Advertisement

PM Modi ಮೌನ ದುರ್ಬಲ ನಾಯಕನ ಲಕ್ಷಣ: ಕೇಜ್ರಿವಾಲ್ ಆಕ್ರೋಶ

08:47 PM Jul 20, 2023 | Team Udayavani |

ಹೊಸದಿಲ್ಲಿ: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವಿಡಿಯೋ ರಾಷ್ಟ್ರದ ಆತ್ಮಸಾಕ್ಷಿಯನ್ನು ಅಲ್ಲಾಡಿಸಿದೆ ಮತ್ತು ರಾಜ್ಯದಲ್ಲಿ ಶಾಂತಿ ಮರುಸ್ಥಾಪಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಒತ್ತಾಯಿಸಿದ್ದಾರೆ.

Advertisement

ಇಂತಹ ಘಟನೆಗಳ ಬಗ್ಗೆ ಪ್ರಧಾನಿ ಮೋದಿ ಮೌನವಾಗಿರುವುದು ಆಗಾಗ ಕಂಡು ಬರುತ್ತಿದೆ. ಇದು ದುರ್ಬಲ ನಾಯಕನ ಸಂಕೇತವಾಗಿದೆ. ಒಬ್ಬ ಧೈರ್ಯಶಾಲಿ ನಾಯಕ ಮುಂದೆ ಬರುತ್ತಾನೆ. ಅವರು ಕೋಣೆಯಲ್ಲಿ ತಮ್ಮನ್ನು ಮುಚ್ಚಿಕೊಳ್ಳುವುದಿಲ್ಲ”ಎಂದು ಎಎಪಿ ಮುಖ್ಯಸ್ಥ ಕಿಡಿ ಕಾರಿದ್ದಾರೆ.

ಮೇ 4 ರಂದು ಮಣಿಪುರದ ಬೆಟ್ಟಗಳಲ್ಲಿ ಉದ್ವಿಗ್ನತೆ ಹೆಚ್ಚಿದ ನಂತರ ಇಬ್ಬರು ಮಹಿಳೆಯರನ್ನು ಕೆಲವು ಪುರುಷರು ಬೆತ್ತಲೆಯಾಗಿ ಮೆರವಣಿಗೆ ಮಾಡುವುದನ್ನು ತೋರಿಸುವ ವಿಡಿಯೋ ವೈರಲ್ ಆಗಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆ 140 ಕೋಟಿ ಭಾರತೀಯರು ನಾಚಿಕೆಪಡುವಂತೆ ಮಾಡಿದ್ದು, ಇದನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next