Advertisement
ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಮಂಗಳ ವಾರ ವಾಷಿಂಗ್ಟನ್‌ನ ನ್ಯಾಶನಲ್ ಪ್ರಸ್ ಕ್ಲಬ್‌ನಲ್ಲಿ ಮಾತ ನಾಡಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Related Articles
ಭಾರತದಲ್ಲಿ ಭಯೋತ್ಪಾದನ ಕೃತ್ಯಗಳನ್ನು ನಡೆಸಲು ನಾವು ಅವಕಾಶ ನೀಡುವುದಿಲ್ಲ. ಇಂತಹ ಕೃತ್ಯಗಳನ್ನು ಎಸಗುವುದನ್ನು ಪಾಕ್ ನಿಲ್ಲಿಸುವವರೆಗೆ ನಾವು ಅವರ ಜತೆಗೆ ಉತ್ತಮ ಸಂಬಂಧ ಹೊಂದಲು ಸಾಧ್ಯವಿಲ್ಲ ಎಂದು ರಾಹುಲ್ ಹೇಳಿದ್ದಾರೆ.
Advertisement
ಅಮೆರಿಕ ಮೂಗು ತೂರಿಸಬಾರದು: ರಾಹುಲ್ಭಾರತದ ಆಂತರಿಕ ವಿಷಯಗಳಲ್ಲಿ ಅಮೆರಿಕ ಮೂಗು ತೂರಿಸಬಾರದು. ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಸಂಬಂಧ ಉತ್ತಮವಾಗಿದೆ. ಪ್ರಜಾಪ್ರಭುತ್ವ ಕ್ಕಾಗಿ ಭಾರತದಲ್ಲಿ ನಡೆಯುತ್ತಿರುವ ಹೋರಾಟ ಭಾರತದ್ದೇ ಆಗಿದೆ. ಉಳಿದ ದೇಶಗಳ ಪ್ರಜಾಪ್ರಭುತ್ವಕ್ಕೆ ಹೋಲಿಸಿದರೆ ಭಾರತದ್ದು ವಿಭಿನ್ನವಾಗಿದೆ ಎಂದು ರಾಹುಲ್ ಹೇಳಿದ್ದಾರೆ. ಭಾರತ ವಿರೋಧಿ ನಾಯಕಿ
ಭೇಟಿ: ರಾಹುಲ್ ವಿವಾದ
ಅಮೆರಿಕದಲ್ಲಿ ರಾಹುಲ್ ಗಾಂಧಿ ಅಮೆರಿಕದ ಸಂಸದೆ ಇಲ್ಹಾನ್ ಓಮರ್ ಅವರನ್ನು ಭೇಟಿಯಾಗಿರು ವುದು ಭಾರೀ ವಿವಾದ ಸೃಷ್ಟಿಸಿದೆ. ಭಾರತ ವಿರೋಧಿ, ಮೋದಿ ವಿರೋಧಿ ಮತ್ತು ತೀವ್ರವಾದಿ ರಾಜಕಾರಣಿ ಇಲ್ಹಾನ್ ಓಮರ್ ಅವರನ್ನು ರಾಹುಲ್ ಏಕೆ ಭೇಟಿ ಯಾಗಿದ್ದಾರೆ ಎಂದು ಬಿಜೆಪಿ ಪ್ರಶ್ನಿ ಸಿದೆ. ಬಿಜೆಪಿಯನ್ನು ವಿರೋಧಿಸುವು ದಕ್ಕಾಗಿ ದೇಶವನ್ನು ವಿರೋಧಿಸು ವುದು ಸರಿಯೇ ಎಂದು ಬಿಜೆಪಿ ಕೇಳಿದೆ. ಸಿಕ್ಖರ ವಿರುದ್ಧ ವಿಷಮಯ ಹೇಳಿಕೆ ಮತ್ತು ವಿದೇಶಿ ನೆಲದಲ್ಲಿ ಭಾರತವನ್ನು ಹೀಯಾಳಿಸಿದ ಬಳಿಕ ರಾಹುಲ್ ಈಗ ಭಾರತ ವಿರೋಧಿ ಇಲ್ಹಾನ್ ಓಮರ್ ಅವರನ್ನು ಭೇಟಿ ಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲ ಹೇಳಿದ್ದಾರೆ. ಓಮರ್ ಅಮೆರಿಕದ ಸಂಸತ್ತಿನಲ್ಲಿ ಭಾರತ ವಿರೋಧಿ ನಿರ್ಣಯ ಮಂಡಿಸಿ ದ್ದರು, 370ನೇ ವಿಧಿ ರದ್ದತಿ ವಿರೋ ಧಿಸಿದ್ದರು, ಅವರೊಬ್ಬ ಹಿಂದೂ ದ್ವೇಷಿ, ಅಂಥವರನ್ನು ರಾಹುಲ್ ಭೇಟಿಯಾಗಿದ್ದಾರೆ ಎಂದಿದ್ದಾರೆ. ರಾಹುಲ್ ಮೀಸಲಾತಿ ಹೇಳಿಕೆ ಖಂಡಿಸಿ ಇಂದು ಬಿಜೆಪಿ ಪ್ರತಿಭಟನೆ
ಬೆಂಗಳೂರು: ಮೀಸಲಾತಿ ರದ್ದುಗೊಳಿಸುವ ಬಗ್ಗೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅಮೆರಿಕದಲ್ಲಿ ನೀಡಿರುವ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಗುರುವಾರ ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ. ಮೀಸಲು ಹೇಳಿಕೆ: ಸೋನಿಯಾ ನಿವಾಸದ ಮುಂದೆ ಸಿಕ್ಖರ ಆಕ್ರೋಶ
ಹೊಸದಿಲ್ಲಿ: ಭಾರತದಲ್ಲಿ ಸಿಕ್ಖರು ಹೊಂದಿರುವ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕದಲ್ಲಿ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಬಿಜೆಪಿ ಬೆಂಬಲಿತ ಸಿಕ್ಖರ ಗುಂಪು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಬುಧವಾರ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ದಿಲ್ಲಿ ನಿವಾಸದವರೆಗೆ ಪ್ರತಿಭಟನ ಮೆರವಣಿಗೆ ನಡೆಸಿ, ರಾಹುಲ್ ಗಾಂಧಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಅಮೆರಿಕದಲ್ಲಿ ರಾಹುಲ್ ನೀಡಿರುವ ಹೇಳಿಕೆಯು ಕಾಂಗ್ರೆಸ್‌ನ ಮೀಸಲು ವಿರೋಧಿ ಮುಖವನ್ನು ಮತ್ತೂಮ್ಮೆ ಜಗಜ್ಜಾಹೀರು ಮಾಡಿದೆ. ಬಿಜೆಪಿ ಇರುವವರೆಗೆ ಮೀಸಲಾತಿಯನ್ನು ರದ್ದು ಮಾಡಲು ಸಾಧ್ಯವಿಲ್ಲ. ದೇಶದ ಭದ್ರತೆಯೊಂದಿಗೆ ಚೆಲ್ಲಾಟವಾಡಲು ಬಿಡುವುದಿಲ್ಲ.
-ಅಮಿತ್ ಶಾ, ಕೇಂದ್ರ ಗೃಹ ಸಚಿವ