ಜೈಪುರ: ರಾಜಸ್ಥಾನದ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರ್ಯಾಲಿಯಲ್ಲಿ ಮೈಕ್ ಬಳಸಿ ಭಾಷಣ ಮಾಡದೆ ನಿಯಮ ಪಾಲನೆ ಮಾಡಿ ಆದರ್ಶ ಮೆರೆದರು.
ರಾಜಸ್ಥಾನದ ಸಿರೋಹಿಯ ಅಬು ರೋಡ್ ಪ್ರದೇಶದಲ್ಲಿ ನರೇಂದ್ರ ಮೋದಿ ಅವರು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಆದರೆ ಅವರು ಸ್ಥಳಕ್ಕೆ ತಲುಪುವಾಗ ತಡವಾಗಿತ್ತು. ಗಂಟೆ 10 ಆದ ಕಾರಣ ಅವರು ಧ್ವನಿವರ್ಧಕ ನಿಯಮಗಳಿಗೆ ಅನುಸಾರವಾಗಿ ಅವರು ಮೈಕ್ ಬಳಸಲಿಲ್ಲ. ಅಲ್ಲದೆ ಧ್ವನಿವರ್ಧಕ ನಿಯಮಗಳು ಮತ್ತು ನಿಬಂಧನೆಗಳನ್ನು ಪಾಲಿಸಬೇಕೆಂದು ಹೇಳಿದರು.
ಮೈಕ್ ಬಳಸದೆ ಅವರು ಸಂಕ್ಷಿಪ್ತ ಭಾಷಣ ಮಾಡಿದ ವಿಡಿಯೋ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಅವರು ಸಭೆಯ ಮೊದಲು ಮಾತನಾಡಲು ಸಾಧ್ಯವಾಗದಿದ್ದಕ್ಕಾಗಿ ಕ್ಷಮೆಯಾಚಿಸಿದರು. ಇನ್ನೊಮ್ಮೆ ಸಿರೋಹಿಗೆ ಬರುವುದಾಗಿ ಭರವಸೆ ನೀಡಿದರು.
“ನಾನು ತಲುಪಲು ತಡವಾಯಿತು. ರಾತ್ರಿ 10 ಗಂಟೆಯಾಗಿದೆ. ನಾನು ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು ಎಂದು ನನ್ನ ಆತ್ಮಸಾಕ್ಷಿಯು ಹೇಳುತ್ತದೆ. ಹಾಗಾಗಿ ನಿಮ್ಮ ಮುಂದೆ ನಾನು ಕ್ಷಮೆಯಾಚಿಸುತ್ತೇನೆ” ಎಂದು ಪ್ರಧಾನಿ ಮೋದಿ ಮೈಕ್ ಮತ್ತು ಧ್ವನಿವರ್ಧಕವಿಲ್ಲದೆ ಮಾತನಾಡುತ್ತಾ ಹೇಳಿದರು.
ನಂತರ ಪ್ರಧಾನಿ ಮೋದಿ ವೇದಿಕೆಯ ಮೇಲೆ ನಮಸ್ಕರಿಸಿ “ಭಾರತ್ ಮಾತಾ ಕಿ ಜೈ” ಘೋಷಣೆಯನ್ನು ಕೂಗಿದರು.