Advertisement

ಭಾರತವು ವಿಶ್ವಕ್ಕೇ ಮಾದರಿ: ಪ್ರಧಾನಿ ಮೋದಿ

12:26 AM Oct 08, 2021 | Team Udayavani |

ಡೆಹ್ರಾಡೂನ್‌: “ಸಮುದ್ರವೇ ಇರಲಿ, ಕಾಡೇ ಇರಲಿ… ನಾವು ಎಲ್ಲ ಸ್ಥಳಗಳಿಗೂ ಲಸಿಕೆ ಪೂರೈಕೆ ಮಾಡಿದ್ದೇವೆ. ಆ ಮೂಲಕ ಪೂರ್ತಿ ವಿಶ್ವಕ್ಕೇ ಮಾದರಿಯಾಗಿ ನಿಂತಿದ್ದೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಉತ್ತರಾಖಂಡದ ರಿಶಿಕೇಶ ಐಐಟಿಯಲ್ಲಿ 35 ಆಮ್ಲಜನಕ ಘಟಕಗಳ ಉದ್ಘಾಟನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಈ ಮೇಲಿನ ಮಾತುಗಳನ್ನಾಡಿದ್ದಾರೆ. ಈಗ ನಮ್ಮ ದೇಶದ ಪ್ರತೀ ಜಿಲ್ಲೆಯೂ ಒಂದೊಂದು ಆಮ್ಲಜನಕ ಘಟಕ ಹೊಂದಿದೆ. 1,224 ಆಮ್ಲಜನಕ ಘಟಕವನ್ನು ಪಿಎಂ ಕೇರ್ ಹಣದಿಂದಲೇ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.

ಡಬಲ್‌ ಎಂಜಿನ್‌ ಅಭಿವೃದ್ಧಿ:  ಮುಂದಿನ ವರ್ಷ ಉತ್ತರಾಖಂಡ ವಿಧಾನಸಭೆ ಚುನಾವಣೆ ನಡೆಯಲಿದ್ದು, ಆ ಕುರಿತು ಪ್ರಸ್ತಾವಿಸಿದ ಮೋದಿ, “ಇಲ್ಲಿನ ಜನರು ನಮ್ಮ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯಿದ್ದರೆ, ಡಬಲ್‌ ಎಂಜಿನ್‌ ಸರಕಾರ ಮಾಡಿಕೊಂಡು ಉತ್ತಮ ಅಭಿವೃದ್ಧಿ ಕಾರ್ಯ ಮಾಡಬಹುದು’ ಎಂದು ಹೇಳಿದ್ದಾರೆ. ಆರೇಳು ವರ್ಷಗಳ ಹಿಂದೆ ಎಲ್ಲೋ ಕೆಲವು ರಾಜ್ಯಗಳಲ್ಲಿ ಮಾತ್ರ ಐಐಟಿ ಇತ್ತು. ಆದರೆ ಇದೀಗ ಅದನ್ನು ಪ್ರತೀ ರಾಜ್ಯದಲ್ಲಿ ಸ್ಥಾಪಿಸುವ ಕೆಲಸ ನಡೆಯುತ್ತಿದೆ. ಹಾಗೆಯೇ ಪ್ರತೀ ಜಿಲ್ಲೆಯಲ್ಲೂ ಕನಿಷ್ಠ ಒಂದು ವೈದ್ಯಕೀಯ ಕಾಲೇಜು ಸ್ಥಾಪಿಸುವ ಗುರಿಯನ್ನು ಸರಕಾರ ಹೊಂದಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next