆಯಿಂದ 45 ತಾಸುಗಳ ಸುದೀರ್ಘ ಧ್ಯಾನ ಆರಂಭಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ಮೇ 31) ಬೆಳಗ್ಗೆ ಸೂರ್ಯ ಅರ್ಘ್ಯ ಅರ್ಪಿಸಿದ್ದಾರೆ.
ಇದನ್ನೂ ಓದಿ:Bhopal; ಮದುವೆ ಮನೆಗೆ ನುಗ್ಗಿ ವಧುವನ್ನು ಕಿಡ್ನ್ಯಾಪ್ ಮಾಡಲು ಯತ್ನ: ಕುಟುಂಬಿಕರಿಗೆ ಹಲ್ಲೆ
ನೀರು ತುಂಬಿದ ತಾಮ್ರದ ಬಿಂದಿಗೆಯಲ್ಲಿ ಪ್ರಧಾನಿ ಮೋದಿ ಅವರು ಸೂರ್ಯ ಅರ್ಘ್ಯವನ್ನು ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರು. Sunrise, Surya Arghya, spirituality ಎಂದು ನಮೂದಿಸಿ ಬಿಜೆಪಿ ಪುಟ್ಟ ವಿಡಿಯೋ ಕ್ಲಿಪ್ ಅನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
ಅಷ್ಟೇ ಅಲ್ಲ ಭಾರತೀಯ ಜನತಾ ಪಕ್ಷ ಪ್ರಧಾನಿ ನರೇಂದ್ರ ಮೋದಿ ಅವರು ಕೇಸರಿ ಶರ್ಟ್, ಶಾಲು ಹಾಗೂ ಧೋತಿಯನ್ನು ಧರಿಸಿ ಧ್ಯಾನ ಮಂಟಪದಲ್ಲಿ ಧ್ಯಾನ ಮಗ್ನರಾಗಿರುವ ಫೋಟೋಗಳನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಕೈಯಲ್ಲಿ ಜಪ ಮಾಲೆ ಹಿಡಿದು ಮಂಟಪದ ಸುತ್ತ ಜಪಿಸುತ್ತಾ ತಿರುಗಾಡುತ್ತಿರುವ ಫೋಟೊ ಕೂಡಾ ಶೇರ್ ಮಾಡಿದೆ.
ಭಾರತದ ದಕ್ಷಿಣದ ತುತ್ತ ತುದಿ ಕನ್ಯಾಕುಮಾರಿ(Kanyakumari) ಕಡಲ ತೀರ ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಹೆಸರುವಾಸಿಯಾಗಿದೆ. ಕಡಲ ಮಧ್ಯೆದಲ್ಲಿರುವ ವಿವೇಕಾನಂದ ಶಿಲಾ ಸ್ಮಾರಕದಲ್ಲಿ ಪ್ರಧಾನಿ ಮೋದಿ ಅವರು ಮೇ 30ರ ಸಂಜೆಯಿಂದ ಧ್ಯಾನ ಆರಂಭಿಸಿದ್ದು, ಜೂನ್ 1ರ ಸಂಜೆ ಮುಕ್ತಾಯಗೊಳ್ಳಲಿದೆ.