Advertisement

ಈ ತಿಂಗಳ ಕೊನೆಯ ವಾರದಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ಭೇಟಿ

02:27 PM Sep 05, 2021 | Team Udayavani |

ಹೊಸದಿಲ್ಲಿ: ಈ ತಿಂಗಳ ಕೊನೆಯ ವಾರದಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜೋ ಬೈಡೆನ್‌ ಅವರು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೋದಿ ಅವರ ಮೊದಲ ಅಮೆರಿಕ ಪ್ರವಾಸ ಇದಾಗಿರಲಿದೆ.

Advertisement

ಬಹುತೇಕ ಸೆ. 22ರಿಂದ ಸೆ. 27ರ ವರೆಗೆ ಮೋದಿಯವರು ವಾಷಿಂಗ್ಟನ್‌ ಡಿಸಿ ಮತ್ತು ನ್ಯೂಯಾರ್ಕ್‌ಗೆ ಭೇಟಿ ನೀಡುವ ಸಾಧ್ಯತೆಯಿದೆ. ಮೋದಿ ಮತ್ತು ಬೈಡೆನ್‌ ಅಫ್ಘಾನ್‌ನ ಬದಲಾದ ಚಿತ್ರಣ, ಇಂಡೋ-ಪೆಸಿಫಿಕ್‌ ಕಾರ್ಯಸೂಚಿ, ಚೀನ ಒಡ್ಡಿರುವ ಸವಾಲುಗಳ ಸಹಿತ ವಿವಿಧ ವಿಚಾರಗಳ ಕುರಿತು ಚರ್ಚಿಸುವ ಸಾಧ್ಯತೆಯಿದೆ.

ಉಭಯ ನಾಯಕರು ಈಗಾಗಲೇ ಕನಿಷ್ಠ 3 ಬಾರಿ ವರ್ಚುವಲ್‌ ಶೃಂಗಗಳ ವೇಳೆ ಭೇಟಿಯಾಗಿದ್ದಾರೆ. ಆದರೆ ಮುಖಾಮುಖೀಯಾಗಿ ಭೇಟಿಯಾಗುತ್ತಿರುವುದು ಇದೇ ಮೊದಲು. ಈ ಹಿಂದೆ 2019ರ ಸೆಪ್ಟಂಬರ್‌ನಲ್ಲಿ ಪ್ರಧಾನಿ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ್ದರು. ಅಲ್ಲಿ ಆಗಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೊಂದಿಗೆ “ಹೌಡಿ ಮೋದಿ’ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next