Advertisement

Coastal Karnataka: ಆಟೋಮೊಬೈಲ್‌: ವರ್ಷಾಂತ್ಯದವರೆಗೂ ಬೇಡಿಕೆ

03:08 AM Oct 27, 2024 | Team Udayavani |

ಮಂಗಳೂರು/ಉಡುಪಿ: ಹಬ್ಬದ ಋತುಮಾನ ಉಭಯ ಜಿಲ್ಲೆಗಳ ಮಾರುಕಟ್ಟೆಯಲ್ಲಿ ಹೊಸ ಉತ್ಸಾಹ ತುಂಬಿರುವುದು ಸುಳ್ಳಲ್ಲ. ವಾಹನೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳ ವಹಿವಾಟಿಗೂ ಜೀವ ಬಂದಿದೆ. ದೀಪಾವಳಿಗೆ ಮೂರೇ ದಿನಗಳಿದ್ದು, ಹೊಸ ವಸ್ತುಗಳ ಖರೀದಿಗೂ ವೇಗ ಬಂದಿದೆ.

Advertisement

ಆಟೋಮೊಬೈಲ್‌ ಕ್ಷೇತ್ರದಲ್ಲಿ ಹೊಸ ಚೈತನ್ಯ ಮೂಡಿದೆ. ಹಬ್ಬದ ಸಡಗರ ಹೆಚ್ಚಿಸಲು ಕಾರುಗಳು, ದ್ವಿಚಕ್ರ ವಾಹನಗಳ ಖರೀದಿಗೆ ಗ್ರಾಹಕರು ಮುಂದಾಗಿದ್ದಾರೆ. ವಾಹನೋದ್ಯಮ ಪರಿಣಿತರ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಾಹನ ಖರೀದಿಯಲ್ಲಿ ಅದೇ ಸ್ಥಿರತೆ ಕಾಯ್ದುಕೊಂಡಿದೆ. ಹೊಸ ವರ್ಷದವರೆಗೆ ವಾಹನಗಳ ಮಾರಾಟ ಇದೇ ರೀತಿ ಮುಂದುವರೆಯಬಹುದಂತೆ.

“ಸಾಮಾನ್ಯವಾಗಿ ಗಣೇಶ ಹಬ್ಬದ ಸಂದರ್ಭದಿಂದಲೇ ಆರಂಭವಾಗುವ ಕಾರು ಬುಕ್ಕಿಂಗ್‌ ವರ್ಷದ ಕೊನೆಯವರೆಗೂ ನಡೆಯುವುದುಂಟು. ಈ ಬಾರಿಯೂ ಕಳೆದ ವರ್ಷದಂತೆಯೇ ಇದೆ. ಕಾರು ಬುಕ್ಕಿಂಗ್‌ ಬಳಿಕ ಶೀಘ್ರವೇ ವಿತರಿಸುತ್ತೇವೆ. ಸುಮಾರು 7 ಲಕ್ಷ ರೂ. ಆಸುಪಾಸಿನ ಆಲ್ಟೋ ಕೆ10, ಎಸ್‌-ಪ್ರೆಸ್ಸೋ, ಸೆಲೆರಿಯೊ, ವ್ಯಾಗನಾರ್‌ ಮುಂತಾದವು ಸದ್ದು ಮಾಡುತ್ತಿವೆ. ಎಸ್‌ಯುವಿ ಗಳಿಗೂ ಉತ್ತಮ ಬೇಡಿಕೆ ಇದೆ. ಹೊಸ ಮಾದರಿ ಸ್ವಿಫ್ಟ್‌ ಕಾರನ್ನು ಹೆಚ್ಚಿನ ಗ್ರಾಹಕರು ನೆಚ್ಚಿಕೊಂಡಿದ್ದಾರೆ’ ಎನ್ನುತ್ತಾರೆ ಭಾರತ್‌ ಆಟೋಕಾರ್ ಸೇಲ್ಸ್‌ ಮತ್ತು ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಡೆನ್ನಿಸ್‌ ಗೋನ್ಸಾಲ್ವಿಸ್‌.

