Advertisement

ಜಾತಿ ನೋಡದೆ ಗುಜರಾತ್‌ನ ಜನರು ನನ್ನನ್ನು ಗೆಲ್ಲಿಸಿದರು: ಪ್ರಧಾನಿ ಮೋದಿ

07:08 PM Oct 09, 2022 | Team Udayavani |

ಮೆಹ್ಸಾನಾ: ನನ್ನ ಜಾತಿಯನ್ನು ಲೆಕ್ಕಿಸದೆ ಕಳೆದ ಎರಡು ದಶಕಗಳಿಂದ ಜನರು ನನ್ನನ್ನು ಆಶೀರ್ವದಿಸಿ ಮತ ಹಾಕಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ತವರಿನಲ್ಲಿ ಹೇಳಿಕೆ ನೀಡಿದ್ದಾರೆ.

Advertisement

ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ, ಮೂರು ದಿನಗಳ ಭೇಟಿಗಾಗಿ ಪ್ರಧಾನಿ ಗುಜರಾತ್‌ಗೆ ಆಗಮಿಸಿದ್ದು, ಮೆಹ್ಸಾನಾ ಜಿಲ್ಲೆಯ ಮೊಧೇರಾವನ್ನು ದೇಶದ ಮೊದಲ 24×7 ಸೌರಶಕ್ತಿ ಚಾಲಿತ ಗ್ರಾಮವೆಂದು ಘೋಷಿಸಿದರು.

ಮೊಧೇರಾ ಸೂರ್ಯ ದೇವಾಲಯಕ್ಕೆ ಹೆಸರುವಾಸಿಯಾಗಿದೆ, ಈಗ ಅದನ್ನು ಸೌರಶಕ್ತಿ ಚಾಲಿತ ಗ್ರಾಮ ಎಂದೂ ಕರೆಯಲಾಗುವುದು ಎಂದು ಮೋದಿ ಹೇಳಿದರು. ಮೊಧೇರಾವನ್ನು ದೇಶದ ಮೊದಲ ಸುತ್ತಿನ ಸೌರಶಕ್ತಿ ಚಾಲಿತ ಗ್ರಾಮವನ್ನಾಗಿ ಮಾಡುವ ಮೂಲಕ ಸೌರ ವಿದ್ಯುತ್ ಸ್ಥಾವರ ಮತ್ತು ವಸತಿ ಮತ್ತು ಸರಕಾರಿ ಕಟ್ಟಡಗಳ ಮೇಲೆ 1,300 ಕ್ಕೂ ಹೆಚ್ಚು ಛಾವಣಿಯ ಸೌರ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸರಕಾರದ ಪ್ರಕಟಣೆ ತಿಳಿಸಿದೆ.

ಇಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ”ಕಳೆದ ಎರಡು ದಶಕಗಳಿಂದ ನನ್ನ ಜಾತಿಯನ್ನು ನೋಡದೆ, ನನ್ನ ರಾಜಕೀಯ ಹಿನ್ನೆಲೆಯನ್ನು ನೋಡದೆ ಗುಜರಾತ್‌ನ ಜನರು ನನಗೆ ಆಶೀರ್ವಾದ ಮಾಡಿದ್ದಾರೆ ಎಂದರು.

ಮೋದಿ ಅವರು ತಮ್ಮ ಭೇಟಿಯ ವೇಳೆ 14,600 ಕೋಟಿ ರೂ.ಗೂ ಅಧಿಕ ಮೊತ್ತದ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

Advertisement

ಪ್ರಧಾನಿಯಾಗುವ ಮೊದಲು, ಮೋದಿ ಅವರು 2001 ಮತ್ತು 2014 ರ ನಡುವೆ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದರು.  ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆಗಳು ಶೀಘ್ರದಲ್ಲೇ ನಡೆಯಲಿವೆ. ಪ್ರಧಾನಿ ಮೋದಿಯವರ ತವರು ರಾಜ್ಯದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವ ಗುರಿ ಹೊಂದಿರುವ ಆಡಳಿತಾರೂಢ ಬಿಜೆಪಿಗೆ ಚುನಾವಣೆಗಳು ನಿರ್ಣಾಯಕವಾಗಿದ್ದು, ರಾಜ್ಯದಲ್ಲಿ 27 ವರ್ಷಗಳ ಕಾಲ ಅಧಿಕಾರದಿಂದ ದೂರ ಉಳಿದಿರುವ ಕಾಂಗ್ರೆಸ್ ಗೆಲುವಿನ ಪ್ರಯತ್ನದಲ್ಲಿದ್ದು, ಆಪ್ ಕೂಡ ಹೋರಾಟ ಸಂಘಟಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next