Advertisement

UAE ; ಅಬುಧಾಬಿಯಲ್ಲಿ BAPS ದೇವಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ: ವಿಡಿಯೋ ನೋಡಿ

07:32 PM Feb 14, 2024 | Team Udayavani |

ಅಬುಧಾಬಿ: ತಮ್ಮ ಎರಡು ದಿನಗಳ ಯುನೈಟೆಡ್ ಅರಬ್ ಎಮಿರೇಟ್ಸ್ ಭೇಟಿಯ ಎರಡನೇ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಐತಿಹಾಸಿಕ ಧಾರ್ಮಿಕ ಕ್ಷಣಕ್ಕೆ ಸಾಕ್ಷಿ ಎಂಬಂತೆ ಅಬುಧಾಬಿಯಲ್ಲಿ ಭವ್ಯ ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ ( BAPS) ದೇವಾಲಯ ಉದ್ಘಾಟಿಸಿ ಆರತಿ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು.

Advertisement

27 ಎಕರೆ ಪ್ರದೇಶದಲ್ಲಿ ಅತ್ಯಾಕರ್ಷಕ ಕೆತ್ತನೆಯಲ್ಲಿ ನಿರ್ಮಾಣಗೊಂಡಿರುವ ಮಂದಿರವು ಅಬುಧಾಬಿಯ ಮೊದಲ ಭವ್ಯ ಹಿಂದೂ ದೇವಾಲಯವಾಗಿದ್ದು, ಉದ್ಘಾಟನೆಗೂ ಮುನ್ನ ಪ್ರಧಾನಮಂತ್ರಿ ಮೋದಿ ಸಂತರ ಆಶೀರ್ವಾದ ಪಡೆದರು.

ಪ್ರಧಾನಿ ಮೋದಿ ಮತ್ತು ಸಂತರು ಏಕಕಾಲದಲ್ಲಿ ಆರತಿ ನೆರವೇರಿಸಿದ್ದು, ಇದೆ ಕ್ಷಣದಲ್ಲಿ ವಿಶ್ವದೆಲ್ಲೆಡೆಯ ಸಾವಿರಾರು ದೇವಾಲಯಗಳಲ್ಲಿ ಆರತಿ ನೆರವೇರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

‘3C’ ಸೂತ್ರ
ದುಬೈನಲ್ಲಿ ನಡೆದ ವಿಶ್ವ ಸರಕಾರದ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜಾಗತಿಕ ನಿರ್ಧಾರ ಕೈಗೊಳ್ಳುವಲ್ಲಿ ಗ್ಲೋಬಲ್ ಸೌತ್ ಭಾಗವಹಿಸುವಿಕೆಯನ್ನು ಪ್ರತಿಪಾದಿಸಿದರು.

Advertisement

ವಿಶ್ವದ ಮೌಲ್ಯಗಳನ್ನು ಉತ್ತೇಜಿಸಲು ಒಗ್ಗಟ್ಟು, ಸಹಕಾರ ಮತ್ತು ಸಹಯೋಗದ ‘3C’ ಸೂತ್ರವನ್ನು ನೀಡಿದರು. ತಂತ್ರಜ್ಞಾನದ ಪ್ರಗತಿಯ ಹೊರತಾಗಿಯೂ ಆಹಾರ, ಆರೋಗ್ಯ, ನೀರು ಮತ್ತು ಇಂಧನ ಭದ್ರತೆ ಸೇರಿದಂತೆ ಹಿಂದಿನ ಶತಮಾನದ ಸವಾಲುಗಳು ಹೆಚ್ಚುತ್ತಿವೆ ಎಂದು ಗಮನಿಸಿದ ಪ್ರಧಾನಿ ನರೇಂದ್ರ ಮೋದಿ, ಜಗತ್ತಿಗೆ ಎಲ್ಲರನ್ನೂ ಒಳಗೊಳ್ಳುವ ಜತೆಯಲ್ಲಿ ಕರೆದೊಯ್ಯುವ ಸರಕಾರಗಳ ಅಗತ್ಯವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next