Advertisement

ಸ್ತ್ರೀ ಸಬಲೀಕರಣದಿಂದ ಕುಟುಂಬದ ಪ್ರಗತಿ

08:15 AM Feb 25, 2018 | |

ಚೆನ್ನೈ: ಮಹಿಳೆಯ ಸಶಕ್ತೀಕರಣದಿಂದ ಆಕೆಯ ಕುಟುಂಬ ಸಶಕ್ತವಾಗುತ್ತದೆ. ಆಕೆಗೆ ಶಿಕ್ಷಣ ನೀಡಿದರೆ ಅದು ಇಡೀ ಕುಟುಂಬಕ್ಕೇ ಶಿಕ್ಷಣ ನೀಡಿದಂತೆ. ಮಹಿಳೆಯ ಭವಿಷ್ಯ ಸುಭದ್ರಗೊಳಿಸಿದರೆ, ಆಕೆಯ ಕುಟುಂಬದ ಭವಿಷ್ಯವೂ ಸುಭದ್ರಗೊಳ್ಳುತ್ತದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪ್ಟಟರು. 

Advertisement

ಚೆನ್ನೈನಲ್ಲಿ, ತಮಿಳುನಾಡು ಸರಕಾರದ ವತಿಯಿಂದ ಏರ್ಪಡಿಸಲಾಗಿದ್ದ “ಅಮ್ಮ ದ್ವಿಚಕ್ರ ವಾಹನ’ ಯೋಜನೆ ಉದ್ಘಾಟಿಸಿ ಮಾತನಾಡಿದ ಅವರು, ಕುಟುಂಬದ ಅಭಿವೃದ್ಧಿಯಲ್ಲಿ ಮಹಿಳೆಯರು ವಹಿಸುವ ಪಾತ್ರವನ್ನು ಕೊಂಡಾಡಿದರು. ಸರಕಾರದ ಮಹಿಳಾ ಸಬಲೀಕರಣ ಯೋಜನೆಗಳು ಶಾಶ್ವತವಾಗಿ ಅವರನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತವೆ. ತಮ್ಮ ಸರಕಾರ, ಮಹಿಳೆಯರೂ ಸೇರಿದಂತೆ ಜನ ಸಾಮಾನ್ಯರ ಜೀವನ ಗುಣಮಟ್ಟ ಹೆಚ್ಚಿಸಲು ಶ್ರಮಿಸುತ್ತಿದೆ” ಎಂದರು. 

ತಮ್ಮ ಭಾಷಣದಲ್ಲಿ ಮಾಜಿ ಸಿಎಂ ದಿವಂಗತ ಜಯಲಲಿತಾರನ್ನು ನೆನೆದ  ಮೋದಿ, “”ಇಂದು ಜಯಲಲಿತಾ ಇದ್ದಿದ್ದರೆ ಈ ಯೋಜನೆಯ ಲಾಭ ಪಡೆದ ಮಹಿಳೆಯರ ಮೊಗದಲ್ಲಿನ ಮಂದಹಾಸ ನೋಡಿ ಖುಷಿಪಡುತ್ತಿದ್ದರು” ಎಂದರು.

ತಮಿಳುನಾಡು ಸರಕಾರದ “ಅಮ್ಮಾ ಸ್ಕೂಟರ್‌ ಯೋಜನೆ’ಗೆ ಚಾಲನೆ ನೀಡಿದ ಪ್ರಧಾನಿ ಮೋದಿ ಅವರು ಉದ್ಯೋಗಸ್ಥ ಮಹಿಳೆಯರಿಗೆ ದ್ವಿಚಕ್ರ ವಾಹನಗಳ ಕೀಲಿಕೈ ಮತ್ತು ನೋಂದಣಿ ಪ್ರಮಾಣಪತ್ರ ಹಸ್ತಾಂತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next