ಪೈ ಸೇಲ್ಸ್‌ ನಿಸಾನ್‌ ನಿರ್ದೇಶಕ ಅರುಣ್‌ ಪೈ ಅವರ ಪ್ರಕಾರ “ಕೆಲವು ತಿಂಗಳಿನಿಂದ ಕಾರುಗಳಿಗೆ ಬೇಡಿಕೆ ಹೆಚ್ಚಿದೆ. ದಸರಾ ಸೀಸನ್‌ನಿಂದ ಆರಂಭಗೊಂಡಿದ್ದು, ಮುಂದಿನ ಕೆಲವು ತಿಂಗಳವರೆಗೆ ಈ ಟ್ರೆಂಡ್‌ ಮುಂದುವರೆಯುವ ನಿರೀಕ್ಷೆ ಇದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿನಿಮಯ ಕೊಡುಗೆ, ಸಾಲ ಸೌಲಭ್ಯ, ಬಿಡಿ ಭಾಗಗಳಿಗೆ ಆಫರ್‌ ನೀಡಲಾಗುತ್ತಿದೆ. ನಮ್ಮಲ್ಲಿ ಹೊಸ ಮಾದರಿಯ ನಿಸಾನ್‌ ಮ್ಯಾಗ್ನೆ çಟ್‌ ಕಾರು ಖರೀದಿಗೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದರು.

ಆಟೋ ಗೇರ್‌, ಎಲೆಕ್ಟ್ರಿಕ್‌ ವಾಹನಕ್ಕೆ ಬೇಡಿಕೆ
ಗೇರ್‌ ಕಾರುಗಳ ಜತೆ ಅಟೋ ಗೇರ್‌ ಕಾರುಗಳಿಗೂ ಬೇಡಿಕೆ ಬಂದಿದೆ. ಕರಾವಳಿ ಭಾಗದಲ್ಲಿ ಕಾರು ಚಾಲನೆ ಮಾಡುವ ಮಹಿಳೆಯರ ಸಂಖ್ಯೆಯೂ ಹೆಚ್ಚಾಗಿದೆ. ಸಾಮಾನ್ಯವಾಗಿ ಗೇರ್‌ಲೆಸ್‌ ಗಾಡಿಗಳನ್ನು ಇಷ್ಟ ಪಡುತ್ತಾರೆ. ಸುಮಾರು 7 ಲಕ್ಷ ರೂ.ಗಳಿಂದ ಇಂಐ ಗಾಡಿಗಳು ಲಭ್ಯವಿವೆ. ಅದೇ ರೀತಿ, ಬೈಕ್‌ಗಳಲ್ಲಿಯೂ ಗೇರ್‌ಲೆಸ್‌ ಗಾಡಿಗೆ ಬೇಡಿಕೆ ಬಂದಿದೆ. ಪರಿಸರಕ್ಕೆ ಪೂರಕವಾದ ಎಲೆಕ್ಟ್ರಿಕ್‌ ವಾಹನಗಳ ಕಡೆಗೂ ಜನರ ಒಲವು ಹೆಚ್ಚುತ್ತಿದೆ ಎನ್ನುತ್ತಾರೆ ಮಾರಾಟ ವ್ಯವಸ್ಥಾಪಕರು.

