Advertisement

Nomination; ವಾರಾಣಸಿಯಲ್ಲಿ ಪ್ರಧಾನಿ ಮೋದಿ ಮೆಗಾ ರೋಡ್ ಶೋ

12:56 AM May 14, 2024 | Team Udayavani |

ವಾರಾಣಸಿ : ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ನಾಳೆ ಮಂಗಳವಾರ ಬೆಳಗ್ಗೆ ನಾಮಪತ್ರ ಸಲ್ಲಿಸಲಿದ್ದಾರೆ. ಉಮೇದುವಾರಿಕೆ ಸಲ್ಲಿಸುವ ಮುನ್ನ ಸೋಮವಾರ ಸಂಜೆ ಭರ್ಜರಿ ರೋಡ್ ಶೋ ನಡೆಸಿ ಮತದಾರರಲ್ಲಿ ಹೊಸ ಸಂಚಲನ ಮೂಡಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ಲಕ್ಷಾಂತರ ಜನರು ಜಮಾಯಿಸಿ ಪ್ರಧಾನಿ ಮೋದಿ ಅವರಿಗೆ ಜೈಕಾರ ಹಾಕಿದರು.

Advertisement

ಕೇಸರಿಮಯವಾಗಿದ್ದ ವಾರಾಣಸಿಯಲ್ಲಿ ಜೈ ಶ್ರೀರಾಮ್, ಮೋದಿ ಕಿ ಹ್ಯಾಟ್ರಿಕ್ ಘೋಷಣೆ ಗಳು ಮೊಳಗಿದವು. ಪ್ರಧಾನಿ ಮೋದಿ ಮೂರನೇ ಬಾರಿ ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವುದು ವಿಶೇಷವಾಗಿದೆ.

ಲಂಕಾ ಚೌಕ್ ನಿಂದ ಆರಂಭವಾದ ರೋಡ್ ಶೋನಲ್ಲಿ ಪ್ರಚಾರ ವಾಹನದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಭೂಪೇಂದ್ರ ಸಿಂಗ್ ಚೌಧರಿ ಉಪಸ್ಥಿತರಿದ್ದರು.

6 ಕಿಲೋ ಮೀಟರ್ ಉದ್ದಕ್ಕೆ ನಡೆದ ರೋಡ್ ಶೋ ಕಣ್ತುಂಬಿಕೊಳ್ಳಲು ವಾರಾಣಸಿ ಲೋಕ ಸಭಾ ಕ್ಷೇತ್ರದ ಮೂಲೆ ಮೂಲೆಯ ಬಿಜೆಪಿ ಕಾರ್ಯಕರ್ತರು ಮಾತ್ರವಲ್ಲದೆ ಸಾರ್ವಜನಿಕರೂ ಆಗಮಿಸಿದ್ದರು. ”ಕಾಶಿಯೇ ವಿಶೇಷ… ಇಲ್ಲಿನ ಜನರ ಪ್ರೀತಿ, ವಾತ್ಸಲ್ಯ ನಂಬಲಸಾಧ್ಯ!” ಎಂದು ಪ್ರಧಾನಿ ಮೋದಿ ಎಕ್ಸ್ ಪೋಸ್ಟ್ ಮಾಡಿದ್ದಾರೆ.

Advertisement

ಗಂಗಾ ಸ್ನಾನ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ನಾಳೆ ಬೆಳಗ್ಗೆ 11.40 ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ.

ರೋಡ್‌ ಶೋ ಹೈಲೈಟ್‌
ಪ್ರಧಾನಿ ರೋಡ್‌ ಶೋಗಾಗಿ 11 ವಿಭಾಗ ಮಾಡಲಾಗಿತ್ತು.
11 ವಿಭಾಗಗಳ 100 ಸ್ಥಳಗಳಲ್ಲಿ ಪ್ರಧಾನಿಯವರ ಸ್ವಾಗತಕ್ಕೆ ವಿಶೇಷ ವ್ಯವಸ್ಥೆ.
ಮರಾಠಿ, ಗುಜರಾತಿ, ಬಂಗಾಲಿ, ಮಹೇಶ್ವರಿ, ಮಾರವಾಡಿ, ತಮಿಳು ಮತ್ತು ಪಂಜಾಬಿಗಳು ಸೇರಿದಂತೆ ವಿವಿಧ ಸಮುದಾಯದ ಪ್ರತಿನಿಧಿಗಳು ಭಾಗಿ.
ಮದನ ಮೋಹನ್‌ ಮಾಳವೀಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ ರೋಡ್‌ ಶೋ ಆರಂಭ.
ಲಂಕಾದ ಮಾಳವೀಯ ಚೌರಾಹದಿಂದ ರೋಡ್‌ಶೋ ಆರಂಭ. ಸಂತ ರವಿದಾಸ್‌ ಗೇಟ್‌, ಅಸ್ಸಿ, ಶಿವಲಾ, ಸೋನಾರ್‌ಪುರ, ಜಂಗಮಬಡಿ, ಗೋದೌಲಿಯಾ ಮೂಲಕ ಹಾಯ್ದು ಶ್ರೀ ಕಾಶಿ ವಿಶ್ವನಾಥ ಧಾಮ್‌ಗೆ ಆಗಮನ.
5,000 ಮಹಿಳೆಯರು ಕೇಸರಿ ಉಡುಗೆ ತೊಟ್ಟು ವಾಹನದ ಮುಂದೆ ನಡೆದು ಮಿಂಚಿದರು.
ಶೆಹನಾಯ್‌ ವಾದಕ ಬಿಸ್ಮಿಲಾ ಖಾನ್‌ ವಂಶಸ್ಥರಿಂದಲೂ ಪ್ರಧಾನಿ ಮೋದಿಗೆ ಸ್ವಾಗತ.

Advertisement

Udayavani is now on Telegram. Click here to join our channel and stay updated with the latest news.

Next