Advertisement

ಮದಕರಿ ನಾಯಕ, ಓಬವ್ವಳನ್ನು ಮರೆತು ಸುಲ್ತಾನರ ಜಯಂತಿ ಮಾಡುತ್ತಾರೆ

11:33 AM May 06, 2018 | Team Udayavani |

ಚಿತ್ರದುರ್ಗ: ‘ಯಾರು ನಾಡಿಗೆ ಕೊಡುಗೆ ನೀಡಿದ್ದಾರೊ, ಅಂತಹವರ ಜಯಂತಿಗಳನ್ನು ಆಚರಿಸಲು ಕಾಂಗ್ರೆಸ್‌ ಮರೆತಿದೆ. ವೀರ ಮದಕರಿ ನಾಯಕ, ಒನಕೆ ಓಬವ್ವಳನ್ನು ಮರೆತು ಸುಲ್ತಾನರ ಜಯಂತಿ ಆಚರಿಸುತ್ತಿದೆ’ ಎಂದು ಭಾವನಾತ್ಮಕ ವಿಚಾರಗಳನ್ನು ಪ್ರಸ್ತಾವಿಸಿ ಭಾನುವಾರ ಬೃಹತ್‌ ಸಮಾವೇಶದಲ್ಲಿ  ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದರು. 

Advertisement

‘ಕಾಂಗ್ರೆಸ್‌ ಕೇವಲ ವೋಟ್‌ ಬ್ಯಾಂಕ್‌ಗಾಗಿ ಮಾತ್ರ ಜಯಂತಿಗಳನ್ನು ಆಚರಿಸುತ್ತಿದೆ.ಮದಕರಿ ನಾಯಕ, ಓಬವ್ವಳನ್ನು ಕೊಂದವರ ಜಯಂತಿ ಆಚರಣೆ ಮಾಡಿ ಚಿತ್ರದುರ್ಗದ ಜನರಿಗೆ ಅವಮಾನ ಮಾಡಿದೆ’ ಎಂದರು. 

 ‘ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರನ್ನೂ ಕಾಂಗ್ರೆಸ್‌ ಅವಮಾನ ಮಾಡಿತ್ತು. ಅಂಬೇಡ್ಕರ್‌ ಅವರು ನಮ್ಮನ್ನಗಲಿ ಎಷ್ಟೋ ವರ್ಷಗಳ ನಂತರ ವಾಜಪೇಯಿ ಅವರು ಅವರಿಗೆ ಭಾರತ ರತ್ನ ನೀಡಬೇಕಾಯಿತು, ಕಾಂಗ್ರೆಸ್‌ ಆ ಕೆಲಸ ಮಾಡಲಿಲ್ಲ’ ಎಂದರು.  

‘ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ , ದೊಡ್ಡ ನಾಯಕ ಎಸ್‌. ನಿಜಲಿಂಗಪ್ಪ ಅವರ ನ್ನು ಕಾಂಗ್ರೆಸ್‌ ನ ಪರಿವಾರ ಯಾವ ರೀತಿ ಅಪಮಾನ ಮಾಡಿದೆ ಎನ್ನುವುದನ್ನು ಯುವಕರು ನೆನಪಿಸಿಕೊಳ್ಳಬೇಕಾಗಿದೆ. ಯಾವುದೇ ಅವಕಾಶಗಳನ್ನು ನೀಡದೆ ಅವರನ್ನು  ಬದಿಗೆ ಸರಿಸಿದರು. ಅವರು ಮಾಡಿದ ತಪ್ಪು  ಯಾವುದು? ಬೇರೆ ಯಾವುದೂ ಅಲ್ಲ. ನೆಹರು ತಪ್ಪು ನೀತಿಗಳ ವಿರುದ್ಧ , ಆರ್ಥಿಕ ನೀತಿಗಳ ವಿರುದ್ಧ ಸವಾಲು ಎತ್ತಿದ್ದರು ಅದು ಮಾತ್ರ ಅವರ ತಪ್ಪು’ ಎಂದರು.

