Advertisement

ಪುಲ್ವಾಮಾ ದಾಳಿಯ 24 ತಾಸೊಳಗೆ ಯುದ್ಧಕ್ಕೆ ಅನುಮತಿ ನೀಡಿದ್ದ PM ಮೋದಿ

06:33 AM Feb 26, 2019 | udayavani editorial |

ಹೊಸದಿಲ್ಲಿ : 40 ಸಿಆರ್‌ಪಿಎಫ್ ಯೋಧರನ್ನು ಬಲಿ ಪಡೆದ ಫೆ.14ರಂದು ಪುಲ್ವಾಮಾ ಉಗ್ರ ದಾಳಿ ನಡೆದ 24 ತಾಸಿನ ಒಳಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಸೇನೆಗೆ ಪಾಕ್‌ ಆಕ್ರಮಿತ ಕಾಶ್ಮೀರ ಮಾತ್ರವಲ್ಲದೆ ಪಾಕಿಸ್ಥಾನದ ಇತರೆಡೆಗಳಲ್ಲಿನ ಉಗ್ರ ಶಿಬಿರಗಳನ್ನು ಧ್ವಂಸಗೈಯುವುದಕ್ಕೆ ಅನುಮತಿ ನೀಡಿದ್ದರು ಎಂದು ವರದಿಗಳು ಇಂದು ನೆನಪಿಸಿಕೊಟ್ಟಿವೆ. 

Advertisement

ಆ ಪ್ರಕಾರ ಗಡಿ  ನಿಯಂತ್ರಣ ರೇಖೆಯಲ್ಲಿರುವ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಶಿಬಿರಗಳನ್ನು ನಾಶ ಮಾಡುವ ಕಾರ್ಯಾಚರಣೆಯನ್ನು ಭಾರತೀಯ ಸೇನೆ 24 ತಾಸೊಳಗೆ ರೂಪಿಸಿತ್ತು. 

ಆ ಪ್ರಕಾರ ನಿನ್ನೆ ಸೋಮವಾರ ಮಧ್ಯರಾತ್ರಿ ಬಳಿಕ ಭಾರತೀಯ ವಾಯು ಪಡೆ ಪಾಕಿಸ್ಥಾನದ ಎಲ್‌ಓಸಿಯನ್ನು ದಾಟಿ ಬಾಲಕೋಟ್‌ ನಲ್ಲಿನ ಜೈಶ್‌ ಉಗ್ರ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿ 1,000 ಕಿಲೋ ಬಾಂಬುಗಳನ್ನು ಹಾಕಿ 300ಕ್ಕೂ ಅಧಿಕ ಜೈಶ್‌ ಉಗ್ರರು, ಅವರ ತರಬೇತುದಾರರು, ಕಮಾಂಡರ್‌ಗಳು ಮುಂತಾಗಿ ದೊಡ್ಡ ಸಂಖ್ಯೆಯಲ್ಲಿ ಉಗ್ರರನ್ನು ಬಲಿಪಡೆಯಿತು.

1971ರಲ್ಲಿ ಪಾಕ್‌ ವಿರುದ್ಧ ನಡೆದ ಯುದ್ಧದ ಬಳಿಕದಲ್ಲಿ ಭಾರತೀಯ ಸೇನೆ ಇದೇ ಮೊದಲ ಬಾರಿಗೆ ಎಲ್‌ಓಸಿ ದಾಟಿ ಬಾಂಬ್‌ ದಾಳಿ ನಡೆಸಿರುವುದು ಗಮನಾರ್ಹವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next