ಅಹಮದಾಬಾದ್: ಗುಜರಾತ್ ನ ಪಂಚಮಹಲ್ ಜಿಲ್ಲೆಯ ಪಾವಗಢ್ ಬೆಟ್ಟದ ಮೇಲೆ ಪುನರಾಭಿವೃದ್ಧಿ ಮಾಡಲಾದ ಕಾಳಿಕಾ ಮಾತಾ ದೇವಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಜೂನ್ 18) ಉದ್ಘಾಟಿಸಿದರು. ಪ್ರಧಾನಿ ಮೋದಿ ಅವರು ಪೂಜೆಯ ನಂತರ ಧ್ವಜಾರೋಹಣ ನೆರವೇರಿಸಿದರು.
ಇದನ್ನೂ ಓದಿ:ಕೆಂಗೇರಿಗೆ ಪ್ರಧಾನಿ ಮೋದಿ ಆಗಮನ; ಮುಖ್ಯಮಂತ್ರಿಗಳಿಂದ ಸಿದ್ಧತಾ ಕಾರ್ಯ ಪರಿಶೀಲನೆ
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೂಡಾ ಹಾಜರಿದ್ದರು. ಗುಜರಾತ್ ಮಾಹಿತಿ ಇಲಾಖೆಯ ಪ್ರಕಾರ, ಪಾವ್ ಗಢದ ಬೆಟ್ಟದ ಮೇಲಿರುವ 15ನೇ ಶತಮಾನದ ಕಾಳಿಕಾ ಮಾತಾ ದೇವಸ್ಥಾನ ನೂರಾರು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದ್ದು, ಇದೀಗ ಹೊಸ ವಿನ್ಯಾಸದೊಂದಿಗೆ ಪುನರ್ ಜೀರ್ಣೋದ್ಧಾರ ಮಾಡಲಾಗಿದೆ ಎಂದು ವಿವರಿಸಿದೆ.
ಆರಂಭದಲ್ಲಿ ಪಾವ್ ಗಢ್ ಬೆಟ್ಟವನ್ನು ವಿಸ್ತರಿಸುವ ನಿಟ್ಟಿನಲ್ಲಿ ದೊಡ್ಡ ಕ್ಯಾಂಪಸ್ ನಿರ್ಮಾಣಕ್ಕಾಗಿ ಅಡಿಪಾಯ ಹಾಕಲಾಗಿತ್ತು. ನಂತರ ಆವರಣದ ಮೊದಲ ಮತ್ತು ಎರಡನೇ ಮಹಡಿಯಲ್ಲಿ ಅಗತ್ಯ ಸೌಲಭ್ಯಗಳನ್ನು ನಿರ್ಮಿಸಲಾಯಿತು. ದೇವಾಲಯದ ಮೂಲಗರ್ಭಗುಡಿಯನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡು, ಇನ್ನುಳಿದಂತೆ ಇಡೀ ದೇವಾಲಯವನ್ನು ಮರು ನಿರ್ಮಾಣ ಮಾಡಲಾಗಿದೆ.
ಬೆಟ್ಟದ ಮೇಲಿನ ಪುರಾತನ ಮಾತಾಜಿ ದೇವಾಲಯದ ಆವರಣದಲ್ಲಿ ದರ್ಗಾ ಇದ್ದಿದ್ದು, ಸೌಹಾರ್ದಯುತ ಮಾತುಕತೆ ಮೂಲಕ ದರ್ಗಾವನ್ನು ಸ್ಥಳಾಂತರಿಸಲಾಗಿದೆ ಎಂದು ವರದಿ ತಿಳಿಸಿದೆ.