Advertisement

ದ್ವಿಚಕ್ರ ವಾಹನಗಳಿಗೂ ಉಡುಗೊರೆಗಳಿಗೆ ಕೊರತೆ ಇಲ್ಲ. ಗಣೇಶ ಚತುರ್ಥಿ ಆರಂಭದಿಂದ ಈ ವರ್ಷಾಂತ್ಯದವರೆಗೂ ಆಫರ್‌ಗಳು ಇರುತ್ತವೆ. ಬಹುತೇಕ ಕಂಪೆನಿಗಳು ಕ್ಯಾಶ್‌ಬ್ಯಾಕ್‌ ಆಫರ್‌, ಡಿಸ್ಕೌಂಟ್‌ ಕೂಪನ್‌, ವಿನಿಮಯ ಬೋನಸ್‌, ಕಡಿಮೆ ಬಡ್ಡಿದರದ ಆಫರ್‌ಗಳನ್ನು ಪರಿಚಯಿಸಿವೆ. ಕೆಲವು ಕಂಪೆನಿಗಳು ಗ್ಯಾರಂಟಿ ಅವಧಿಯ ವಿಸ್ತರಣೆ, ಕಡಿಮೆ ಡೌನ್‌ಮೆಂಟ್‌ ಮುಂತಾದ ಅವಕಾಶ ಒದಗಿಸುತ್ತಿವೆ.

ಪೈ ಸೇಲ್ಸ್‌ ಪ್ರೈ .ಲಿ.ವ್ಯವಸ್ಥಾಪಕ ನಿರ್ದೇಶಕ ಗಣಪತಿ ಪೈ ಅವರ ಪ್ರಕಾರ ” ಸದ್ಯ ಹಬ್ಬಕ್ಕೆ ಆರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ ಮಾರುಕಟ್ಟೆ ಇನ್ನಷ್ಟು ವೃದ್ಧಿ
ಗೊಳ್ಳುವ ನಿರೀಕ್ಷೆ ಇದೆ’ ಎನ್ನುತ್ತಾರೆ. ಹಬ್ಬದ ದಿನಗಳಲ್ಲಿ ವಾಹನ ಖರೀದಿಸಬೇಕು ಎಂದು ಅನೇಕರು ಅಂದುಕೊಳ್ಳುತ್ತಾರೆ. ಹಲವು ಕಾರಣದಿಂದ ಅದು ಸಾಧ್ಯವಾಗಿರದು. ಈ ವರ್ಷವಾದರೂ ಹಬ್ಬಕ್ಕೆ ಮನೆಗೊಂದು ವಾಹನ ಕೊಂಡೊಯ್ಯುವ ಎಂಬ ಉತ್ಸಾಹದಲ್ಲಿರುತ್ತಾರೆ. ಅದಕ್ಕೆ ತಕ್ಕಂತೆ ನಾವು ವಿಶೇಷ ಆಫ‌ರ್‌ಗಳನ್ನು ಘೋಷಿಸಿದ್ದೇವೆ. ಗ್ರಾಹಕರು ಈಗಾಗಲೇ ಶೋರೂಂಗಳಿಗೆ ಭೇಟೀ ನೀಡಿ, ತಮಗೆ ಬೇಕಾದ ಬಣ್ಣ, ಮಾಡಲ್‌ ಕಾರುಗಳನ್ನು ಪರಿಶೀಲಿಸಿ ಕಾಯ್ದಿರಿಸುತ್ತಿದ್ದಾರ ಎನ್ನುತ್ತಾರೆ ಕಾರು ಶೋ ರೂಮ್‌ನ ವ್ಯವಸ್ಥಾಪಕರೊಬ್ಬರು.

ಕಂಪೆನಿಯಿಂದ ಕೆಲವು ನಿಗದಿತ ಆಫ‌ರ್‌ಗಳಿರುತ್ತವೆ. ಜತೆಗೆ ಗ್ರಾಹಕರ ಅನುಕೂಲಕ್ಕೆ ಸ್ಥಳೀಯ ವರ್ತಕರೂ ಮತ್ತಷ್ಟು ಕೆಲವು ಆಫ‌ರ್‌ಗಳು, ಸುಲಭ ಸಾಲ ಸೌಲಭ್ಯ ನೀಡುತ್ತಾರೆ. ಒಟ್ಟಾರೆಯಾಗಿ ಗ್ರಾಹಕರು ಕಾರು ಖರೀದಿಗೆ ಅನುಕೂಲ ಸ್ನೇಹಿ ವ್ಯವಸ್ಥೆ ಇದೆ ಎನ್ನುತ್ತಾರೆ ಕಾಂಚನ್‌ ಹ್ಯೂಂಡೈ ಎಂಡಿ ಪ್ರಸಾದ್‌ರಾಜ್‌ ಕಾಂಚನ್‌.

