Advertisement

ಲಸಿಕೆ ಕುರಿತ ಸುಳ್ಳು ಸುದ್ದಿಗಳ ಹಿಮ್ಮೆಟ್ಟಿಸಿ

11:59 AM Jan 25, 2021 | Suhan S |

ಹೊಸದಿಲ್ಲಿ: ಭಾರತೀಯ ವಿಜ್ಞಾನಿಗಳು ಕೋವಿಡ್‌-19 ಲಸಿಕೆ ಅಭಿವೃದ್ಧಿಪಡಿಸುವ ಮೂಲಕ ತಮ್ಮ ಕೆಲಸ ಮಾಡಿದ್ದಾರೆ, ಈಗ ಭಾರತೀಯ ಯುವಕರು ಸರಿಯಾದ ಮಾಹಿತಿಯ ಮೂಲಕ ಲಸಿಕೆಯ ಬಗ್ಗೆ ಹರಡಿರುವ ಸುಳ್ಳು ಸುದ್ದಿಗಳು ಹಾಗೂ ವದಂತಿಗಳನ್ನು ಹಿಮ್ಮೆಟ್ಟಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

Advertisement

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳ­ಲಿರುವ ಎನ್‌ಸಿಸಿ ಕೆಡೆಟ್‌ಗಳು, ಎನ್‌ಎಸ್‌ಎಸ್‌ ಸ್ವಯಂಸೇವಕರು ಮತ್ತು ಕಲಾವಿದರನ್ನು ಉದ್ದೇಶಿಸಿ ರವಿವಾರ ಮಾತನಾಡಿದ ಅವರು, ಇಂಥ ಸಂಘಟನೆಗಳು ಸಂಕಷ್ಟದ ಸಮಯದಲ್ಲಿ ಮಹತ್ತರ ಪಾತ್ರ ವಹಿಸಿವೆ ಎಂದು ಶ್ಲಾ ಸಿದರು. “ಕೋವಿಡ್‌ ಸಮಯದಲ್ಲಿ ನಿಮ್ಮ ಪರಿಶ್ರಮ ಶ್ಲಾಘನೀಯ. ಸರಕಾರಕ್ಕೆ ಮತ್ತು ಆಡಳಿತಕ್ಕೆ ಅಗತ್ಯ ಎದುರಾದಾಗ ನೀವು ಮುಂದೆ ಬಂದು ಸಹಾಯ ಮಾಡಿದಿರಿ. ಆರೋಗ್ಯ ಸೇತು ಆ್ಯಪ್‌ನ ವಿಚಾರವಿರಲಿ ಅಥವಾ ಸಾಂಕ್ರಾಮಿಕದ ಬಗ್ಗೆ ಜಾಗೃತಿ ಮೂಡಿಸುವ ವಿಚಾರದಲ್ಲಾಗಲಿ ನಿಮ್ಮ ಕೆಲಸ ಶ್ಲಾಘನೀಯ. ನಿಮ್ಮ ಪ್ರಯತ್ನವನ್ನು ಮತ್ತೂಂದು ಹಂತಕ್ಕೆ ಒಯ್ಯಬೇಕಿದೆ. ಕೋವಿಡ್‌ ಲಸಿಕೆ ಪ್ರಕ್ರಿಯೆ ಬಗ್ಗೆ ದೇಶದ ಬಡವರು, ಸಾರ್ವಜನಿಕರಿಗೆ ಸರಿಯಾದ ಮಾಹಿತಿ ತಲುಪಿಸಲು ಮುಂದಾಗಿ’ ಎಂದರು ಪ್ರಧಾನಿ.

6 ದಿನಗಳಲ್ಲಿ 10 ಲಕ್ಷ ಮಂದಿಗೆ ಲಸಿಕೆ :

ಲಸಿಕೆ ಅಭಿಯಾನ ಆರಂಭವಾದ ಬಳಿಕ ಕೇವಲ 6 ದಿನಗಳಲ್ಲಿ ಭಾರತದಲ್ಲಿ 10 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ಇಷ್ಟು ಜನರಿಗೆ ಲಸಿಕೆ ವಿತರಿಸಲು ಯುಕೆ 18 ದಿನಗಳನ್ನು ತೆಗೆದುಕೊಂಡಿದ್ದರೆ, ಅಮೆರಿಕಕ್ಕೆ 10 ದಿನ ಬೇಕಾದವು ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಶನಿವಾರದಿಂದ ರವಿವಾರಕ್ಕೆ ದೇಶಾದ್ಯಂತ 14,849 ಮಂದಿಗೆ ಸೋಂಕು ದೃಢಪಟ್ಟಿದೆ. ಆರೋಗ್ಯ ಕಾರ್ಯಕರ್ತರ ಬಳಿಕ ಆದ್ಯತೆಯಲ್ಲಿ ವೈಮಾನಿಕ ಕ್ಷೇತ್ರದ ಸಿಬಂದಿಗೆ ಲಸಿಕೆ ನೀಡಬೇಕು ಎಂದು ಆರೋಗ್ಯ ಇಲಾಖೆಗೆ ನಾಗರಿಕ ವಿಮಾ ನಯಾನ ಇಲಾಖೆ ಮನವಿ ಮಾಡಿದೆ.

ಇಬ್ಬರು ಆರೋಗ್ಯ ಕಾರ್ಯಕರ್ತರ ಸಾವು :

Advertisement

ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ಕೊರೊನಾ ಲಸಿಕೆ ಪಡೆದಿದ್ದ ಇಬ್ಬರು ಆರೋಗ್ಯ ಕಾರ್ಯಕರ್ತರು ರವಿವಾರ ಸಾವಿಗೀಡಾಗಿದ್ದಾರೆ. ಆದರೆ ಇವರ ಸಾವಿಗೆ ಲಸಿಕೆಯೇ ಕಾರಣ ಎಂಬುದು ಇನ್ನೂ ದೃಢಪಟ್ಟಿಲ್ಲ. 42 ವರ್ಷದ ಆಶಾ ಕಾರ್ಯಕರ್ತೆ ವಿಜಯಲಕ್ಷ್ಮೀ ಲಸಿಕೆ ಪಡೆದ ಕೆಲವು ಹೊತ್ತಲ್ಲೇ ಕುಸಿದುಬಿದ್ದಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೆದುಳಿನ ಆಘಾತದಿಂದ ಅವರು ಸಾವಿಗೀಡಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು 45 ವರ್ಷದ ಮತ್ತೂಬ್ಬ ಮಹಿಳೆ ಕೂಡ ವಾರಂಗಲ್‌ನಲ್ಲಿ  ರವಿವಾರ ಅಸುನೀಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next