Advertisement

ಮೋದಿಯದ್ದು ವಿಶ್ವದಲ್ಲೇ 3ನೇ ನಂಬಿಕಸ್ಥ ಸರ್ಕಾರ;ಸಮೀಕ್ಷೆ

11:16 AM Nov 20, 2017 | |

ಹೊಸದಿಲ್ಲಿ: ಆರ್ಥಿಕ ಸ್ಥಿತಿಗೆ ಶ್ರೇಣಿ ನೀಡುವ ಜಾಗತಿಕ ಸಂಸ್ಥೆ “ಮೂಡೀಸ್‌’ 14 ವರ್ಷ ಗಳ ಅನಂತರ ಭಾರತದ ವಿತ್ತ ಶ್ರೇಣಿಯನ್ನು ಮೇಲಕ್ಕೇರಿಸಿದ ಬೆನ್ನಲ್ಲೇ ಸಮೀಕ್ಷೆವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮೈತ್ರಿ  ಸರ್ಕಾರ ವಿಶ್ವದಲ್ಲೇ 3 ನೇ ನಂಬಿಕಸ್ಥ ಸರ್ಕಾರ ಎನಿಸಿಕೊಂಡಿದೆ. 

Advertisement

ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (OECD)ನಡೆಸಿದ ಸಮೀಕ್ಷೆಯಲ್ಲಿ ಮೋದಿ ಸರ್ಕಾರ 3 ನೇ ಶ್ರೇಣಿ ಪಡೆದುಕೊಂಡಿದ್ದು, ಮುಕ್ಕಾಲು ಭಾಗದಷ್ಟು ಭಾರತೀಯರು ನಮ್ಮ ಸರ್ಕಾರಮೇಲೆ ನಮಗೆ ನಂಬಿಕೆ ಇದೆ ಎಂದಿದ್ದಾರೆ ಎಂದು ವಿಶ್ವ ಆರ್ಥಿಕ ವೇದಿಕೆ  ವರದಿಯಲ್ಲಿ ಉಲ್ಲೇಖ ಮಾಡಿದೆ. 

ಇದೇ ವೇಳೆ ‘ಭ್ರಷ್ಟಾಚಾರ ವಿರೋಧಿ ಧೋರಣೆ ಮತ್ತು ತೆರಿಗೆ ಸುಧಾರಣೆಯ ನೀತಿಗಳಿಂದಾಗಿ ಜನರು ಸರ್ಕಾರದ ಮೇಲೆ ಭಾರಿ ವಿಶ್ವಾಸಹೊಂದುವಂತಾಗಿದೆ’ ಎಂದು ಉಲ್ಲೇಖಿಸಿದೆ.

74 % ಭಾರತೀಯರು ಮೋದಿ  ಸರ್ಕಾರದ ಮೇಲೆ ವಿಶ್ವಾಸ ಹೊಂದಿದ್ದು, ಮೊದಲ ಸ್ಥಾನವನ್ನು ಸ್ವಿಟ್ಝರ್‌ಲ್ಯಾಂಡ್‌ ಮೊದಲ ಸ್ಥಾನದಲ್ಲಿದ್ದು 82 % ಜನರು ಸರ್ಕಾರದ ಮೇಲೆ ವಿಶ್ವಾಸ ಹೊಂದಿದ್ದಾರೆ. 2 ನೇ ಸ್ಥಾನವನ್ನು ಇಂಡೋನೇಷ್ಯಾ ಸರ್ಕಾರ ಹೊಂದಿದ್ದು ಅಲ್ಲಿಯೂ 82 % ಜನರು ವಿಶ್ವಾಸ ಹೊಂದಿದ್ದಾರ.

‘ಕಳೆದ ಕೆಲ ವರ್ಷಗಳಿಂದ ಜನರು ಸರ್ಕಾರಗಳ ಮೇಲೆ ವಿಶ್ವಾಸ ಕಳೆದುಕೊಂಡಿದ್ದರು. ಆದರೆ ಮೋದಿ ಅವರು ಅದನ್ನು ಹುಸಿ ಮಾಡಿದ್ದಾರೆ’ ಎಂದು ಸಮೀಕ್ಷೆ ಹೇಳಿದೆ.

Advertisement

‘ಪ್ರತೀ ಭಾರತೀಯ ಪ್ರಧಾನಿ ನಾಯಕತ್ವದಲ್ಲಿ ನ್ಯೂ ಇಂಡಿಯಾದ ಕನಸನ್ನು ಎದುರು ನೋಡುತ್ತಿದ್ದಾನೆ’ ಎಂದು ಸಮೀಕ್ಷೆ ಹೇಳಿದೆ

ಇದೇ ವೇಳೆ ಗ್ರೀಸ್‌, ಸ್ಲೋವೇನಿಯಾ,ಚಿಲಿ,ಫಿನ್‌ಲ್ಯಾಂಡ್‌ ಸರ್ಕಾರದ ಮೇಲೆ ಜನರು ಎಳ್ಳಿನಿತು ವಿಶ್ವಾಸ ಹೊಂದಿಲ್ಲ ಎಂದು ಸಮೀಕ್ಷೆ ಹೇಳಿದೆ. 

ಈ ಹಿಂದೆ ಜುಲೈ ತಿಂಗಳಿನಲ್ಲಿ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆನಡೆಸಿದ ಇನ್ನೊಂದು ಸಮೀಕ್ಷೆಯಲ್ಲಿ ಮೋದಿ ಸರ್ಕಾರದ ಮೇಲೆ 73 % ಜನರು ವಿಶ್ವಾಸ ಹೊಂದಿದ್ದಾರೆ ಎಂದು ಬಹಿರಂಗವಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next