ಹಬ್ಬದ ದಿನಗಳಲ್ಲಿ ದ್ವಿಚಕ್ರ ವಾಹನ ಖರೀದಿಗೂ ಗ್ರಾಹಕರು ಆಸಕ್ತಿ ತೋರಿಸುತ್ತಾರೆ. ಇದಕ್ಕೆ ಪೂರಕವಾಗಿ ಕೆಲವು ಆಫ‌ರ್‌ಗಳನ್ನು ನೀಡಲಾಗುತ್ತದೆ. ಆಟೊಮೊಬೈಲ್‌ ಮಾರುಕಟ್ಟೆಯು ಇದೀಗ ಸ್ವಲ್ಪ ಚೇತರಿಸಿಕೊಳ್ಳುತ್ತಿದೆ ಹಾಗೂ ಹಬ್ಬದ ಖರೀದಿ ಪ್ರಕ್ರಿಯೆ ಶುರುವಾಗಿದೆ ಎಂಬುದು ಸಾಯಿರಾಧಾ ಟಿವಿಎಸ್‌ ಮೋಟರ್‌ ಆಡಳಿತ ನಿರ್ದೇಶಕ ಮನೋಹರ್‌ ಎಸ್‌. ಶೆಟ್ಟಿ ಅವರ ಅಭಿಪ್ರಾಯ.

ಬಜಾಜ್‌ ಶೋರೂಂನ ಸೇಲ್ಸ್‌ ವಿಭಾಗದ ಶಂಕರ್‌ ಅವರ ಪ್ರಕಾರ, “ಬಜಾಜ್‌ ಕಂಪೆನಿಯ ಬೈಕ್‌ ಖರೀದಿಯ ಮೇಲೂ ಆಫ‌ರ್‌ಗಳಿವೆ. ಹೆಚ್ಚಿನ ಮೈಲೇಜ್‌ ನೀಡುವ, ಕಡಿಮೆ ಬೆಲೆಯ 110 ಸಿಸಿ ಬೈಕ್‌ಗಳಿಗೆ ಬೇಡಿಕೆ ಇದೆ. ಹೆಚ್ಚು ಮೈಲೇಜ್‌ ಕೊಡುವ ಇತರ ಬೈಕ್‌ಗಳಿಗೂ ಬೇಡಿಕೆ ಇದೆ. ಎಲೆಕ್ಟ್ರಿಕ್‌ ಗಾಡಿಗಳ ಕೇಳುವವರೂ ಹೆಚ್ಚಿದ್ದಾರೆ’ ಎನ್ನುತ್ತಾರೆ.

ಹಬ್ಬಕ್ಕೆ ಭರ್ಜರಿ ಡಿಸ್ಕೌಂಟ್‌
ವಾಹನಗಳ ಖರೀದಿಗೆಂದು ಹಲವು ಕಂಪೆನಿಗಳು ಕೊಡುಗೆಗಳನ್ನು ನೀಡುತ್ತಿವೆ. ಕೆಲವು ಕಂಪೆನಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸುತ್ತಿವೆ. ವಾಹನ ವಿನಿಮಯಕ್ಕೆ ಮಾರುಕಟ್ಟೆ ದರಕ್ಕಿಂತ 15 ರಿಂದ 20 ಸಾವಿರ ರೂ. ಹೆಚ್ಚುವರಿ ಕ್ಯಾಶ್‌ಬ್ಯಾಕ್‌ ಆಫರ್‌ಗಳೂ ಇವೆ.

Advertisement

Udayavani is now on Telegram. Click here to join our channel and stay updated with the latest news.

Next