ನಾವು ಜಾತಿ ಧರ್ಮ ನೋಡುವುದಿಲ್ಲ,ಮಹಾನ್‌ ವಿಜ್ಞಾನಿ ಎಪಿಜೆ ಅಬ್ದುಲ್‌ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದೆವು. ನಾನು ಪ್ರಧಾನಿ ಅದ ಬಳಿಕ ಬಡ ದಲಿತ ಸಮುದಾಯದಲ್ಲಿ ಹುಟ್ಟಿದ ರಾಮ್‌ನಾಥ್‌ ಕೋವಿಂದ್‌ ಅವರನ್ನು ರಾಷ್ಟ್ರಪತಿ ಮಾಡಿ ನಮ್ಮ ಬದ್ಧತೆ ತೋರಿಸಿದ್ದೇವೆ. 

Advertisement

‘ಕಾಂಗ್ರೆಸ್‌ಗೆ ದಿಗಿಲಾಗಿದೆ,ಪ್ರಧಾನಿಯೂ ಬಡ ಸಣ್ಣ ಕುಟುಂಬದಿಂದ ಬಂದವರು, ರಾಷ್ಟ್ರಪತಿಯೂ ಬಡ ದಲಿತ ಸಮುದಾಯದಿಂದ ಬಂದವರು.ನಮ್ಮ ವೋಟ್‌ ಬ್ಯಾಂಕ್‌ ಭಂಗವಾಯಿತು ಎಂದು ಅವರಿಗೆ ಅರ್ಥವಾಗಿದೆ’ಎಂದರು.

‘ದಲಿತರ ನಡುವಿನಿಂದ ಬಂದವನು ನಾನು. ನಮಗೆ ಹಳ್ಳಿಗಳಲ್ಲಿ ಹೇಗೆ ದಲಿತರಿಗೆ ದೌರ್ಜನ್ಯ ನಡೆಯುತ್ತದೆ ಎನ್ನುವುದು ಗೊತ್ತು. ದಲಿತರ ವಿರುದ್ಧ ದೌರ್ಜನ್ಯ ನಡೆಯಬಾರದು ಎಂದು ನಾವು ಕಾನೂನನ್ನು ಇನ್ನಷ್ಟು ಕಠಿಣ ಮಾಡಿದ್ದೇವೆ’ ಎಂದರು. 

‘ನಾನು ದಲಿತ, ಶೋಷಿತ, ಬಡ ವರ್ಗದ ನಡುವಿನಿಂದ ಬಂದವನು. ನಮ್ಮ ಉದ್ದೇಶವೇ ನಿಮ್ಮ ಅಭಿವೃದ್ಧಿ , ನಮ್ಮ ಎಲ್ಲಾ ಯೋಜನೆಗಳು ನಿಮ್ಮ ಏಳಿಗೆಗಾಗಿ’ ಎಂದರು. 

‘ರಾಜ್ಯದಲ್ಲಿ ಮಂತ್ರಿಗಳು ಡೀಲ್‌ ಮಾಡುತ್ತಿದ್ದಾರೆ. ಈಗ ಕರ್ನಾಟಕದಲ್ಲಿರುವುದು ಡೀಲ್‌ ಸಕಾರ, ಕಾಂಗ್ರೆಸ್‌ಗೆ ದಿಲ್‌ ಇಲ್ಲ ಡೀಲ್‌ ಮಾತ್ರ . ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಟ್‌ಕೇಸ್‌ನಲ್ಲಿ  ಕ್ಯಾರೆಕ್ಟರ್‌ ಸರ್ಟಿಫಿಕೇಟ್‌ ಇಟ್ಟುಕೊಂಡು ತಿರುಗುತ್ತಾರೆ. ಯಾವುದಾದರು ಮಂತ್ರಿ ಮೇಲೆ ಆರೋಪ ಬಂದರೆ ಕೂಡಲೆ ಅವರ ಹೆಸರು ಬರೆದು ಸಾರ್ವಜನಿಕರಿಗೆ ನೀಡುತ್ತಾರೆ. ಆರೋಪಿತ ಮಂತ್ರಿಗಳಿಗೆ ಮುಖ್ಯಮಂತ್ರಿ  ಕ್ಲೀನ್‌ ಚಿಟ್‌ ನೀಡುತ್ತಾರೆ. ಈ ಬಾರಿ ಅವರನ್ನು ಕ್ಲೀನ್‌ ಸ್ವೀಪ್‌ ಮಾಡಿ’ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next